Advertisement
ಗ್ರಾಮೀಣ ಮಹಿಳಾ ಸಂಘಟನೆಯ ತಾಲೂಕು ಘಟಕದ ಕಾರ್ಮಿಕರು ಭೀಮರಾವ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಕಾರ್ಯಾಲಯಕ್ಕೆ ತೆರಳಿ, ತಹಶೀಲ್ದಾರ್‌ಆಶಪ್ಪ ಪೂಜಾರ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಧರಣಿನಿರತರು, ಲಾಕ್‌ಡೌನ್ ಮತ್ತು ಕೋವಿಡ್ 19ರ ಕಾರಣಕ್ಕೆ ಲಕ್ಷಾಂತರ ವಲಸೆ ಕಾರ್ಮಿಕರು ಕೆಲಸವಿಲ್ಲದೇ ತಮ್ಮ ಗ್ರಾಮಗಳಿಗೆ ಮರಳಿ ಬಂದಿದ್ದಾರೆ. ಸಾವಿರಾರು ಕುಟುಂಬಗಳು ಈಗಾಗಲೇ ನೂರು ದಿನಗಳ ಕೂಲಿ ಕೆಲಸ ಮುಗಿಸಿದ್ದಾರೆ. ಮರು ವಲಸೆ ಬಂದಕುಟುಂಬದ ಸದಸ್ಯರು ಯಾವುದೇ ಉದ್ಯೋಗ ಇಲ್ಲದೇ ಆಹಾರ ಧಾನ್ಯ ಕೊರತೆಯಿಂದ ತೀವ್ರ ಸಂಕಷ್ಟದಲ್ಲಿದ್ದಾರೆಎಂದು ಅಳಲು ತೋಡಿಕೊಂಡರು. ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ, ರಾಜಾಭಕ್ಷಿ ಬೆಟಗೇರಿ ಮಾತನಾಡಿದರು. ನಂತರ ತಹಶೀಲ್ದಾರ್ ಆಶಪ್ಪ ಪೂಜಾರಿ ಅವರಿಗೆ ಮನವಿ ಸಲ್ಲಿಸಿದರು.
Advertisement
ಉದ್ಯೋಗ ಖಾತ್ರಿ ಕೂಲಿ 200 ದಿನಕ್ಕೆ ಹೆಚ್ಚಿಸಲು ಆಗ್ರಹ
09:20 PM Nov 04, 2020 | Suhan S |
Advertisement
Udayavani is now on Telegram. Click here to join our channel and stay updated with the latest news.