Advertisement
ಪಂದ್ಯ ರದ್ದಾದುದು ಶ್ರೀಲಂಕಾದ ಮುಂದಿನ ಹಂತ ಪ್ರವೇಶದ ಸಾಧ್ಯತೆಗಳನ್ನು ಸಂಪೂರ್ಣವಾಗಿ ಕುಗ್ಗಿಸಿದೆ, ತಂಡ ಸರಣಿಯಿಂದ ಹೊರ ಬೀಳುವ ಅಂಚಿನಲ್ಲಿ ಇದೆ.
ಗ್ರೂಪ್ ಬಿ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡ ನಮೀಬಿಯಾ ವಿರುದ್ಧ 9 ವಿಕೆಟ್ ಭರ್ಜರಿ ಜಯ ಸಾಧಿಸಿ 3 ರಲ್ಲಿ 3 ಪಂದ್ಯಗಳನ್ನು ಗೆದ್ದು ಅಜೇಯವಾಗಿ ಸೂಪರ್ 8 ಹಂತಕ್ಕೆ ಪ್ರವೇಶಿಸಿದೆ. ನಮೀಬಿಯಾ 17 ಓವರ್ ಗಳಲ್ಲಿ 72ಕ್ಕೆ ಆಲೌಟಾದರೆ, ಗುರಿ ಬೆನ್ನಟ್ಟಿದ ಆಸೀಸ್ 5.4 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 74 ರನ್ ಗಳಿಸಿ ಸುಲಭ ಜಯ ತನ್ನದಾಗಿಸಿಕೊಂಡಿತು. ನಮೀಬಿಯಾ ಸರಣಿಯಿಂದ ಹೊರ ಬಿದ್ದಿತು.
Related Articles
Advertisement
ಮಂಗಳವಾರ ನಡೆದ ಎ ಗುಂಪಿನ ಗೆಲ್ಲಲೇಬೇಕಾದ ಪಂದ್ಯದಲ್ಲಿ ಪಾಕಿಸ್ಥಾನ ತಂಡವು ಕೆನಡಾ ವಿರುದ್ಧ ಏಳು ವಿಕೆಟ್‌ಗಳ ಜಯ ಸಾಧಿಸಿದೆ.
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೆನಡಾ ಆರನ್ ಜಾನ್ಸನ್ 52 ರನ್ ಗಳಿಸಿದರೂ ಪಾಕಿಸ್ಥಾನ ಏಳು ವಿಕೆಟ್‌ಗೆ ಸಾಧಾರಣ 106 ಕ್ಕೆ ನಿರ್ಬಂಧಿಸಿತು. ಇತರ ಬ್ಯಾಟ್ಸ್ ಮ್ಯಾನ್ ಗಳು ಪ್ರಭಾವ ಬೀರಲು ವಿಫಲರಾದರು.ಪಾಕ್ ಪರ ಮೊಹಮ್ಮದ್ ಅಮೀರ್ ಮತ್ತು ಹ್ಯಾರಿಸ್ ರೌಫ್ ತಲಾ ಎರಡು ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ಪಾಕಿಸ್ಥಾನ ಮೊಹಮ್ಮದ್ ರಿಜ್ವಾನ್ ಅವರ ಅಜೇಯ 53 ಮತ್ತು ನಾಯಕ ಬಾಬರ್ ಅಜಮ್ ಅವರ 33 ರನ್ ಕೊಡುಗೆಯಿಂದ 17.3 ಓವರ್‌ಗಳಲ್ಲಿ ಜಯ ಸಾಧಿಸಿತು. ಕೆನಡಾ ಪರ ದಿಲೋನ್ ಹೆಲಿಗರ್ 2 ವಿಕೆಟ್ ಪಡೆದರು.
ಪಾಕ್ ಹೇಗೆ ಮುಂದಿನ ಹಂತಕ್ಕೇರಬಹುದು?
ಮುಂದಿನ ಹಂತಕ್ಕೇರಲು ಪಾಕಿಸ್ಥಾನ ತಂಡವು ಉಳಿದ ಪಂದ್ಯವನ್ನು ಗೆಲ್ಲಲೇಬೇಕು. ಜೂನ್ 16 ರಂದು ಐರ್ಲೆಂಡ್ ವಿರುದ್ದ ಪಾಕ್ ಆಡಲಿದೆ. ಅಷ್ಟೇ ಅಲ್ಲದೆ ಯುಎಸ್ಎ ಮತ್ತು ಕೆನಡಾ ತಂಡಗಳು ಗುಂಪು ಹಂತದಲ್ಲಿ ಉಳಿದ ಪಂದ್ಯದ ಫಲಿತಾಂಶವೂ ನಿರ್ಣಾಯಕವಾಗಲಿದೆ. ಸೂಪರ್ 8 ಪ್ರವೇಶದ ತವಕದಲ್ಲಿರುವ ಯುಎಸ್ಎ ತಂಡಕ್ಕಿಂತ ಹೆಚ್ಚು ರನ್ ರೇಟ್ ಪಡೆದರೆ ಪಾಕ್ ಮುಂದಿನ ಹಂತಕ್ಕೆ ಅವಕಾಶ ಪಡೆಯಬಹುದು. ಯುಎಸ್ಎ ತಂಡ ಭಾರತ ಮತ್ತು ಐರ್ಲೆಂಡ್ ವಿರುದ್ದ ಭಾರೀ ಅಂತರದ ಸೋಲು ಅನುಭವಿಸಿದರೆ ಪಾಕ್ ಗೆ ಲಕ್ ಒಲಿಯಬಹುದು.