ಖಾರ್ಕಿವ್ : ರಷ್ಯಾದ ಸೇನಾಪಡೆಗಳು ಉಕ್ರೇನ್‌ನ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಖಾರ್ಕಿವ್‌ನಲ್ಲಿ ಬಂದಿಳಿದಿದ್ದು, ಭಾರಿ ದಾಳಿ ನಡೆಸುತ್ತಿವೆ. ಇದೆ ವೇಳೆ ನಾವು 7 ದಿನದ ಯುದ್ಧದಲ್ಲಿ ರಷ್ಯಾದ 6,000 ಮಂದಿ ಭದ್ರತಾ ಪಡೆಗಳನ್ನು ಉಕ್ರೇನ್ ಯೋಧರು ಹತ್ಯೆಗೈದಿರುವುದಾಗಿ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ಕನಿಷ್ಠ 14 ಮಕ್ಕಳನ್ನು ಒಳಗೊಂಡಂತೆ ಇದುವರೆಗೆ 350 ಕ್ಕೂ ಹೆಚ್ಚು ಉಕ್ರೇನ್ ನಾಗರಿಕರ ಸಾವುನೋವುಗಳು ವರದಿಯಾಗಿವೆ. 1,600 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅಪಾರ ಪ್ರಮಾಣದ ಸೇನಾ ಸಾಮರ್ಥ್ಯ ನಾಶವಾಗಿದೆ ಎಂದು ತಿಳಿದು ಬಂದಿದೆ.
ರಷ್ಯಾದ 30 ವಿಮಾನಗಳು, 31 ಹೆಲಿಕ್ಯಾಪ್ಟರ್, 211 ಯುದ್ಧ ಟ್ಯಾಂಕ್ ಗಳನ್ನು ನಾಶ ಮಾಡಿರುವುದಾಗಿ ಉಕ್ರೇನ್ ಸೇನೆ ಹೇಳಿಕೊಂಡಿದೆ.
ರಷ್ಯಾ ವೈಮಾನಿಕ ದಾಳಿಯನ್ನು ಹೆಚ್ಚಿಸಿದ್ದರಿಂದ ಅನೇಕ ಜನರು ಸಾವನ್ನಪ್ಪಿದ್ದಾರೆ ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ರಷ್ಯಾದ ಪ್ಯಾರಾಟ್ರೂಪರ್‌ಗಳು ಖಾರ್ಕಿವ್‌ಗೆ ಬಂದಿಳಿದಿದ್ದು, ಮುತ್ತಿಗೆ ಹಾಕಿದ ನಗರವನ್ನು ವಶಪಡಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.
ಭಾರತೀಯ ವಾಯುಪಡೆಯ C-17 ಸಾರಿಗೆ ವಿಮಾನ ಬುಧವಾರ ಬೆಳಗ್ಗೆ ರೊಮೇನಿಯಾ ಗೆ ತೆರಳಿದ್ದು, ಸಂಕಷ್ಟದಲ್ಲಿರುವ ಭಾರತೀಯರನ್ನು ಕರೆತರಲಿದೆ. ಈಗಾಗಲೇ ಹಲವು ವಿದ್ಯಾರ್ಥಿಗಳು ಉಕ್ರೇನ್ ಗಡಿ ದಾಟಿ ನೆರೆಯ ದೇಶಗಳಾದ ರೊಮೇನಿಯಾ, ಹಂಗೇರಿ, ಸ್ಲೋವಾಕಿಯ, ಪೋಲ್ಯಾಂಡ್ ತಲುಪಿದ್ದಾರೆ.