Advertisement

ಭಾರತ-ರಶ್ಯ ದ್ವಿಪಕ್ಷೀಯ ಬಾಂಧವ್ಯ ವೃದ್ದಿ: ಮೋದಿಗೆ ರಶ್ಯದ ಪರಮೋಚ್ಚ ಗೌರವ

12:17 PM Apr 13, 2019 | Sathish malya |

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಶ್ಯ ಸರಕಾರದ ಅತ್ಯುನ್ನತ “ದಿ ಆರ್ಡರ್‌ ಆಫ್ ಸೈಂಟ್‌ ಆ್ಯಂಡ್ರೂ ದಿ ಅಪಾಸ್ಟಲ್‌’ ಗೌರವವನ್ನು ನೀಡಲಾಗಿದೆ.

Advertisement

ಭಾರತ-ರಶ್ಯ ನಡುವಿನ ದ್ವಿಪಕ್ಷೀಯ ಬಾಂಧವ್ಯವನ್ನು ಉತ್ತುಂಗಕ್ಕೆ ಒಯ್ಯುವಲ್ಲಿನ ಪ್ರಧಾನಿ ಮೋದಿ ಅವರ ಕಾಣಿಕೆಯನ್ನು ಪುರಸ್ಕರಿಸಿ ಈ ಗೌರವ ನೀಡಲಾಗಿದೆ.

ಭಾರತ ಮತ್ತು ರಶ್ಯ ನಡುವಿನ ವಿಶೇಷ ಮತ್ತು ವ್ಯೂಹಗಾರಿಕೆಯ ಪಾಲುದಾರಿಕೆಯನ್ನು ಉನ್ನತ ಮಟ್ಟಕ್ಕೆ ಒಯ್ಯುವಲ್ಲಿ ಮೋದಿ ನೀಡಿರುವ ಅಸಾಮಾನ್ಯ ಸೇವೆಯನ್ನು ಪರಿಗಣಿಸಿ ಅವರಿಗೆ ತಾನು ಈ ಪರಮೋಚ್ಚ ಗೌರವ ನೀಡುತ್ತಿರುವುದಾಗಿ ರಶ್ಯ ಸರಕಾರ ಹೇಳಿದೆ.

ಮೋದಿ ಅವರಿಗೆ ಈ ಗೌರವವನ್ನು ನೀಡುವ ಕಾರ್ಯನಿರ್ವಾಹಕ ಆದೇಶಕ್ಕೆ ರಶ್ಯ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಸಹಿ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next