Advertisement

ಬಾಂಗ್ಲಾ ಟೈಗರ್ ತಂಡಕ್ಕೆ ಭಾರತ ತಂಡದ ಮಾಜಿ ವೇಗಿ ಶ್ರೀಶಾಂತ್‌ ಮೆಂಟರ್‌

12:02 AM Aug 27, 2022 | Team Udayavani |

ಢಾಕಾ: ಭಾರತ ತಂಡದ ಮಾಜಿ ವೇಗಿ ಎಸ್‌. ಶ್ರೀಶಾಂತ್‌ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದಾರೆ.

Advertisement

ಅಬುಧಾಬಿ ಟಿ10 ಕ್ರಿಕೆಟ್‌ ಲೀಗ್‌ನಲ್ಲಿ ಅವರು ಬಾಂಗ್ಲಾ ಟೈಗರ್ ತಂಡದ ಮೆಂಟರ್‌ ಆಗಿ ಕರ್ತವ್ಯ ನಿಭಾಯಿಸಲಿದ್ದಾರೆ.

ಬಾಂಗ್ಲಾದೇಶದ ಈ ತಂಡಕ್ಕೆ ಇಲ್ಲಿನ ಮಾಜಿ ಆಲ್‌ರೌಂಡರ್‌ ಅಫ್ತಾಬ್‌ ಅಹ್ಮದ್‌ ಪ್ರಧಾನ ಕೋಚ್‌, ನಜ್ಮುಲ್‌ ಅಬೆದಿನ್‌ ಫಾಹಿಮ್‌ ಸಹಾಯಕ ಕೋಚ್‌ ಆಗಿರುವರು.

ಶಕಿಬ್‌ ಅಲ್‌ ಹಸನ್‌ ನಮ್ಮ ಐಕಾನಿಕ್‌ ಆಟಗಾರನಾಗಿದ್ದಾರೆ ಎಂಬುದಾಗಿ ಬಾಂಗ್ಲಾ ತಂಡದ ಮಾಲಕ ಮೊಹಮ್ಮದ್‌ ಯಾಸಿನ್‌ ಚೌಧರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next