Advertisement

Russia: ತನ್ನದೇ ನಗರದ ಮೇಲೆ ಬಾಂಬ್‌ ಹಾಕಿದ ರಷ್ಯಾ!

10:52 PM Apr 21, 2023 | Team Udayavani |

ಮಾಸ್ಕೊ: ತನ್ನ ನಗರಕ್ಕೇ ಸ್ವತಃ ರಷ್ಯಾ ಆಕಸ್ಮಿಕವಾಗಿ ಬಾಂಬ್‌ ದಾಳಿ ನಡೆಸಿದೆ. ಉಕ್ರೇನ್‌ ಗಡಿಯ ಸಮೀಪ ರಷ್ಯಾದ ಬೆಲ್ಗೊರೊಡ್‌ ನಗರದಲ್ಲಿ ಗುರುವಾರ ರಾತ್ರಿ ಪ್ರಬಲ ಬಾಂಬ್‌ ಸ್ಫೋಟಗೊಂಡಿತು.

Advertisement

ಸ್ಫೋಟದಲ್ಲಿ ಅನೇಕ ಕಾರುಗಳಿಗೆ ಹಾನಿಯಾಗಿವೆ. ಕಟ್ಟಡಗಳ ಗೋಡೆಗಳು ಬಿರುಕು ಬಿಟ್ಟಿವೆ. ಕಿಟಕಿಗಳ ಗಾಜುಗಳು ಪುಡಿಯಾಗಿವೆ. ಇದರಿಂದ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ.

ಈ ದಾಳಿಯನ್ನು ಉಕ್ರೇನ್‌ ಸೇನೆ ನಡೆಸಿದೆ ಎಂದೇ ರಷ್ಯಾದ ನಾಗರಿಕರು ಭಾವಿಸಿದ್ದರು. ನಂತರ ರಷ್ಯಾದ ಯುದ್ಧ ವಿಮಾನ ಎಸ್‌ಯು-34 ನಿಂದಲೇ ಈ ಬಾಂಬ್‌ ಸ್ಫೋಟಗೊಂಡಿರುವುದು ರಷ್ಯಾ ಸೇನೆಗೆ ಮನವರಿಕೆಯಾಯಿತು. 500 ಕೆ.ಜಿ. ತೂಕದ ಬಾಂಬ್‌ ಇದಾಗಿತ್ತು. ಬೆಲ್ಗೊರೊಡ್‌ ನಗರದಲ್ಲಿ ಸುಮಾರು 3.40 ಲಕ್ಷ ನಾಗರಿಕರು ವಾಸಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next