ಕೀವ್: ಉಕ್ರೇನ್ ಮೇಲೆ ರಷ್ಯಾ ವ್ಯಾಕ್ಯೂಮ್ ಬಾಂಬ್ ಹಾಕುತ್ತಿದೆ ಎಂಬ ಆರೋಪವನ್ನು ಈಗ ಸ್ವತಃ ಪುಟಿನ್ ಸರ್ಕಾರವೇ ಒಪ್ಪಿಕೊಂಡಿದೆ.
ಉಕ್ರೇನ್ ಆಕ್ರಮಣದಲ್ಲಿ ನಾವು ಟಿಒಎಸ್-1ಎ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಬಳಸುತ್ತಿದ್ದೇವೆ ಎಂದು ರಷ್ಯಾ ರಕ್ಷಣಾ ಇಲಾಖೆಯೇ ತಿಳಿಸಿರುವುದಾಗಿ ಯುಕೆ ರಕ್ಷಣಾ ಸಚಿವಾಲಯ ಟ್ವೀಟ್ ಮಾಡಿದೆ.
ಟಿಒಎಸ್-1ಎ ವ್ಯವಸ್ಥೆಯು ಥರ್ಮೋಬಾರಿಕ್ ರಾಕೆಟ್ ಅಥವಾ ವ್ಯಾಕ್ಯೂಮ್ ಬಾಂಬ್‌ಗಳನ್ನು ಬಳಸಿಕೊಂಡು, ಭಾರೀ ಪ್ರಮಾಣದ ಹಾನಿಯನ್ನು ಉಂಟುಮಾಡುತ್ತದೆ. ಈ ವ್ಯಾಕ್ಯೂಮ್ ಬಾಂಬ್ ಸುತ್ತಮುತ್ತಲಿನ ವಾತಾವರಣದಲ್ಲಿನ ಆಮ್ಲಜನಕವನ್ನು ಹೀರಿಕೊಂಡು, ಅತ್ಯಧಿಕ ಉಷ್ಣತೆಯ ಸ್ಫೋಟವನ್ನು ಉಂಟುಮಾಡುತ್ತದೆ. ಇದನ್ನು ಏರೋಸೋಲ್ ಬಾಂಬ್ ಎಂದೂ ಕರೆಯುತ್ತಾರೆ.
ಇದನ್ನೂ ಓದಿ:ಏ.26ರಿಂದ ಸಿಬಿಎಸ್‌ಇ 2ನೇ ಹಂತದ ಪರೀಕ್ಷೆ
ಇದು ಮನುಷ್ಯನ ಶ್ವಾಸಕೋಶದಲ್ಲಿನ ಗಾಳಿಯನ್ನೂ ಹೀರಿಕೊಂಡು ಆತನ ಸಾವಿಗೆ ಕಾರಣವಾಗುತ್ತದೆ. ಒಟ್ಟಿನಲ್ಲಿ ಎಲ್ಲವನ್ನೂ ನಾಶ ಮಾಡುವುದೇ ರಷ್ಯಾದ ಗುರಿಯಾಗಿದೆ ಎಂದು ಆಸ್ಟ್ರೇಲಿಯಾದ ವ್ಯೂಹಾತ್ಮಕ ನೀತಿ ಸಂಸ್ಥೆಯ ಹಿರಿಯ ವಿಶ್ಲೇಷಕ ಡಾ. ಮಾರ್ಕಸ್ ಹೆಲ್ಲೆರ್ ಹೇಳಿದ್ದಾರೆ.