Advertisement
ಕೀವ್ ನಗರವು ರಷ್ಯಾದ ಕಾಪೆìಟ್ ಬಾಂಬ್‌ಗ (ನಿರಂತರ ಬಾಂಬ್ ದಾಳಿ) ಒಳಗಾದರೂ ಆ ನಗರವು ರಷ್ಯನ್ನರ ಹಿಡಿತಕ್ಕೆ ಸಿಗುತ್ತಿಲ್ಲ. ಒಂದರ್ಥದಲ್ಲಿ ಈ ಹೋರಾಟದಲ್ಲಿ ರಷ್ಯಾ ಸೇನೆಯೇ ಭಾರೀ ನಷ್ಟ ಅನುಭವಿಸುತ್ತಿದೆ. ರವಿವಾರ ತಡರಾತ್ರಿ ಕೀವ್‌ನ ಹೊರವಲಯದಲ್ಲಿ ಭಾರೀ ಪ್ರಮಾಣದ ದಾಳಿ ನಡೆದರೂ ರಾಜಧಾನಿ ಪ್ರವೇಶಿಸುವ ರಷ್ಯಾದ ಎಲ್ಲ ಪ್ರಯತ್ನವೂ ವಿಫಲವಾಗಿದೆ ಎಂದು ಉಕ್ರೇನ್‌ನ ಕಮಾಂಡರ್‌ಗಳು ತಿಳಿಸಿದ್ದಾರೆ.
Related Articles
Advertisement
ಮುಂದುವರಿದ ದಾಳಿ: ಸೋಮವಾರ ಮುಂಜಾನೆ ಕೀವ್‌ನಲ್ಲಿ ಅಲ್ಪಕಾಲ ಕರ್ಫ್ಯೂ ತೆರವು ಮಾಡಲಾಗಿತ್ತು. ಜನರಿಗೆ ಆಹಾರ ವಸ್ತುಗಳನ್ನು ಖರೀದಿಸಲು ಮತ್ತು ವಾಯು ವಿಹಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಜನರು ಹೊರ ಬರುತ್ತಿದ್ದಂತೆಯೇ, ಏಕಾಏಕಿ ಸೈರನ್‌ಗಳು ಮೊಳಗಿದವು. ರಷ್ಯಾ ಪಡೆಗಳು ಬೆಳಗಿನ ಜಾವವೇ ನಿರಂತರ ಬಾಂಬ್ ದಾಳಿ ಮಾಡಿದವು. ಕೀವ್ ಮಾತ್ರವಲ್ಲದೇ, ಝೈಟೋಮಿರ್, ಝಪೋರಿಝಿಯಾ ಮತ್ತು ಚೆರ್ನಿಹಿವ್ ನಗರಗಳ ಮೇಲೂ ವೈಮಾನಿಕ ದಾಳಿಗಳು ನಡೆದವು. ಕ್ಷಿಪಣಿಗಳು ಹಲವು ಕಟ್ಟಡಗಳನ್ನು ಚಿಂದಿ ಮಾಡಿದವು. ಖಾರ್ಕಿವ್‌ನಲ್ಲಿ ರಾಕೆಟ್ ದಾಳಿಯಿಂದ 12ಕ್ಕೂ ಅಧಿಕ ಮಂದಿ ಅಸುನೀಗಿದರು.
352 ನಾಗರಿಕರು,5,300 ರಷ್ಯನ್ನರ ಸಾವು
ಯುದ್ಧ ಆರಂಭವಾದಾಗಿನಿಂದ ರಷ್ಯಾದ 5,300 ಸೈನಿಕರನ್ನು ಹತ್ಯೆಗೈದಿರುವುದಾಗಿ ಉಕ್ರೇನ್ ರಕ್ಷಣಇಲಾಖೆ ಹೇಳಿದೆ. ಇನ್ನೊಂ ದೆಡೆ, ರಷ್ಯಾದ ದಾಳಿಯಿಂದ 14 ಮಕ್ಕಳೂ ಸೇರಿದಂತೆ 352 ಉಕ್ರೇನ್ ನಾಗರಿಕರು ಅಸುನೀಗಿದ್ದಾಗಿಯೂ ಮಾಹಿತಿ ನೀಡಿದೆ. ರಷ್ಯಾಗೆ ಸಾಥ್
ನೀಡಲಿದೆ ಬೆಲಾರಸ್!
