Advertisement
ದೊಡ್ಡ ಗಾತ್ರದ ಮೀನುಗಳುಧಾರಾಕಾರವಾಗಿ ಸುರಿದ ಮಳೆಯ ಪರಿಣಾಮ ಗ್ರಾಮೀಣ ಭಾಗದ ತಗ್ಗು ಪ್ರದೇಶದಲ್ಲಿ ಹಾದು ಹೋಗುವ ಹೊಳೆ ಸಾಲುಗಳಲ್ಲಿ ಅಪಾರ ಪ್ರಮಾಣದ ಮೀನುಗಳು ಕಾಣಸಿಗುತ್ತಿವೆ.
ಸುಮಾರು ಒಂದು ಮೀನು ಮೂರು ಕೆ.ಜಿ.ಗೂ ಅಧಿಕ ತೂಕವಿದ್ದು, ಸುಮಾರು 500 ರೂ.ಯಿಂದ 600 ರೂ.ಗೂ ಅಧಿಕ ಬೆಲೆ ಇದೆ. ಪ್ರಸ್ತುತ ಸಮುದ್ರ ಮೀನುಗಾರಿಕೆ ನಿಷೇಧವಿರುವುದರಿಂದ ಗ್ರಾಮೀಣ ಭಾಗದಲ್ಲಿ ತಾಜಾ ಬಲೆ ಮೀನಿಗೆ ಬೇಡಿಕೆ ಹೆಚ್ಚಿದೆ.
Related Articles
ಪ್ರತಿ ವರ್ಷದಂತೆ ಈ ಬಾರಿಯೂ ನಾಲ್ಕೈದು ಮಂದಿ ಸ್ನೇಹಿತರು ಒಗ್ಗೂಡಿ ಹವ್ಯಾಸಕ್ಕಾಗಿ ಮೀನು ಹಿಡಿಯುತ್ತಿದ್ದೇವೆ. ಸುಮಾರು 250 ಕೆ.ಜಿ.ಗೂ ಅಧಿಕ ದೊಡ್ಡ ಗಾತ್ರದ ಕಾಟ್ಲಾ ಮೀನುಗಳು ಬಲೆಗೆ ಬಿದ್ದಿವೆ. ಈ ಹೊಳೆ ಮೀನಿಗೆ ಭಾರೀ ಬೇಡಿಕೆ ಇದೆ.
– ಶ್ರೀನಿವಾಸ ಮಲ್ಯಾಡಿ,
ಮೀನು ಹಿಡಿಯುವ ಹವ್ಯಾಸಿ ತಂಡ
Advertisement