Advertisement

ಉಕ್ರೇನ್‌ ತುಂಬ ಸಾಮೂಹಿಕ ಸಮಾಧಿ; ರಷ್ಯಾ ದಾಳಿಯಿಂದ ಈವರೆಗೆ 1,081 ಸಾವು

01:07 AM Mar 26, 2022 | Team Udayavani |

ವಿಶ್ವಸಂಸ್ಥೆ: ಉಕ್ರೇನ್‌ ಮೇಲೆ ರಷ್ಯಾ ದಾಳಿ ಆರಂಭವಾದಾಗಿನಿಂದ ಇಲ್ಲಿಯವರೆಗೆ ಸುಮಾರು 1,081 ಮಂದಿ ಸಾವಿಗೀಡಾಗಿದ್ದಾರೆ. ಉಕ್ರೇನ್‌ನ ಬಹುತೇಕ ಎಲ್ಲ ಕಡೆ ಸಾಮೂಹಿಕ ಸಮಾಧಿಗಳನ್ನು ಕಂಡುಬರುತ್ತಿವೆ. ಇದು ಯುದ್ಧದಲ್ಲಿ ಅಪಾರ ಮಟ್ಟದ ಸಾವುಗಳಾಗಿರುವುದಕ್ಕೆ ಸಾಕ್ಷಿ ಒದಗಿಸುತ್ತಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ತಿಳಿಸಿದೆ.

Advertisement

ಇದಲ್ಲದೆ ಕಳೆದ ವಾರ ಉಕ್ರೇನ್‌ನ ಮರಿಯು ಪೋಲ್‌ ನಗರದ ರಂಗಮಂದಿರದ ಮೇಲೆ ಆಗಿದ್ದ ಬಾಂಬ್‌ ದಾಳಿಯಲ್ಲಿ ಕನಿಷ್ಠ 300 ಮಂದಿ ಸಾವಿಗೀ ಡಾಗಿದ್ದಾರೆ. ಉಕ್ರೇನ್‌ನಲ್ಲಿ ಯುದ್ಧ ಆರಂಭ ವಾದ ಅನಂತರ ಇಲ್ಲಿಯವರೆಗೆ 1,707 ಮಂದಿ ಗಾಯ ಗೊಂಡಿದ್ದಾರೆ ಎಂದು ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಜತೆಗೆ ಮತ್ತೊಂದು ಒಕ್ಕಣೆಯನ್ನೂ ನೀಡಿರುವ ಕಚೇರಿ ಲಭ್ಯವಿರುವ ಮಾಹಿತಿಯ ಪ್ರಕಾರ ಇಷ್ಟು ಲೆಕ್ಕ ಸಿಕ್ಕಿದೆ. ನಿಜವಾದ ಸಾವು ನೋವು ಇನ್ನೂ ಅಧಿಕವಿರಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.

ತೈಲಾಗಾರ ಧ್ವಂಸ: ಇದೇ ವೇಳೆ ಉಕ್ರೇನ್‌ನ ಅತೀ ದೊಡ್ಡ ತೈಲಾ ಗಾರವನ್ನು ಧ್ವಂಸ ಗೊಳಿಸಿರುವುದಾಗಿ ರಷ್ಯಾ ಹೇಳಿದೆ. “ಕೀವ್‌ ನಗರದ ಬಳಿಯಿರುವ ಹಳ್ಳಿಯಲ್ಲಿ ಈ ತೈಲಾ ಗಾರವಿತ್ತು. ಅದನ್ನು ಕಲಿಬರ್‌ ಎಂಬ ಕ್ಷಿಪಣಿಯನ್ನು ಪ್ರಯೋಗಿ ಸಲಾಗಿತ್ತು’ ಹೇಳಿದೆ.

