ಕೀವ್: ಕಳೆದ ಹತ್ತು ದಿನಗಳಿಂದ ಉಕ್ರೇನ್ ನಲ್ಲಿ ಮಾರಣ ಹೋಮ ನಡೆಸುತ್ತಿರುವ ರಷ್ಯಾ ಸೇನಾ ಪಡೆ ಶನಿವಾರ (ಮಾರ್ಚ್ 05) ದಿಢೀರನೆ ತಾತ್ಕಾಲಿಕ ಕದನ ವಿರಾಮ ಘೋಷಿಸಿರುವುದಾಗಿ ಮಾಧ್ಯಮಗಳ ವರದಿ ತಿಳಿಸಿದೆ.
ಇದನ್ನೂ ಓದಿ:99 ಕ್ಕೆ ಔಟಾಗಿ ಭಾರಿ ನಿರಾಸೆ ಅನುಭವಿಸಿದ್ದ ಸ್ಪಿನ್ ದಿಗ್ಗಜ ಶೇನ್ ವಾರ್ನ್!
ನಾಗರಿಕರ ಸುರಕ್ಷಿತ ಸ್ಥಳಾಂತರದ ಹಿನ್ನೆಲೆಯಲ್ಲಿ ಎರಡು ನಗರಗಳಲ್ಲಿ ತಾತ್ಕಾಲಿಕ ಕದನ ವಿರಾಮ ಘೋಷಿಸಿರುವುದಾಗಿ ತಿಳಿಸಿರುವ ರಷ್ಯಾ ಸೇನಾಪಡೆ, ಕೂಡಲೇ ಉಕ್ರೇನ್ ತೊರೆಯುವಂತೆ ನಾಗರಿಕರಿಗೆ ಅಂತಿಮ ಸೂಚನೆ ನೀಡಲಾಗಿದೆ.
ಭಾರತೀಯ ಕಾಲಮಾನ ಬೆಳಗ್ಗೆ 11.30ರಿಂದ ತಾತ್ಕಾಲಿಕ ಕದನ ವಿರಾಮ ಘೋಷಿಸಿರುವ ರಷ್ಯಾ, ಸಾರ್ವಜನಿಕ ಜೀವಹಾನಿ ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಇಂದು ಸಂಜೆವರೆಗೆ ಕದನ ವಿರಾಮ ಘೋಷಿಸಿದ್ದು, ಅಷ್ಟರಲ್ಲಿ ದೇಶವನ್ನು ತೊರೆಯುವಂತೆ ನಾಗರಿಕರಿಗೆ ಅಂತಿಮ ಗಡುವು ನೀಡಿರುವುದಾಗಿ ವರದಿ ವಿವರಿಸಿದೆ.
ಈಗಾಗಲೇ ಉಕ್ರೇನ್ ನಲ್ಲಿರುವ ಝೇನ್ ಪೊರಾಝಿಯಾ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ಶುಕ್ರವಾರ ಏಕಾಏಕಿ ರಷ್ಯಾ ಪಡೆ ಶೆಲ್ ದಾಳಿಯನ್ನು ನಡೆಸಿದ ಪರಿಣಾಮ ಸ್ಥಾವರದಲ್ಲಿರುವ ತರಬೇತಿ ಕಟ್ಟಡವೊಂದು ಹೊತ್ತಿ ಉರಿದಿದೆ. ಅದೃಷ್ಟವಶಾತ್ ರಿಯಾಕ್ಟರ್ ಗೆ ಶೆಲ್ ಗಳು ಅಪ್ಪಳಿಸದ ಕಾರಣ, ಮಹಾ ದುರಂತವೊಂದು ತಪ್ಪಿತ್ತು.