Advertisement

ರಷ್ಯಾದ ಕಫೆಯಲ್ಲಿ ಭೀಕರ ಅಗ್ನಿ ಅವಘಡ : 15 ಮಂದಿ ದುರ್ಮರಣ

05:20 PM Nov 05, 2022 | Team Udayavani |

ಮಾಸ್ಕೋ : ರಷ್ಯಾದ ಕೊಸ್ಟ್ರೋಮಾದಲ್ಲಿ ಕಫೆಯಲ್ಲಿ ಅಗ್ನಿ ಅನಾಹುತ ಸಂಭವಿಸಿ 15 ಮಂದಿ ದುರ್ಮರಣಕ್ಕೀಡಾಗಿರುವ ಭೀಕರ ಅವಘಡ ಶನಿವಾರ ನಡೆದಿದೆ.

Advertisement

ರಷ್ಯಾ ರಾಜಧಾನಿ ಮಾಸ್ಕೋದ 340 ಕಿ.ಮೀ, ಉತ್ತರ ಭಾಗದದಲ್ಲಿ ಈ ಅವಘಡ ಸಂಭವಿಸಿದೆ. ಯಾರೋ ಒಬ್ಬ ಫ್ಲೇರ್ ಗನ್ ಬಳಸಿದ ನಂತರ ಬೆಳಗಿನ ಜಾವದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಕಾರ್ಯದ ವೇಳೆ 250 ಜನರನ್ನು ಸ್ಥಳಾಂತರಿಸಲು ಸಾಧ್ಯವಾಯಿತು.

ಬೆಂಕಿಯ ಕೆನ್ನಾಲಗೆ ಗೆ ಕೆಫೆಯ ಮೇಲ್ಛಾವಣಿ ಕುಸಿದಿದ್ದು, ಕ್ರಿಮಿನಲ್ ತನಿಖೆಯನ್ನು ಪ್ರಾರಂಭಿಸಲಾಗಿದೆ ಮತ್ತು ಪೊಲೀಸರು ಫ್ಲೇರ್ ಗನ್ ಬಳಸಿದ ವ್ಯಕ್ತಿಗಾಗಿ ಹುಡುಕುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next