Advertisement

Missile Strike: ಉಕ್ರೇನ್‌ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು

08:31 PM Nov 18, 2024 | Team Udayavani |

ಕೀವ್‌: ರಷ್ಯಾ ತನ್ನ ಅತ್ಯಂತ ಶಕ್ತಿಯುತ ಖಂಡಾಂತರ ಕ್ಷಿಪಣಿ ಮೂಲಕ ಉಕ್ರೇನ್‌ ಮೇಲೆ ದಾಳಿ ನಡೆಸಿದ್ದು, ಇಬ್ಬರು ಮಕ್ಕಳು ಸೇರಿದಂತೆ 11 ಜನರು ಮೃತಪಟ್ಟಿದ್ದಾರೆ.

Advertisement

84 ಜನರು ಗಾಯಗೊಂಡಿದ್ದಾರೆ. ಉಕ್ರೇನ್‌ನ ಉತ್ತರ ಭಾಗದ ಸಮ್ಮಿ ಜನವಸತಿ ಪ್ರದೇಶದ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ, 2 ಶೈಕ್ಷಣಿಕ ಕಟ್ಟಡಗಳು ಸೇರಿ 15ಕ್ಕೂ ಹೆಚ್ಚು ಕಟ್ಟಡಗಳು ಧ್ವಂಸವಾಗಿವೆ.

ಸಮ್ಮಿ ಸೇರಿದಂತೆ ಉಕ್ರೇನ್‌ನ ಇತರೆಡೆ 120 ಕ್ಷಿಪಣಿಗಳು ಮತ್ತು 90 ಡ್ರೋನ್‌ಗಳ ಮೂಲಕ ರಷ್ಯಾ ದಾಳಿ ನಡೆಸಿದೆ ಎಂದು ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಹೇಳಿದ್ದಾರೆ. ಇಂಧನ ಮೂಲ ಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದಿದ್ದಾರೆ. ಅಣುಸ್ಥಾವರಗಳಿಗೆ ಹಾನಿಯಾಗಿಲ್ಲವಾದರೂ ಅನೇಕ ವಿದ್ಯುತ್‌ ಸಬ್‌ಸ್ಟೇಷನ್‌ಗಳನ್ನು ನಾಶವಾಗಿವೆ ಎಂದು ಅಮೆರಿಕ ಅಣು ಇಂಧನ ವಾಚ್‌ಡಾಗ್‌ ಹೇಳಿದೆ.

3ನೇ ಮಹಾಯುದ್ಧಕ್ಕೆ ದೂಡುತ್ತಿರುವ ಅಮೆರಿಕ: ರಷ್ಯಾ
ಅಮೆರಿಕದ ಶಸ್ತ್ರಾಸ್ತ್ರಗಳನ್ನು ರಷ್ಯಾ ವಿರುದ್ಧದ ದಾಳಿಗೆ ಬಳಸಿಕೊಳ್ಳಲು ಅನುಮತಿ ನೀಡಿರುವ ಅಮೆ ರಿಕ ಅಧ್ಯಕ್ಷ ಜೋ ಬೈಡೆನ್‌ ವಿರುದ್ಧ ರಷ್ಯಾ ವಾಗ್ಧಾಳಿ ನಡೆಸಿದೆ. ಬೈಡೆನ್‌ ಆಡಳಿತವು ಅಮೆರಿಕದ ಶಸ್ತ್ರಾಸ್ತ್ರಗಳ ಬಳಕೆಗೆ ಅನುಮತಿ ನೀಡುವ ಮೂಲಕ ಜಗತ್ತನ್ನು 3ನೇ ಮಹಾಯುದ್ಧಕ್ಕೆ ದೂಡುತ್ತಿದೆ.

ಅಧಿಕಾರದಲ್ಲಿರುವಷ್ಟು ದಿನ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ರಷ್ಯಾದ ಜನಪ್ರತಿನಿಧಿ ಮರಿಯಾ ಬುಟಿನಾ ಆರೋಪಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next