ನವದೆಹಲಿ: ಕತಾರ್ ನ್ಯಾಯಾಲಯದಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಎಂಟು ಭಾರತೀಯರನ್ನು ರಕ್ಷಣೆ ಮಾಡಲು ಎಲ್ಲ ಪ್ರಯತ್ನ ನಡೆಸಲಾಗುವುದು ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಭರವಸೆ ನೀಡಿದ್ದಾರೆ.
ಕಳೆದ ವರ್ಷ ಕತಾರ್‌ನಲ್ಲಿ ಬಂಧಿತರಾಗಿದ್ದ ಎಂಟು ಮಾಜಿ ನೌಕಾಪಡೆ ಅಧಿಕಾರಿಗಳಿಗೆ ಕತಾರ್ ನ್ಯಾಯಾಲಯವು ಮರಣದಂಡನೆ ವಿಧಿಸಿದೆ. ಕತಾರ್ ನ್ಯಾಯಾಲಯದ ಈ ತೀರ್ಪಿನಿಂದ ಭಾರತ ಸರ್ಕಾರ ಆಶ್ಚರ್ಯಗೊಂಡಿದ್ದು, ಈ ಶಿಕ್ಷೆಗೆ ತಡೆ ನೀಡಲು ಭಾರತ ಸರಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಿದೆ.
ಈ ಘಟನೆಯ ಮುಂದುವರೆದ ಭಾಗವಾಗಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಸೋಮವಾರ ಮಾಜಿ ನೌಕಾಪಡೆ ಅಧಿಕಾರಿಗಳ ಕುಟುಂಬವನ್ನು ಭೇಟಿಯಾಗುವ ಕುರಿತು ಟ್ವೀಟ್ ಮಾಡಿದ್ದಾರೆ ಅದರಂತೆ ಇಂದು(ಸೋಮವಾರ) ಬೆಳಗ್ಗೆ ಕತಾರ್‌ನಲ್ಲಿ ಬಂಧಿತರಾಗಿರುವ 8 ಮಾಜಿ ನೌಕಾ ಅಧಿಕಾರಿಗಳ ಕುಟುಂಬಗಳನ್ನು ಭೇಟಿ ಮಾಡಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾನೆ ಅಲ್ಲದೆ ಮರಣದಂಡನೆ ಶಿಕ್ಷೆಯಿಂದ ಅವರನ್ನು ತಪ್ಪಿಸುವ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದು ಈ ನಿಟ್ಟಿನಲ್ಲಿ ಕುಟುಂಬಗಳೊಂದಿಗೆ ಸರ್ಕಾರ ನಿಕಟವಾಗಿ ಸಮನ್ವಯ ಸಾಧಿಸುತ್ತದೆ ಎಂದು ಅವರು ಹೇಳಿದರು.
ಖಾಸಗಿ ಕಂಪನಿ ಅಲ್ ದಹ್ರಾ ಜೊತೆ ಕೆಲಸ ಮಾಡುತ್ತಿದ್ದ ಭಾರತೀಯ ಪ್ರಜೆಗಳನ್ನು ಕಳೆದ ವರ್ಷ ಆಗಸ್ಟ್ 30, 2022 ರಂದು ಬೇಹುಗಾರಿಕೆ ಆರೋಪದಡಿಯಲ್ಲಿ ಬಂಧಿಸಲಾಗಿತ್ತು. ಇದೀಗ ಕತಾರ್ ನ್ಯಾಯಾಲಯ ಮರಣದಂಡನೆ ಶಿಕ್ಷೆ ನೀಡಿ ತೀರ್ಪು ನೀಡಿತ್ತು.
ಇದನ್ನೂ ಓದಿ: Tollywood: ‘ಲಿಯೋʼ ಅದ್ದೂರಿ ಸಕ್ಸಸ್ ಮೀಟ್; ಪೊಲೀಸರ ಅನುಮತಿಗಾಗಿ ಕಾಯುತ್ತಿದೆ ಚಿತ್ರತಂಡ