Advertisement

ಜ್ವರಕ್ಕೆ ಚಿಕಿತ್ಸೆ ಸಿಗದೆ ಗ್ರಾಮೀಣ ಜನರು ಹೈರಾಣು

01:29 PM May 08, 2021 | Team Udayavani |

ಮುದಗಲ್ಲ: ಪಟ್ಟಣ ಸುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ಕೆಲ ಜನರಿಗೆ ಜ್ವರ, ಮೈ-ಕೈ ನೂವು, ಕೈ-ಕಾಲಲ್ಲಿ ನಿಶಕ್ತಿಯಾಗುವ ಲಕ್ಷಣಗಳು ಕಾಣಿಸಿಕೊಂಡಿದ್ದು, ಸರಿಯಾದ ಚಿಕಿತ್ಸೆ ಸಿಗದೆ ಮನೆಯಲ್ಲಿಯೇ ಮಲಗುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಇಲ್ಲಿನ ಆರೋಗ್ಯ ಇಲಾಖೆ ಉಪಕೇಂದ್ರಕ್ಕೆ ಚಿಕಿತ್ಸೆಗೆ ಆಗಮಿಸುವವರು ಕೇಂದ್ರದ ಬಾಗಿಲು ಬಂದ್‌ ಮಾಡಿರುವುದನ್ನು ನೋಡಿಹಿಂದಿರಗುವಂತಾಗಿದೆ. ದೂರ ಪಟ್ಟಣಗಳಲ್ಲಿ ಚಿಕಿತ್ಸೆಗೆ ತೆರಳಲುಜನತೆ ಕರ್ಫ್ಯೂದಿಂದ ಸಾರಿಗೆ ವ್ಯವಸ್ಥೆ ಇಲ್ಲ. ಕೋವಿಡ್ ಭಯದಿಂದಚಿಕಿತ್ಸೆ ಪಡೆಯಲು ರೋಗಿಗಳುಹಿಂಜರಿಯುತ್ತಿದ್ದಾರೆ. ಮನೆಗೆ ಹೋಗಿಚಿಕಿತ್ಸೆ ನೀಡಲು ಆರೋಗ್ಯ ಇಲಾಖೆಸಿಬ್ಬಂದಿ, ಔಷಧಿ ಕೊರತೆ ನೆಪ ಹೇಳುತ್ತಿದ್ದಾರೆ.

ದೇಸಾಯಿ ಭೋಗಾಪೂರ ಆರೋಗ್ಯ ಇಲಾಖೆ ಉಪಕೇಂದ್ರದವ್ಯಾಪ್ತಿಗೆ ಬರುವ ಹಡಗಲಿ, ಹಡಗಲಿ ತಾಂಡಾ, ಯರದೊಡ್ಡಿ, ರಾಮಪ್ಪನ ತಾಂಡಾ, ವೇಣ್ಯಪ್ಪನ ತಾಂಡಾ,ಹಡಗಲಿ ತಾಂಡಾ, ಕಸ್ತೂರಿ ನಾಯ್ಕತಾಂಡಾ, ಲಿಂಬೇಪ್ಪನ ತಾಂಡಾಗಳಲ್ಲಿ ಜ್ವರದಿಂದ ಬಳಲುವವರ ಸಂಖ್ಯೆಹೆಚ್ಚಾಗಿದೆ. ಹಡಗಲಿ ತಾಂಡಾದಲ್ಲಿ ಅನುಸೂಯಬಾಯಿ ಪಿಕೇಪ್ಪ ಎಂಬುವುರಿಗೆ 15 ದಿನದಿಂದ ಜ್ವರ ಕಾಣಿಸಿಕೊಂಡಿದೆ. ಚಿಕಿತ್ಸೆ ಪಡೆದರು ಗುಣವಾಗುತ್ತಿಲ್ಲ. ಚಂದಮ್ಮ ರಾಜು,ಗ್ರಾಪಂ ಸದಸ್ಯ ಪಾಂಡುರಂಗ,ಸಂತೋಷ ಎಂಬುವರಿಗೆ ಜ್ವರ ಕಾಣಿಸಿಕೊಂಡಿದೆ. ದೇಸಾಯಿ ಭೋಗಾಪೂರ ತಾಂಡಾದಲ್ಲಿ ತಾರಮ್ಮಶಂಕ್ರಪ್ಪ, ಚಂದಮ್ಮ ಪಾಂಡುರಂಗ, ಸುಶಿಲಾ ವೆಂಕಟೇಶ, ಗಮ್ಮವ್ವ ವಸನಪ್ಪ,ಚಂದಮ್ಮ ತಿರುಪತಿ, ಕುಮಾರರಾಮಚಂದ್ರಪ್ಪ ಸೇರಿದಂತೆ 18ಕ್ಕೂಹೆಚ್ಚು ಜನರಿಗೆ ಜ್ವರ ಕಾಣಿಸಿಕೊಂಡಿದೆ.

