Advertisement

ಅಪ್ಪು ಭಾವಚಿತ್ರದ ಎದುರು ಶಾಂಪೇನ್ :’ಏಕ್ ಲವ್ ಯಾ’ತಂಡದ ವಿರುದ್ಧ ಸಾ.ರಾ.ಗೋವಿಂದು ಕಿಡಿ

11:39 AM Nov 13, 2021 | Team Udayavani |

ಬೆಂಗಳೂರು : ಇತ್ತೀಚೆಗೆ ನಮ್ಮನ್ನಗಲಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರದ ಎದುರು ಶಾಂಪೇನ್ ಹಾರಿಸಿ ಸಂಭ್ರಮಿಸಿದ ‘ಏಕ್ ಲವ್ ಯಾ’ ಚಿತ್ರ ತಂಡದ ವಿರುದ್ಧ ಸಾ.ರಾ. ಗೋವಿಂದು ಕಿಡಿ ಕಾರಿದ್ದಾರೆ.

Advertisement

ಚಿತ್ರದ ಹಾಡೊಂದರ ಬಿಡುಗಡೆ ಕಾರ್ಯಕ್ರಮದಲ್ಲಿ, ಪುನೀತ್ ಅವರ ಭಾವ ಚಿತ್ರ ಇರಿಸಿ ಚಿತ್ರ ತಂಡ ಗೌರವ ಸಲ್ಲಿಸಿತ್ತು. ಆ ಬಳಿಕ ಭಾವಚಿತ್ರದ ಎದುರೇ ಶಾಂಪೇನ್ ಹಾರಿಸಿ ಸಂಭ್ರಮಿಸಿತ್ತು. ಈ ಬಗ್ಗೆ ಸಾ.ರಾ.ಗೋವಿಂದು ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.

‘ಏಕ್ ಲವ್ ಯಾ’ ಚಿತ್ರವನ್ನು ಜೋಗಿ ಪ್ರೇಮ್ ಅವರು ನಿರ್ದೇಶನ ಮಾಡಿದ್ದು, ರಕ್ಷಿತಾ ಅವರ ಸಹೋದರ ರಾಣಾ ಅವರು ನಾಯಕನಾಗಿದ್ದಾರೆ. ರಚಿತಾ ರಾಮ್ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ‘ಎಣ್ಣೆಗೂ ಹೆಣ್ಣಿಗೂ ಏನು ಸಂಬಂಧ’ ಎಂಬ ಹಾಡು ಈಗಾಗಲೇ ಸಡ್ಡು ಮಾಡುತ್ತಿದೆ. ಮಂಗ್ಲಿ ಹಾಗು ಕೈಲಾಶ್ ಖೇರ್ ಅವರು ಹಾಡಿರುವ ಗೀತೆಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next