ಪ್ರತಿ ವರ್ಷ ಜನವರಿ 24 ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಆಚರಿಸುತ್ತೇವೆ. ಈ ಹಿನ್ನೆಲೆಯಲ್ಲಿ ನಮ್ಮ ಕಣ್ಣ ಮುಂದೆ ಹಲವು ಆದರ್ಶ ಸ್ತ್ರೀಯರಿದ್ದಾರೆ. ಅದಕ್ಕೆ ಮತ್ತೊಂದು ಸೇರ್ಪಡೆ ಪರಿಸರವಾದಿ ಪದ್ಮಶ್ರೀ ಸಾಲುಮರದ ತಿಮ್ಮಕ್ಕ.
ಇವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರು. ತಾಯಿ ವಿಜಯಮ್ಮ, ಪತಿ ಬಿಕ್ಕಲ ಚಿಕ್ಕಯ್ಯ. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದವರು. ಮೊದಲು ದನಕರುಗಳನ್ನು ಮೇಯಿಸುತ್ತಿದ್ದರು, ತಿಮ್ಮಕ್ಕ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.
ಈ ದಂಪತಿಗೆ ಮಕ್ಕಳಾಗಲಿಲ್ಲ. ಆದರೆ ಆ ಬಗ್ಗೆ ಚಿಂತಿಸದೇ ರಸ್ತೆ ಬದಿಯಲ್ಲಿ ಮರಗಳನ್ನು ನೆಡಲು ಪ್ರಾರಂಭಿಸಿದ್ದರು. 4 ಕಿ.ಮೀ. ಉದ್ದಗಲಕ್ಕೂ ತಮ್ಮ ಸ್ವಂತ ಖರ್ಚಿನಲ್ಲಿ ಸುಮಾರು 8,000 ಗಿಡಗಳನ್ನು ನೆಟ್ಟರು. ಈ ಸಾಧನೆ “ಸಾಲುಮರದ ತಿಮ್ಮಕ್ಕ” ಎಂಬ ಬಿರುದಾಂಕಿತದ ಗರಿ ಮುಡಿಗೇರಿಸಿತು. ಭಾರತ ಸರ್ಕಾರ 2019 ರಲ್ಲಿ “ಪದ್ಮಶ್ರೀ” ಪ್ರಶಸ್ತಿಯನ್ನು ಕೊಟ್ಟ ಗೌರವಿಸಿತು. ಮಕ್ಕಳಿಲ್ಲ ಎಂಬ ಕಾರಣಕ್ಕೆ ಉಮೇಶ್ ಬಿ ಎನ್ ಅವರನ್ನು ದತ್ತು ಪುತ್ರನಾಗಿ ಸ್ವೀಕರಿಸಿದ್ದರು.
ತಿಮ್ಮಕ್ಕ ಇಂದು ಸಾಲುಮರದ ಸಾಧಕಿ. ಸಮಾಜ ಎಂದೆಂದಿಗೂ ನೆನಪಿಡುವ ಪರಿಸರ ಬೆಳವಣಿಗೆಯ ಮಾದರಿ. ಶತಾಯುಷ್ಯವನ್ನು ಪಡೆದ ಮಹಾ ತಾಯಿ. 109 ನೇ ವರ್ಷದ ವಸಂತದಲ್ಲಿಯೂ ಲವಲವಿಕೆಯಿಂದ ಓಡಾಡುತ್ತಿದ್ದಾರೆ.. “ಸಾಲುಮರದ ತಿಮ್ಮಕ್ಕ ನಿನಾಗಬಾರದೆ ನನ್ನಕ್ಕ” ಎಂಬ ಗಾದೆ ಜನಪ್ರಿಯವಾಗಿದೆ. ಸಮಾಜದ ಏಳಿಗೆಯಲ್ಲಿ ಮಹಿಳೆಯ ಪಾತ್ರ ಬಹು ಮುಖ್ಯವಾದದ್ದು. ಹೆಣ್ಣನ್ನು ಗೌರವದಿಂದ ನೋಡಿ. ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಿ, ಛಲಗಾರ್ತಿಯ ಆಸೆಗೊಂದು ಆಸನದ ಅವಕಾಶ ಕೊಡಿ.
*ಗಾಯತ್ರಿ ಮಾಲಿಪಾಟೀಲ್ ಸಿಂಧನೂರು