ಹಡಗಲಿ ಗ್ರಾಮದಲ್ಲಿ ಇಬ್ಬರು ಗ್ರಾಪಂ ಸದಸ್ಯರುಸೇರಿದಂತೆ 45ಕ್ಕೂ ಹೆಚ್ಚು ಜನರುಜ್ವರದಿಂದ ಬಳಲುತ್ತಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ರೋಗಿಗಳ ರಕ್ತ ಮಾದರಿಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಆದರೆ, ಜ್ವರ ಮಾತ್ರಕಡಿಮೆಯಾಗಿಲ್ಲ. ಈ ಬಗ್ಗೆ ಗ್ರಾಪಂಸದಸ್ಯರು ಮಾಕಾಪೂರ ಆಸ್ಪತ್ರೆವೈದ್ಯರಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದುಗ್ರಾಮಸ್ಥರು ಆರೋಪಿಸಿದ್ದಾರೆ.ನಾಗಲಾಪೂರ ಮತ್ತು ಕನ್ನಾಳಗ್ರಾಪಂ ಸೇರಿದಂತೆ ವಿವಿಧೆಡೆ ಜ್ವರ ಕಾಣಿಸಿಕೊಂಡಿದೆ.

ಬೇಸಿಗೆಯ ಬಿಸಲಿನ ತಾಪ ಮತ್ತು ಕೊರೊನಾ ಹಾವಳಿಯಿಂದ ತತ್ತರಿಸಿರುವ ಜನರಿಗೆ ಈಗ ಜ್ವರ ಕಾಣಿಸಿಕೊಂಡಿದ್ದು, ಚಿಕಿತ್ಸೆಗೂ ದುಡ್ಡಿಲ್ಲದೆ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆರೋಗ್ಯ ಇಲಾಖೆ ರೋಗ ಲಕ್ಷಣ ಕಾಣಿಸಿಕೊಂಡವರಿಗೆ ಚಿಕಿತ್ಸೆ ನೀಡಬೇಕಿದೆ.- ಪಾಂಡುರಂಗ, ಗ್ರಾಪಂ ಸದಸ್ಯರು, ಹಡಗಲಿ ತಾಂಡಾ.

Advertisement

ಜ್ವರಕ್ಕೆ ನಗರ ಪ್ರದೇಶಗಳಿಗೆ ತೆರಳುವುದು ಬೇಡ. ಆರೋಗ್ಯ ಇಲಾಖೆವತಿಯಿಂದ ಎಎನ್‌ಎಂ ಕೇಂದ್ರದಲ್ಲಿಯೇ ಚಿಕಿತ್ಸೆ ಕೊಡುವ ವ್ಯವಸ್ಥೆಮಾಡಲಾಗುವುದು.ಡಾ| ನಾರಾಯಣಪ್ಪ, ಡಿಎಚ್‌ಒ, ರಾಯಚೂರು.

 

ದೇವಪ್ಪ ರಾಠೊಡ

Advertisement

Udayavani is now on Telegram. Click here to join our channel and stay updated with the latest news.

Next