ಮೇ 9ರಂದು ಯುದ್ಧ ಸಮಾಪ್ತಿ!: ತನ್ನ ಮೇಲಿನ ದಾಳಿಯನ್ನು ರಷ್ಯಾ, ಮೇ 9ರಂದು ನಿಲ್ಲಿಸಬಹುದೆಂಬ ಆಶಾಕಿರಣವನ್ನು ಉಕ್ರೇನ್‌ ವ್ಯಕ್ತಪಡಿಸಿದೆ. ಆ ದಿನ ಎರಡನೇ ಮಹಾಯುದ್ಧದಲ್ಲಿ ರಷ್ಯಾ ಗೆದ್ದ ದಿನ. ಅದರ ಸವಿನೆನಪಿನಲ್ಲಿ ರಷ್ಯಾ, ಉಕ್ರೇನ್‌ ಮೇಲಿನ ದಾಳಿಯನ್ನು ನಿಲ್ಲಿಸಬಹುದು ಎಂದು ಅದು ಹೇಳಿದೆ.

Advertisement

ಪೋಲೆಂಡ್‌ಗೆ ಬೈಡನ್‌: ರಷ್ಯಾ ದಾಳಿ ತಡೆಯುವ ನಿಟ್ಟಿನಲ್ಲಿ ಶಾಂತಿ ಮಾತುಕತೆ ಆರಂಭಿಸಲುವ ಪ್ರಯತ್ನದ ಭಾಗವಾಗಿ ಅಮೆರಿಕದ ಅಧ್ಯಕ್ಷ ಬೈಡನ್‌ ಶುಕ್ರವಾರ ಪೋಲೆಂಡ್‌ಗೆ ಆಗಮಿಸಿದ್ದಾರೆ.

ಪತ್ನಿ ಷೇರು: ರಿಷಿ ಜಾಣ್ಮೆಯ ಉತ್ತರ
“ಭಾರತ ಮೂಲದ ಇನ್ಫೋಸಿಸ್‌ ಕಂಪೆ‌ನಿಯಲ್ಲಿ ನಿಮ್ಮ ಪತ್ನಿ ಅಕ್ಷತಾ ಮೂರ್ತಿ (ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿಯವರ ಪುತ್ರಿ) ಷೇರು ಹೊಂದಿದ್ದಾರೆ. ಆ ಕಂಪನಿ ರಷ್ಯಾದಲ್ಲಿ ತನ್ನ ಕಚೇರಿ ಹಾಗೂ ವ್ಯವಹಾರಗಳನ್ನು ಹೊಂದಿದೆ. ಯುನೈಟೆಡ್‌ ಕಿಂಗ್‌ಡಮ್‌ ಸರಕಾರ, ಈಗ ರಷ್ಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪೆನಿಗಳ ಮೇಲೆ ನಿರ್ಬಂಧ ಹೇರಿದೆ. ಆದರೆ ಆ ನಿರ್ಬಂಧಗಳನ್ನು ನಿಮ್ಮ ಮನೆಯವರೇ (ಪತ್ನಿ) ಕೇಳುವುದು ಅನುಮಾನವಾಗಿದೆ, ಅಲ್ಲವೇ?’ – ಇಂಥದ್ದೊಂದು ಪ್ರಶ್ನೆ ಯುನೈಟೆಡ್‌ ಕಿಂಗ್‌ಡಮ್‌ನ ಆರ್ಥಿಕ ಸಚಿವ ಭಾರತ ಮೂಲದ ರಿಷಿ ಸುನಾಕ್‌ ಅವರಿಗೆ ಟಿವಿ ಸಂದರ್ಶನ ವೊಂದರಲ್ಲಿ ಕೇಳಲಾಗಿದೆ. ಇದಕ್ಕೆ ಜಾಣ್ಮೆಯ ಉತ್ತರ ಕೊಟ್ಟಿರುವ ರಿಷಿ, “ನಾನು ಒಬ್ಬ ಸಚಿವನಾಗಿ ಸರಕಾರ ಕೈಗೊಂಡ ತೀರ್ಮಾನಗಳ ಬಗ್ಗೆ ಮಾತ ನಾಡಲು ಬಂದಿದ್ದೇನೆ. ನನ್ನ ಪತ್ನಿಯ ವೈಯಕ್ತಿಕ ತೀರ್ಮಾನಗಳ ಬಗ್ಗೆ ಅಲ್ಲ” ಎಂದಿದ್ದಾರೆ!

Advertisement

Udayavani is now on Telegram. Click here to join our channel and stay updated with the latest news.

Next