ಕಾಪು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇತ್ತೀಚೆಗೆ ಸಂಭವಿಸಿದ ಟಗ್ ದುರಂತ ಮತ್ತು ಆಗಾಗ ಆಳ ಸಮುದ್ರದಲ್ಲಿ ಸಂಭವಿಸುವ ಮೀನುಗಾರಿಕಾ ದೋಣಿಗಳ ಅಪಘಾತಗಳ ಹಿನ್ನೆಲೆಯಲ್ಲಿ ಯಾವುದೇ ಸಂದರ್ಭ ತುರ್ತಾಗಿ ಕಾರ್ಯಾಚರಣೆ ನಡೆಸುವ ಉದ್ದೇಶದಿಂದ ತುರ್ತು ಕಾರ್ಯಪಡೆ ರಚಿಸುವ ಚಿಂತನೆ ಇದೆ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಹೇಳಿದರು.
ಅವರು ಇಲ್ಲಿನ ಮಟ್ಟು, ಕೈಪುಂಜಾಲು, ಪೊಲಿಪು, ಕಾಪು ಲೈಟ್ ಹೌಸ್ ಪ್ರದೇಶ, ಮೂಳೂರು, ಪಡುಬಿದ್ರಿ, ಕಾಡಿಪಟ್ಣ ಮತ್ತು ನಡಿಪಟ್ಣ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿ ತೌಖೆ¤àಯಿಂದ ಆದ ಹಾನಿಯನ್ನು ಪರಿಶೀಲಿಸಿದರಲ್ಲದೆ, ಮೀನುಗಾರರ ವಿವಿಧ ಸಮಸ್ಯೆಗಳನ್ನು ಆಲಿಸಿದರು.
ಟಗ್ ದುರಂತದಿಂದ ಆಗಿರುವ ಸಮಸ್ಯೆಗಳ ಕುರಿತು ಸಚಿವರಲ್ಲಿ ಪ್ರಶ್ನಿಸಿದಾಗ ಸಮುದ್ರದಲ್ಲಿ ಸಂಭವಿಸುವ ದುರಂತಗಳನ್ನು ಎದುರಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಕರಾವಳಿಯ ಮೂವರು ಜಿಲ್ಲಾಧಿಕಾರಿಗಳು ಮತ್ತು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದರು.
ಮತ್ಸ್ಯ ಸಂಪದ ಜಾರಿಗೆ ಪ್ರಯತ್ನ
ಮತ್ಸ್ಯಸಂಪದ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಬಗ್ಗೆ ಚರ್ಚಿಸಲಾಗುತ್ತಿದ್ದು ವಾರಾಂತ್ಯ ಬೆಂಗಳೂರಿನಲ್ಲಿ ಅಧಿಕಾರಿಗಳೊಂದಿಗೆ ಎರಡನೇ ಸುತ್ತಿನ ಸಭೆ ನಡೆಸಲು ನಿರ್ಧರಿಸಲಾಗಿ ಎಂದು ಅಂಗಾರ ಹೇಳಿದರು.
ಶಾಶ್ವತ ತಡೆಗೋಡೆಕಾಪು ಕ್ಷೇತ್ರದಲ್ಲಿ ಚಂಡಮಾರುತ ಮತ್ತು ಕಡಲ್ಕೊರೆತದಿಂದ ಆಗಿರುವ ಹಾನಿಯ ಕುರಿತು ಸರಕಾರ ಮತ್ತು ಸಚಿವರಿಗೆ ಮನವಿ ನೀಡಲಾಗಿದೆ. ಕಡಲ್ಕೊರೆತ ತಡೆಗೆ ಶಾಶ್ವತ ತಡೆಗೋಡೆ ರಚನೆ ಸೇರಿದಂತೆ ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಶಾಸಕ ಲಾಲಾಜಿ ಆರ್. ಮೆಂಡನ್ ಮನವಿ ಮಾಡಿದರು.