Advertisement

ವಿಂಡೀಸ್‌ ತಂಡಕ್ಕೆ ಮರಳಿದ ರಸೆಲ್‌

06:00 AM Apr 19, 2018 | Team Udayavani |

ಕಿಂಗ್‌ಸ್ಟನ್‌: 2017ರ ಜನವರಿಯಲ್ಲಿ ಮದ್ದು ಸೇವನೆ ನಿಯಮ ಉಲ್ಲಂಘಿಸಿದ್ದಕ್ಕಾಗಿ ನಿಷೇಧಕ್ಕೊಳಗಾದ ಬಳಿಕ ಇದೇ ಮೊದಲ ಬಾರಿ ಆಲ್‌ರೌಂಡರ್‌ ಆ್ಯಂಡ್ರೆ ರಸೆಲ್‌ ವೆಸ್ಟ್‌ಇಂಡೀಸ್‌ ತಂಡವನ್ನು ಮರಳಿ ಸೇರಿಕೊಳ್ಳಲಿದ್ದಾರೆ. ಕಳೆದ ವರ್ಷ ವೆಸ್ಟ್‌ಇಂಡೀಸ್‌ನಲ್ಲಿ ಬೀಸಿದ ಇರ್ಮ ಮತ್ತು ಮರಿಯಾ ಚಂಡಮಾರುತಗಳಿಂದಾಗಿ ಹಾನಿಗೊಳಗಾದ ಕ್ರಿಕೆಟ್‌ ಸ್ಟೇಡಿಯಂಗಳ ಪುನರ್‌ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸಲು ನಡೆಯುವ ಟಿ20 ಚಾಲೆಂಜ್‌ ಸಹಾಯಾರ್ಥ ಪಂದ್ಯದಲ್ಲಿ ರಸೆಲ್‌ ಪಾಲ್ಗೊಳ್ಳಲಿದ್ದಾರೆ.

Advertisement

ಸಹಾಯಾರ್ಥ ಟಿ20 ಪಂದ್ಯಕ್ಕಾಗಿ ಹೆಸರಿಸಲಾದ 13 ಸದಸ್ಯರ ವೆಸ್ಟ್‌ಇಂಡೀಸ್‌ ತಂಡದಲ್ಲಿ ರಸೆಲ್‌ ಇದ್ದಾರೆ. ಈ ಸಹಾಯಾರ್ಥ ಪಂದ್ಯವು ಐಸಿಸಿ ವಿಶ್ವ ಇಲೆವೆನ್‌ ವಿರುದ್ಧ ನಡೆಯಲಿದೆ. ಎಂಸಿಸಿ, ಇಸಿಬಿ ಮತ್ತು ಐಸಿಸಿಯ ಬೆಂಬಲದೊಂದಿಗೆ ಈ ಪಂದ್ಯ ನಡೆಯಲಿದೆ. ಪಂದ್ಯದಿಂದ ಸಂಗ್ರಹಿಸಲಾಗುವ ನಿಧಿಯಿಂದ ಚಂಡ ಮಾರುತದಿಂದ ಹಾಳಾಗಿರುವ 5 ಕ್ರಿಕೆಟ್‌ ತಾಣಗಳನ್ನು ಪುನರ್‌ ನಿರ್ಮಿಸುವ ಉದ್ದೇಶವನ್ನಿಟ್ಟುಕೊಳ್ಳಲಾಗಿದೆ.

ತಂಡವನ್ನು ಆಲ್‌ ರೌಂಡರ್‌ ಕಾರ್ಲೋಸ್‌ ಬ್ರಾತ್‌ವೇಟ್‌ ಮುನ್ನಡೆಸಲಿದ್ದು, ಆರಂಭಿಕ ಆಟಗಾರರಾದ ಕ್ರಿಸ್‌ಗೆàಲ್‌ ಮತ್ತು ಎವಿನ್‌ ಲೆವಿಸ್‌ ಅವರೂ ಇರಲಿದ್ದಾರೆ. ಈ ಮೂವರು ಆಟಗಾರರ ಸಹಿತ ರಸೆಲ್‌ ಸದ್ಯ ಐಪಿಎಲ್‌ನಲ್ಲಿ ಪಂದ್ಯವನ್ನಾಡುತ್ತಿದ್ದಾರೆ. ಐಪಿಎಲ್‌ ಮೇ 27ರಂದು ಐಪಿಎಲ್‌ ಕೊನೆಗೊಳ್ಳಲಿದ್ದು ಅದಕ್ಕಿಂತ ಮೂರು ದಿನ ಮುಂಚಿತವಾಗಿ ಲಾರ್ಡ್ಸ್‌ನಲ್ಲಿ ಈ ಸಹಾಯಾರ್ಥ ಪಂದ್ಯ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next