Advertisement

ಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸಬೇಕಿದೆ: ಚಂದ್ರಕಲಾ

09:24 PM Aug 19, 2019 | Lakshmi GovindaRaj |

ಆನೇಕಲ್‌: ಅಧುನಿಕತೆಯಿಂದ ಕಣ್ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳ ಉತ್ತೇಜನಕ್ಕೆ ಎಲ್ಲರೂ ಶ್ರಮಿಸಬೇಕು. ಕ್ರೀಡಾಕೂಟಗಳಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೈಹಿಕ ಹಾಗೂ ಮಾನಸಿಕ ಸದೃಢರಾಗಬೇಕು ಎಂದು ತಾಪಂ ಉಪಾಧ್ಯಕ್ಷೆ ಚಂದ್ರಕಲಾ ಟಿ.ವಿ.ಬಾಬು ತಿಳಿಸಿದರು.

Advertisement

ತಾಲೂಕಿನ ಮುತ್ತಾನಲ್ಲೂರು ಗ್ರಾಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಚಿನ್ಮಯ ಸೇವಾ ಸಂಸ್ಥೆ ಸಹಯೋಗದಲ್ಲಿ ನಡೆದ ಗ್ರಾಮೀಣ ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಜನರು ದೈಹಿಕ ಪರಿಶ್ರಮದ ಜೊತೆಗೆ ನಾನಾ ಕ್ರೀಡೆಗಳನ್ನು ಆಡುತ್ತಿದ್ದರು. ಇಂದಿನ ದಿನಗಳಲ್ಲಿ ಅಂತಹ ಕ್ರೀಡೆಗಳ ಬಗ್ಗೆ ಯುವ ಜನರಿಗೆ ಅರಿವು ಮೂಡಿಸಬೇಕಾದ ಅನಿವಾರ್ಯವಿದೆ ಎಂದು ಹೇಳಿದರು.

ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಡಾ.ಚಿನ್ನಪ್ಪ ಚಿಕ್ಕಹಾಗಡೆ ಮಾತನಾಡಿ, ಗ್ರಾಮೀಣ ಕ್ರೀಡೆಗಳು ಅಂತಾರಾಷ್ಟ್ರೀಯ ಮಟ್ಟದವರೆಗೆ ಸರ್ಧೆ ಮಾಡುವಂತಾಗಬೇಕು. ದೇಶದ ಆಸ್ತಿ ಇಂದಿನ ಯುವಕರು, ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಕೀರ್ತಿ ತರುವಂತಾಗಬೇಕು ಎಂದರು.

ತಾಪಂ ಸದಸ್ಯೆ ಪುಷ್ಪಾ ಎಸ್‌. ರೆಡ್ಡಿ, ಮುತ್ತಾನಲ್ಲೂರು ಗ್ರಾಪಂ ಮಾಜಿ ಅಧ್ಯಕ್ಷೆ ಸುಜಾತಾ ಚಿನ್ನಪ್ಪ ಚಿಕ್ಕಹಾಗಡೆ, ಮಹಾತ್ಮ ಶಾಲೆ ಕಿಶೋರ್‌ ಶರ್ಮಾ, ರಾಜ್ಯ ಪ್ರಶಸ್ತಿ ವಿಜೇತ ಕೆ.ಮಹೇಶ್‌, ಸದಸ್ಯೆ ವೀಣಾ ಶ್ರೀನಿವಾಸರೆಡ್ಡಿ, ವೀಣಾ ಶ್ರೀಧರ್‌, ಪ್ರಾಂಶುಪಾಲ ನಾಗರಾಜರೆಡ್ಡಿ, ದೈಹಿಕ ಶಿಕ್ಷಕ ಚಂದ್ರಪ್ಪ, ಮುಖಂಡರಾದ ಮುರಳಿ, ನವೀನ್‌, ರಮೇಶ್‌, ಬಳಗಾರನಹಳ್ಳಿ ಸತೀಶ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next