Advertisement
ಈಗಾಗಲೇ ಫ್ರಾನ್ಸ್‌ನಿಂದ ಖರೀದಿಸಲಾಗಿರುವ ರಫೇಲ್ ಯುದ್ಧ ವಿಮಾನಗಳನ್ನು ಚೀನಾ ಗಡಿಗುಂಟ ನಿಯೋಜಿಸಲಾಗಿದೆ. ಇದೀಗ ಎಸ್-400 ಕ್ಷಿಪಣಿ ರಕ್ಷಣೆ ವ್ಯವಸ್ಥೆ ಲಭ್ಯವಾಗುತ್ತಿರುವುದರಿಂದ ಭಾರತೀಯ ವಾಯುಪಡೆ (ಐಎಎಫ್)ಗೆ ಮತ್ತಷ್ಟು ಬಲಬರಲಿದೆ. ಚೀನಾ ವಿಚಾರಕ್ಕೆ ಬರುವುದಾದರೆ, ಆ ದೇಶವೂ ಕೂಡ ಇದೇ ಮಾದರಿಯ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಹೊಂದಿದೆ. ಆ ಪೈಕಿ ಎರಡನ್ನು ಅರುಣಾಚಲ ಪ್ರದೇಶಕ್ಕೆ ಹೊಂದಿಕೊಂಡಿರುವ ಟಿಬೆಟ್‌ನ ನಗ್ರಿ ಗರ್ ಗುನ್ಸಾ ಮತ್ತು ನಿಂಗಿc ವಾಯುನೆಲೆಯಲ್ಲಿ ನಿಯೋಜಿಸಿದೆ.
ರಷ್ಯಾ ಜತೆಗೆ 35 ಸಾವಿರ ಕೋಟಿ ರೂ. ವೆಚ್ಚದಲ್ಲಿ ಒಪ್ಪಂದ ಮಾಡಿಕೊಂಡು ಖರೀದಿಸಲಾಗುತ್ತಿರುವ ಎಸ್-400 ಎಸ್-400 ಟ್ರೈಂಫ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ದೇಶದ ಪಶ್ಚಿಮ ಭಾಗದಲ್ಲಿ ನಿಯೋಜಿಸಲಾಗುತ್ತದೆ. ಅಲ್ಲಿ ನಿಯೋಜಿಸಿದರೆ, ಚೀನಾ ಮತ್ತು ಪಾಕಿಸ್ತಾನಗಳಿಂದ ಉಂಟಾಗಬಹುದಾದ ಸಂಭಾವ್ಯ ಬೆದರಿಕೆಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿದೆ. ಒಟ್ಟು ಐದು ಸ್ಕ್ವಾಡ್ರನ್‌ಗಳಷ್ಟು ಕ್ಷಿಪಣಿಗಳು ದೇಶಕ್ಕೆ ಸಿಗಲಿವೆ. ಪುಟಿನ್ ಭೇಟಿ:
ಮುಂದಿನ ತಿಂಗಳ ಎರಡನೇ ವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನವದೆಹಲಿಗೆ ಆಗಮಿಸಲಿರುವಂತೆಯೇ ಕ್ಷಿಪಣಿ ದೇಶಕ್ಕೆ ಆಗಮಿಸಲಾರಂಭಿಸಿದೆ. ಪ್ರವಾಸದ ವೇಳೆ ಪುಟಿನ್ ಎಸ್-400 ಎಸ್-400 ಟ್ರೈಂಫ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಅಧಿಕೃತವಾಗಿ ಹಸ್ತಾಂತರಿಸಲಿದ್ದಾರೆ. ಅವರ ಪ್ರವಾಸದಲ್ಲಿಯೇ ಭಾರತ ಮತ್ತು ರಷ್ಯಾ ನಡುವೆ ಜನವರಿಯಲ್ಲಿ ನಡೆಯಲಿರುವ 2 ದೇಶಗಳ ಮೊದಲ 2+2 ಮಾತುಕತೆಗೂ ವೇದಿಕೆ ನಿರ್ಮಾಣವಾಗಲಿದೆ.
Related Articles
Advertisement
ಏನಿದು ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ?– ನಾಲ್ಕು ವಿವಿಧ ರೀತಿಯ ಕ್ಷಿಪಣಿಗಳನ್ನು ಹೊಂದಿರುತ್ತವೆ.
– ಶತ್ರುವಿನ ಯುದ್ಧ ವಿಮಾನ (400 ಕಿಮೀ), ಖಂಡಾಂತರ ಕ್ಷಿಪಣಿ (250 ಕಿಮೀ), ಏರ್‌ಬಾರ್ನ್ ವಾರ್ನಿಂಗ್ ಆ್ಯಂಡ್ ಕಂಟ್ರೋಲ್ ಸಿಸ್ಟಮ್- ಎಡಬ್ಲೂéಎಸಿಎಸ್ (120 ಕಿಮೀ), ಸಣ್ಣ ಕ್ಷಿಪಣಿ (40 ಕಿಮೀ) ವ್ಯಾಪ್ತಿ ಚಲಿಸಬಲ್ಲದು.
36 ಗುರಿ- ಒಂದೇ ಬಾರಿಗೆ ಛೇದನ ಸಾಮರ್ಥ್ಯ
– 400 ಕಿಮೀ ದೂರದಲ್ಲಿ , 30 ಕಿಮೀ ಎತ್ತರದಲ್ಲಿ ಹಾರಾಡುತ್ತಿರುವ ಯುದ್ಧ ವಿಮಾನ, ಡ್ರೋನ್‌ಗಳು, ಖಂಡಾಂತರ ಮತ್ತು ಕ್ರೂéಸ್ ಮಿಸೈಲ್‌ಗಳನ್ನು ಛೇದನ ಸಾಮರ್ಥ್ಯ ಅಭಿವೃದ್ಧಿಪಡಿಸಿದ್ದು ಯಾರು?
1990ರಲ್ಲಿ ಅಲ್ಮಾಜ್ ಸೆಂಟ್ರಲ್ ಡಿಸೈನ್ ಬ್ಯೂರೋ ಅಭಿವೃದ್ಧಿಪಡಿಸಿದೆ. ನ್ಯಾಟೋ ಪಡೆಗಳು ಈ ಕ್ಷಿಪಣಿ ವ್ಯವಸ್ಥೆ ಹೊಂದಿವೆ. 2007ರಲ್ಲಿ ರಷ್ಯಾ ಸೇನೆಗೆ ಸೇರ್ಪಡೆಯಾಗಿತ್ತು. 35 ಸಾವಿರ ಕೋಟಿ ರೂ.- ಭಾರತ-ರಷ್ಯಾ ನಡುವಿನ ಒಪ್ಪಂದದ ಮೊತ್ತ
05- ಇಷ್ಟು ವರ್ಷಗಳಲ್ಲಿ ಪೂರೈಕೆ ಮುಕ್ತಾಯ
05 – ಸ್ವಾಡ್ರನ್‌ಗಳು. ಒಂದು ಸ್ಕ್ವಾಡ್ರನ್‌ನಲ್ಲಿ 12-24 ಯುದ್ಧ ವಿಮಾನಗಳು ಅಥವಾ ಕ್ಷಿಪಣಿಗಳು ಇರುತ್ತವೆ