Advertisement

ಜಗತ್ತಿನ ಜೀವ ಉಳಿಸಿದ ಭಾರತ

12:29 AM Mar 05, 2021 | Team Udayavani |

ಹೊಸದಿಲ್ಲಿ: ಜಗತ್ತಿನೆಲ್ಲೆಡೆ ಕೋವಿಡ್ ಸೋಂಕಿಗೆ ಭಾರತದ ಲಸಿಕೆಯೇ ಈಗ ಜೀವರಕ್ಷಕ! ನೆರೆಯ ಬಾಂಗ್ಲಾದೇಶಕ್ಕೆ ಭಾರತ 90 ಲಕ್ಷ ಲಸಿಕೆ ಡೋಸ್‌ಗಳನ್ನು ಕಳುಹಿಸಿಕೊಟ್ಟಿರುವ ಬಗ್ಗೆ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಶುಕ್ರವಾರ ದೃಢಪಡಿಸಿದ್ದಾರೆ.

Advertisement

ಢಾಕಾ ಪ್ರವಾಸದಲ್ಲಿರುವ ಸಚಿವ, “ಸೀರಮ್‌ ಸಂಸ್ಥೆಯ ಕೊವಿಶೀಲ್ಡ್‌ ಲಸಿಕೆಗಳನ್ನು ಬೃಹತ್‌ ಪ್ರಮಾಣದಲ್ಲಿ ಬಾಂಗ್ಲಾದೇಶಕ್ಕೆ ನೀಡಲಾಗಿದೆ. ವಿಶ್ವದ ಬೇರೆಲ್ಲ ರಾಷ್ಟ್ರಕ್ಕಿಂತ ಹೆಚ್ಚಾಗಿ ಭಾರತ, ಬಾಂಗ್ಲಾಕ್ಕೆ ಲಸಿಕೆ ರವಾನಿಸಿದೆ’ ಎಂದಿದ್ದಾರೆ.

ಜಿಂಬಾಬ್ವೆ: ಭಾರತ್‌ ಬಯೋಟೆಕ್‌ ಸಿದ್ಧಪಡಿಸಿರುವ ಕೊವ್ಯಾಕ್ಸಿನ್‌ ಲಸಿಕೆಯನ್ನು ತನ್ನ ಪ್ರಜೆಗಳಿಗೆ ಅಧಿಕೃತವಾಗಿ ನೀಡಲು ಜಿಂಬಾಬ್ವೆ ಸರಕಾರ‌ ಒಪ್ಪಿಗೆ ನೀಡಿದೆ. ಈ ಮೂಲಕ ಜಿಂಬಾಬ್ವೆ, ಲಸಿಕೆ ಆರಂಭಿಸಿದ ಆಫ್ರಿಕದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತ ಈ ಬಡರಾಷ್ಟ್ರಕ್ಕೆ 75 ಸಾವಿರ ಲಸಿಕೆ ಡೋಸ್‌ಗಳನ್ನು ಉಚಿತವಾಗಿ ನೀಡಿತ್ತು.

ಕಾಂಬೋಡಿಯಾ: ಚೀನೀ ಲಸಿಕೆ ಅವಲಂಬಿಸಿದ್ದ ಕಾಂಬೋಡಿಯಾದಲ್ಲಿ ಭಾರತದ ಲಸಿಕೆಯೇ ವಿಶ್ವಾಸಾರ್ಹ ಎನ್ನಿಸಿಕೊಂಡಿದೆ. ಸ್ವತಃ ಪ್ರಧಾನಿ ಹುನ್‌ ಸೇನ್‌ ಗುರುವಾರ ಕೊವಿಶೀಲ್ಡ್‌ನ ಮೊದಲ ಡೋಸ್‌ ಸ್ವೀಕರಿಸಿದ್ದಾರೆ.

ಕೆನಡಾ: ಭಾರತದ ಸೀರಮ್‌ ಸಂಸ್ಥೆಯಿಂದ ಕೆನಡಾ ಹೆಚ್ಚುವರಿಯಾಗಿ 5 ಲಕ್ಷ ಕೊವಿಶೀಲ್ಡ್‌ ಡೋಸ್‌ಗಳನ್ನು ಖರೀದಿಸಿದೆ. ಈ ಹಿಂದೆ 15 ಲಕ್ಷ ಡೋಸ್‌ಗಳನ್ನು ಖರೀದಿಸಿತ್ತು. ಲಸಿಕೆ ಅಭಾವ ತಪ್ಪಿಸಲು 1 ಮತ್ತು 2ನೇ ಡೋಸ್‌ಗಳ ನಡುವೆ 4 ತಿಂಗಳ ಅಂತರ ನೀಡಲು ಸರಕಾರ‌ ನಿರ್ಧರಿಸಿದೆ.

Advertisement

ಭಾರತದ ಲಸಿಕೆ ಗಿಫ್ಟ್: ಬಾಂಗ್ಲಾದೇಶ, ಮ್ಯಾನ್ಮಾರ್‌, ನೇಪಾಲ, ಭೂತಾನ್‌, ಮಾಲ್ಡೀವ್ಸ್‌, ಮಾರಿಷಸ್‌, ಸೆಷೆಲ್ಸ್‌, ಶ್ರೀಲಂಕಾ, ಬಹ್ರೈನ್‌, ಒಮನ್‌, ಆಫ್ಘಾನಿಸ್ಥಾನ, ಬಾರ್ಬಡಾಸ್‌, ಡೊಮಿನಿಕಾ, ಜಿಂಬಾಬ್ವೆಗೆ ಭಾರತ ಉಚಿತ ಲಸಿಕೆ ರವಾನಿಸಿದೆ.

ಮಾಜಿ ಪ್ರಧಾನಿಗೆ ಲಸಿಕೆ :

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಮತ್ತು ಅವರ ಪತ್ನಿ ಗುರುಶರಣ್‌ ಕೌರ್‌ ಹೊಸದಿಲ್ಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಲಸಿಕೆಯ ಮೊದಲ ಡೋಸ್‌ ಪಡೆದಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ದಿಲ್ಲಿ  ಸಿಎಂ ಅರವಿಂದ ಕೇಜ್ರಿವಾಲ್‌ ಮತ್ತು ಕುಟುಂಬ, ಇತ್ತ  ಮುಂಬಯಿಯಲ್ಲಿ ಬಾಲಿವುಡ್‌ ನಟ ಹೃತಿಕ್‌ ರೋಷನ್‌ ಅವರ ತಂದೆ-ತಾಯಿ ವ್ಯಾಕ್ಸಿನ್‌ ಪಡೆದುಕೊಂಡಿದ್ದಾರೆ.

ತಿಂಗಳ ಬಳಿಕ ಹೆಚ್ಚು ಕೇಸ್‌ :

ಒಂದು ತಿಂಗಳ ಬಳಿಕ ಭಾರತದಲ್ಲಿ ಇದೇ ಮೊದಲ ಬಾರಿಗೆ ಪಾಸಿಟಿವ್‌ ಪ್ರಕರಣಗಳು 17 ಸಾವಿರಕ್ಕಿಂತ ಹೆಚ್ಚು ವರದಿಯಾಗಿವೆ. ಗುರುವಾರ ಒಂದೇ ದಿನ 17,407 ಮಂದಿಗೆ ಕೊರೊನಾ ದೃಢಪಟ್ಟಿದ್ದು, 89 ಮಂದಿ ಸಾವಿಗೀಡಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next