ಎಸ್.ಎನ್.ಆರ್. ರೂರಲ್ ಎಜುಕೇಶನ್ ಟ್ರಸ್ಟ್ ವತಿಯಿಂದ ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳನ್ನು ಸೀತಾರಾಮ ರೈ ಅವರು ಸವಣೂರು ಎಂಬ ಪುಟ್ಟ ಹಳ್ಳಿಯಲ್ಲಿ 2001ರಲ್ಲಿ ಸ್ಥಾಪಿಸಿದರು. ಈಗ ಈ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಎಲ್‌ಕೆಜಿಯಿಂದ ಪದವಿಯವರೆಗೆ 1,000 ಮಂದಿ ವಿದ್ಯಾರ್ಥಿಗಳಿದ್ದಾರೆ. 250 ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ವಸತಿನಿಲಯಗಳಲ್ಲಿದ್ದಾರೆ. ಪಿಯುಸಿ ಮತ್ತು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜುಗಳ ಪ್ರತ್ಯೇಕ ಕ್ಯಾಂಪಸ್ ಹೊಂದಿದ್ದು, ತಲಾ 200 ಮೀ. ಓಟದ ಟ್ರಾÂಕ್‌ಗಳ ಎರಡು ಮೈದಾನಗಳಿವೆ.
Advertisement
ಸ್ಮಾರ್ಟ್ ಕ್ಲಾಸ್ ಆಧಾರಿತ ಬೋಧನೆ ಲಭ್ಯವಿದೆ. ಗ್ರಾಮೀಣ ಪರಿಸರದ ಸರ್ವ ಸಜ್ಜಿತ ಶಿಕ್ಷಣ ಸಂಸ್ಥೆಗಳೆಂಬ ಮನ್ನಣೆಗೆ ಪಾತ್ರವಾಗಿದೆ.
ತಂದೆ ಶೀಂಟೂರು ನಾರಾಯಣ ಶೆಟ್ಟಿ ಅವರ ಕನಸನ್ನು ನನಸಾಗಿಸಲು ನಾನು ಈ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದೆ ಎಂದು ಸವಣೂರು ಸೀತಾರಾಮ ರೈ ಅವರು ಗುರುವಾರ ವಿದ್ಯಾಗಂಗೋತ್ರಿ ಕ್ಯಾಂಪಸ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 10ನೇ ತರಗತಿಯಲ್ಲಿ 9 ಬಾರಿ, ದ್ವಿತೀಯ ಪಿಯುಸಿಯಲ್ಲಿ ವಾಣಿಜ್ಯ ವಿಭಾಗದಲ್ಲಿ ನಿರಂತರವಾಗಿ, ವಿಜ್ಞಾನ
ದಲ್ಲಿ 2 ಬಾರಿ ಶೇ. 100 ಫಲಿತಾಂಶ ಸಾಧ್ಯವಾಗಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯವಿದೆ. ಸ್ಕೌಟ್ಸ್ ಗೈಡ್ಸ್ ಘಟಕ, ಅತ್ಯಾಕರ್ಷಕ ನಿಸರ್ಗ ಸೌಂದರ್ಯ, ಹೈನುಗಾರಿಕೆ ವೀಕ್ಷಣೆ, ಚಾರಣ, ಕಂಪ್ಯೂಟರ್ ಬಳಕೆ, ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಗುಮ್ಮಟ ರಚನೆಯ ಕಟ್ಟಡ, ವಿದ್ಯಾರ್ಥಿಗಳ ಸುರಕ್ಷತೆಗೆ ಮೊಬೈಲ್ ಮೂಲಕ ಸಂದೇಶ ರವಾನೆ ಮುಂತಾದ ವಿಶೇಷಗಳಿವೆ.
Related Articles
Advertisement
25 ಎಕರೆ ಕ್ಯಾಂಪಸ್ವಿದ್ಯಾರಶ್ಮಿ ಸಂಸ್ಥೆಗಳು 25 ಎಕರೆಯಷ್ಟು ಕ್ಯಾಂಪಸ್‌ನಲ್ಲಿದೆ. ಇಲ್ಲಿ ಶಿಕ್ಷಣ ಪಡೆದವರು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆಂದು ಸೀತಾರಾಮ ರೈ ವಿವರಿಸಿದರು. ವಿದ್ಯಾರಶ್ಮಿ ಫಿಟ್‌ನೆಸ್ ಸೆಂಟರ್ ಆ. 18ರಂದು ಉದ್ಘಾಟನೆಯಾಗಲಿದೆ. ರೈ: ಬಹುಮುಖೀ ಸಾಧಕ
ಸವಣೂರು ಸೀತಾರಾಮ ರೈ ಅವರು ಸವಣೂರು ಎಂಬ ಪುಟ್ಟ ಹಳ್ಳಿಯ ಸರ್ವತೋಮುಖ ಅಭಿವೃದ್ಧಿಗೆ ಸ್ಫೂರ್ತಿಯಾಗಿದ್ದಾರೆ. ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಸಹಕಾರಿಯಾಗಿ ಅನೇಕ ಕೊಡುಗೆಗಳು, ಸವಣೂರಿನಲ್ಲಿ ವಾಣಿಜ್ಯ ಸಂಕೀರ್ಣ, ಹೈನುಗಾರಿಕೆ, ಪೆಟ್ರೋಲ್ ಬಂಕ್ ಸ್ಥಾಪನೆ, ಪುತ್ತೂರು ತಾಲೂಕಿನ ಸರಕಾರಿ ಶಾಲೆಗಳಿಗೆ ಕೊಡುಗೆ, ಧಾರ್ಮಿಕ ಮುಂದಾಳು ವಾಗಿ ವಿವಿಧ ಯೋಜನೆ, ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘ ಸ್ಥಾಪನೆ, ಸಾಮಾಜಿಕ ಚಟುವಟಿಕೆ, ಪುತ್ತೂರಿನ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷರಾಗಿ ಸೇವೆ, ಕಲೆ-ಸಾಹಿತ್ಯ ಸಂಘಟನೆ, ವೈಯಕ್ತಿಕವಾಗಿ ಅಡಿಕೆ – ಭತ್ತ, ರಬ್ಬರ್, ತೆಂಗು ಕೃಷಿ- ಹೀಗೆ ಬಹುಮುಖೀ ಸಾಧನೆ. ತಂದೆ ದಿ| ಶೀಂಟೂರು ನಾರಾಯಣ ರೈ ಅವರು 2ನೇ ಮಹಾಯುದ್ಧದಲ್ಲಿ ಭಾರತೀಯ ಸೇನಾನಿಯಾಗಿ ಬರ್ಮಾದಲ್ಲಿ ಸೇವಾನಿರತರಾಗಿದ್ದರು.