Advertisement

ನೀರಾವರಿ ತಜ್ಞ ಎಸ್‌.ಜಿ‌.ಬಾಳೆಕುಂದ್ರಿ ರಾಜ್ಯದ ಆಸ್ತಿಯಾಗಿದ್ದರು: ರಾಕೇಶ್ ಸಿಂಗ್

11:54 AM May 05, 2022 | Team Udayavani |

ಬೆಂಗಳೂರು: ತಮ್ಮ ಅಪಾರ ಬುದ್ಧಿಮತ್ತೆ, ದಕ್ಷತೆ, ಪರಿಶ್ರಮ ಮತ್ತು ಪ್ರಾಮಾಣಿಕ ಸೇವೆಗಳಿಂದ ನೀರಾವರಿ ತಜ್ಞ ಎಸ್‌. ಜಿ‌. ಬಾಳೆಕುಂದ್ರಿ ಅವರು ಕರ್ನಾಟಕ ರಾಜ್ಯದ ಆಸ್ತಿಯಾಗಿದ್ದರು ಎಂದು ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರು ಹೇಳಿದರು.

Advertisement

ಎಸ್‌. ಜಿ‌. ಬಾಳೆಕುಂದ್ರಿ ಜನ್ಮಜಯಂತಿ ಪ್ರಯುಕ್ತ ನಗರದ ಕ್ವೀನ್ಸ್ ವೃತ್ತದಲ್ಲಿರುವ ಎಸ್‌. ಜಿ‌. ಬಾಳೆಕುಂದ್ರಿ ಅವರ ಪ್ರತಿಮೆಗೆ ಪುಷ್ಪನಮನ‌ ಸಲ್ಲಿಸಿ ಮಾತನಾಡಿದ ಅವರು ಘಟಪ್ರಭಾ, ಮಲಪ್ರಭಾ ಮತ್ತು ಕೃಷ್ಣ ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ಎಸ್‌. ಜಿ‌. ಬಾಳೆಕುಂದ್ರಿ ಅವರು ಮಹತ್ವದ ಪಾತ್ರ ವಹಿಸಿದ್ದರು ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾದ ನೀರಾವರಿ ತಜ್ಞರಾಗಿದ್ದರು ಎಂದು ಸ್ಮರಿಸಿದರು.

ಜಲಸಂಪನ್ಮೂಲ ಇಲಾಖೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಮಲಾ ಬಾಳೆಕುಂದ್ರಿ, ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ, ಕರ್ನಾಟಕ ನೀರಾವರಿ ನಿಗಮದ ಎಂಡಿ ಮಲ್ಲಿಕಾರ್ಜುನ ಗುಂಗೆ, ವಿಶ್ವೇಶ್ವರಯ್ಯ ಜಲನಿಗಮದ ಯತೀಶ್ ಚಂದ್ರ ಮೊದಲಾದ ಗಣ್ಯರು ಮತ್ತು ಇಲಾಖೆಯ ಇಂಜಿನಿಯರ್ ಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next