ಉಕ್ರೇನ್ ವಿರುದ್ಧ ಆಕ್ರಮಣ ನಡೆಸಲು ತನ್ನ ದೇಶದ ನೆಲವನ್ನು ರಷ್ಯಾಗೆ ಬಿಟ್ಟುಕೊಟ್ಟಿದ್ದ ಬೆಲಾರಸ್, ಈಗ ಯುದ್ಧದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಿದ್ಧತೆ ನಡೆಸುತ್ತಿದೆ. ರಷ್ಯಾ ಸೇನೆಗೆ ಪರೋಕ್ಷ ಬೆಂಬಲ ನೀಡುತ್ತಿದ್ದ ಬೆಲಾರಸ್ ಈವರೆಗೆ ನೇರವಾಗಿ ಯುದ್ಧದಲ್ಲಿ ಪಾಲ್ಗೊಂಡಿ ರಲಿಲ್ಲ. ಆದರೆ ಈಗ ಉಕ್ರೇನ್‌ಗೆ ತನ್ನ ಸೇನೆ ಯನ್ನೂ ಕಳುಹಿಸಿಕೊಟ್ಟು ರಷ್ಯಾಗೆ ನೆರವಾ ಗಲು ಬೆಲಾರಸ್ ಚಿಂತನೆ ನಡೆಸಿದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ತಿಳಿಸಿವೆ. ದೇಶದ ವಿರುದ್ಧವೇ ತಿರುಗಿಬಿದ್ದ ರಷ್ಯನ್ನರು
ಉಕ್ರೇನ್ ಮೇಲೆ ರಷ್ಯಾ ಆಕ್ರಮಣದ ವಿರುದ್ಧ ರಷ್ಯನ್ನರೇ ತಿರುಗಿಬಿದ್ದಿದ್ದಾರೆ. ಪ್ರತಿಭಟನಕಾರರ ಮೇಲೆ ಕಠಿನ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷ ಪುತಿನ್‌ಎಚ್ಚರಿಕೆ ನೀಡಿರುವ ನಡುವೆಯೇ, ಸೋಮವಾರ ಮಾಸ್ಕೋದಿಂದ ಸೈಬೀರಿಯಾದವರೆಗೆ ಸಾವಿರಾರು ಪ್ರತಿಭಟನಕಾರರು ಬೀದಿಗಿಳಿದಿದ್ದಾರೆ. “ನೋ ಟು ವಾರ್’ ಎಂಬ ಫಲಕಗಳನ್ನು ಹಿಡಿದು ಯುದ್ಧ ಬೇಡ ಎಂದು ಘೋಷಣೆ ಕೂಗಿದ್ದಾರೆ. ಯುದ್ಧವಿರೋಧಿ ಮನವಿ ಪತ್ರಗಳಿಗೆ ಸಹಿ ಹಾಕುವ ಅಭಿಯಾನವೂ ಆರಂಭವಾಗಿದೆ. ಅನೇಕ ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಂದೆಡೆ, ರಷ್ಯಾದ ಮಿತ್ರರಾಷ್ಟ್ರ ಬೆಲಾರಸ್‌ನಲ್ಲೂ ಪ್ರತಿಭಟನೆಗಳು ನಡೆದಿದ್ದು, 500ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ನಾನು ಅಧ್ಯಕ್ಷ ಸ್ಥಾನಕ್ಕೇರು ವಾಗಲೇ, ಉಕ್ರೇನ್‌ನಲ್ಲಿರುವ ಪ್ರತಿಯೊ ಬ್ಬರೂ “ಅಧ್ಯಕ್ಷ’ರೇ ಎಂದು ನಾನು ಹೇಳಿದ್ದೆ. ಏಕೆಂದರೆ, ನಮ್ಮ ಈ ಸುಂದರ ದೇಶಕ್ಕೆ ನಾವೆಲ್ಲರೂ ಹೊಣೆಗಾರರು. ಆ ಮಾತಿನಂತೆಯೇ, ಈಗ ಪ್ರತಿಯೊಬ್ಬ ನಾಗರಿಕನೂ ದೇಶ ಕಾಯುವ ಯೋಧನಾಗಿದ್ದಾನೆ. ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸ ನನಗಿದೆ.
-ಝೆಲೆನ್‌ಸ್ಕಿ,
ಉಕ್ರೇನ್ ಅಧ್ಯಕ್ಷ