Advertisement

ಖಾತ್ರಿ, ಸ್ವಚ್ಛ ಭಾರತ ಕಾಮಗಾರಿ ತೃಪ್ತಿದಾಯಕ

01:18 PM Aug 15, 2020 | Suhan S |

ಶಿಡ್ಲಘಟ್ಟ: ಉದ್ಯೋಗ ಖಾತ್ರಿ ಮತ್ತು ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ಜಿಲ್ಲೆಯಲ್ಲಿ ಕೈಗೊಂಡಿರುವ ಕಾಮಗಾರಿಗಳು ಉತ್ತಮವಾಗಿದ್ದು, ಈ ಮಾದರಿಯಲ್ಲಿ ಮತ್ತಷ್ಟು ಸಾಧನೆ ಮಾಡಬೇಕೆಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್‌.ಕೆ.ಅತೀಖ್‌ ಶ್ಲಾಘಿಸಿದರು.

Advertisement

ಜಿಲ್ಲೆಯ ಸರ್‌ ಎಂ.ವಿ.ಜನ್ಮಸ್ಥಳ ಮುದ್ದೇನಳ್ಳಿಯ ಸರ್ಕಾರಿ ಪ್ರೌಢಶಾಲೆ ಮತ್ತು ವಿವಿಧ ತಾಲೂಕಿನಲ್ಲಿ ನರೇಗಾ ಮತ್ತು ಎಸ್‌ಬಿಎಂ ಕಾಮಗಾರಿ ಪರಿಶೀಲಿಸಿದ ಬಳಿಕ ಮಾತನಾಡಿ, ಜಿಲ್ಲೆಯಲ್ಲಿ ಮಳೆ ನೀರು ಸಂರಕ್ಷಣೆ ಮಾಡುವ ಕಾಮಗಾರಿಗಳಿಗೆ ಹೆಚ್ಚು ನೀಡಿ ಗ್ರಾಮಸ್ಥರಿಗೆ ಸರ್ಕಾರಗಳ ಯೋಜ ನೆಗಳ ಕುರಿತು ಮಾಹಿತಿ ನೀಡಿ, ಅವರ ಸಹಭಾಗಿತ್ವದೊಂದಿಗೆ ಅಭಿವೃದ್ಧಿ ಕಾಮಗಾರಿ ನಡೆಸಿ ಜಿಲ್ಲೆ ಮಾದರಿಯಾಗಿ ಪರಿವರ್ತಿಸಬೇಕೆಂದರು.

ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಜಿಲ್ಲಾದ್ಯಂತ ಮಳೆ ನೀರು ಸಂರಕ್ಷಣೆ ಮಾಡುವ ಕಾಮಗಾರಿಗಳು ಕೈಗೊಂಡಿರು ವುದು ತೃಪ್ತಿ ತಂದಿದೆ. ಮುದ್ದೇನ ಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿಕೆಗೆ ಪೂರಕ ಪರಿಸರ ಸೃಷ್ಟಿಸಲು ಪ್ರಾಮಾ ಣಿಕ ಪ್ರಯತ್ನ ಮಾಡಿರುವ ಜಿಪಂ ಸಿಇಒ ಅವರ ಕಾರ್ಯ ಪ್ರಶಂಸಿಸಿದರು.

ತ್ಯಾಜ್ಯ ವಿಲೇವಾರಿ ಘಟಕ: ಜಿಲ್ಲೆಯಲ್ಲಿ ನೀರು ಸಂರಕ್ಷಣೆ ಮಾಡುವ ಜೊತೆಗೆ ಗ್ರಾಮ ನೈರ್ಮಲ್ಯ ಕಾಪಾಡುವ ಸಲುವಾಗಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಗಳ ಕಾಮಗಾರಿಯನ್ನು  ತ್ವರಿತವಾಗಿ ಪೂರ್ಣಗೊಳಿಸ ಬೇ ಕೆಂದು ಸೂಚನೆ ನೀಡಿ, ಗ್ರಾಮಾಂತರ ಪ್ರದೇಶ ದಲ್ಲಿ ಒಣ ಮತ್ತು ಹಸಿ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಮನೆಯ ಮುಂದೆ ಬರುವ ವಾಹನದಲ್ಲಿ ಹಾಕಲು ಜನರಲ್ಲಿ ವ್ಯಾಪಕವಾಗಿ ಜಾಗೃತಿ ಮೂಡಿಸಿ ಎಂದರು.

ಕೂಲಿ ಕಾರ್ಮಿಕರಿಗೆ ಅನುಕೂಲ: ಗ್ರಾಮ ನೈರ್ಮಲ್ಯ ಕಾಪಾಡಲು ಒತ್ತು ನೀಡಬೇಕು, ಗ್ರಾಮಸ್ಥರು ಸಹ ಅಧಿಕಾರಿಗಳೊಂದಿಗೆ ಕೈ ಜೋಡಿಸಿ ಪ್ರತಿಯೊಂದು ಗ್ರಾಮದಲ್ಲಿ ಯಾವ ಕೆಲಸವನ್ನು ಮಾಡಬೇಕು, ರೈತರು ಮತ್ತು ಕೂಲಿ ಕಾರ್ಮಿಕರಿಗೆ ಅನುಕೂಲ ಕಲ್ಪಿಸಲು ಪ್ರಥಮ ಆದ್ಯತೆ ನೀಡಬೇಕೆಂದರು.

Advertisement

ಗೌರಿಬಿದನೂರು ತಾಲೂಕಿನ ವಾಟದ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡುತ್ತಿರುವ ಘನ ತ್ಯಾಜ್ಯ, ವಿಲೇವಾರಿ ಘಟಕಕ್ಕೆ ಹಾಗೂ ವಾಟದಹೊÓಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿರುವ ಆರೋಗ್ಯ ಕೇಂದ್ರಕ್ಕೆ ಮತ್ತು ನರೇಗಾ ಯೋಜನೆಯಡಿ ನಿರ್ಮಾಣ ಮಾಡಿರುವ ವಿವಿಧ ಕಾಮಗಾರಿಗಳನ್ನು ಕಾರ್ಯದರ್ಶಿ ಎಲ್‌. ಕೆ.ಅತೀಕ್‌ ಪರಿಶೀಲನೆ ನಡೆಸಿದರು.

ಜಲ ಜೀವನ್‌ ಮಿಷನ್‌ ಯೋಜನೆಯಡಿ ಚಿಕ್ಕಬಳ್ಳಾಪುರದ ಯದಾರ್ಲಹಳ್ಳಿ ಕೆರೆ ಯಿಂದ 13 ಗ್ರಾಮಗಳಲ್ಲಿರುವ 1426 ಕುಟುಂ ಬ ಗಳಿಗೆ ಮತ್ತು ಗುಡಿಬಂಡೆಯ ಅಮಾನಿ ಬೈರಸಾಗರ ಕೆರೆಯಿಂದ 27 ಗ್ರಾಮಗಳಲ್ಲಿರುವ 1414 ಕುಟುಂಬಗಳಿಗೆ ಕುಡಿವ ನೀರನ್ನು ಕಲ್ಪಿಸಲು ಉದ್ದೇಶಿಸಿ ರುವ ಸ್ಥಳಗಳಿಗೆ ಭೇಟಿ ನೀಡಿ ವಾಸ್ತವತೆ ಪರಿಶೀಲಿಸಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖಾ ಅಧಿಕಾರಿಗಳಿಂದ ಮಾಹಿತಿ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next