ಹೊಳಲ್ಕೆರೆ: ಕ್ಷೇತ್ರದ ಗ್ರಾಮೀಣ ಪ್ರದೇಶದಅಭಿವೃದ್ಧಿ ಹಾಗೂ ಗುಣಮಟ್ಟದ ರಸ್ತೆನಿರ್ಮಾಣಕ್ಕಾಗಿ ಸುಮಾರು 500 ಕೋಟಿರೂ. ಅನುದಾನ ಖರ್ಚು ಮಾಡಲಾಗಿದೆಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷಹಾಗೂ ಶಾಸಕ ಎಂ. ಚಂದ್ರಪ್ಪ ಹೇಳಿದರು.ತಾಲೂಕಿನ ಕುಡಿನೀರುಕಟ್ಟೆಯಲ್ಲಿತಾಳ್ಯ-ಹೊಳಲ್ಕೆರೆ ನೇರ ಮಾರ್ಗನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿಅವರು ಮಾತನಾಡಿದರು.
5 ಕೋಟಿ ರೂ.ಅನುದಾನದಲ್ಲಿ ತಾಳ್ಯದಿಂದ ಹೊಳಲ್ಕೆರೆಗೆನೇರವಾಗಿ ಸಂಚರಿಸಲು ಸಿಮೆಂಟ್ ರಸ್ತೆನಿರ್ಮಾಣ ಮಾಡಲಾಗಿದೆ. ಎಚ್.ಡಿ.ಪುರದಿಂದ ತಾಳ್ಯ ಇಲ್ಲಿಂದ ಹೊಳಲ್ಕೆರೆಗೆನೇರವಾಗಿ ರಸ್ತೆ ಸಂಪರ್ಕ ಇಲ್ಲದ ಪರಿಣಾಮಚಿತ್ರಹಳ್ಳಿ, ಶಿವಗಂಗ ಸುತ್ತುವರಿದುಹೊಳಲ್ಕೆರೆ ಪಟ್ಟಣಕ್ಕೆ ಬರಬೇಕಾಗಿತ್ತು.ಎಚ್.ಡಿ. ಪುರ, ಮತ್ತಿಘಟ್ಟ, ತಾಳ್ಯ,ಸೀರಾಪನಹಳ್ಳಿ, ಅಮ್ಮಂಟೆ, ಕುಡಿನೀರುಕಟ್ಟೆಮಾರ್ಗದಲ್ಲಿ ಹೊಳಲ್ಕೆರೆಯನ್ನು ನೇರವಾಗಿತಲುಪಬಹುದು ಎಂದರು.ತಾಲೂಕಿನಲ್ಲಿ ಸುಮಾರು 300 ಕೋಟಿರೂ. ಅನುದಾನದಲ್ಲಿ ಗ್ರಾಮೀಣ ರಸ್ತೆಗಳನ್ನುಈಗಾಗಲೇ ನಿರ್ಮಾಣ ಮಾಡಲಾಗಿದೆ.ಇದರಿಂದ ಸಾರಿಗೆ ಸಂಪರ್ಕ ಸುಲಭವಾಗಿರೈತರಿಗೆ ವ್ಯಾಪಾರ ವಹಿವಾಟು ನಡೆಸಲುಹಾಗೂ ಸುಲಭ ಸಾರಿಗೆ ಆರ್ಥಿಕವಾಗಿಲಾಭವಾಗಲಿದೆ.
ಇದರ ಜತೆಗೆ ಪ್ರತಿಯೊಂದುಹಳ್ಳಿಯಲ್ಲಿರುವ ಚಿಕ್ಕಪುಟ್ಟ ರಸ್ತೆಗಳನ್ನು ಸಿಸಿರಸ್ತೆಯನ್ನಾಗಿ ನಿರ್ಮಾಣ ಮಾಡಲಾಗಿದೆ.ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆಮೊದಲ ಆದ್ಯತೆ ನೀಡಲಾಗಿದ್ದು, ಬರಗಾಲಪ್ರದೇಶವಾಗಿರುವ ಕ್ಷೇತ್ರವನ್ನು ಬರದಿಂದಮುಕ್ತಗೊಳಿಸುವ ನಿಟ್ಟಿನಲ್ಲಿ ಭದ್ರ ಮೇಲ್ದಂಡೆಯೋಜನೆಯಡಿ ಕೆರೆ ನೀರು ತುಂಬಿಸುವನೀರಾವರಿ ಯೋಜನೆ ಅನುಷ್ಠಾನಕ್ಕೆಮುಂದಾಗಿರುವುದಾಗಿ ತಿಳಿಸಿದರು.
ಜತೆಗೆ ಬರಪೂರ ವಿದ್ಯುತ್‌ಸೌಲಭ್ಯಗಳನ್ನು ಕಲ್ಲಿಸಿಕೊಡುವ ನಿಟ್ಟಿನಲ್ಲಿ500ಕೋಟಿ ಅನುದಾನದ ಶರಾವತಿವಿದ್ಯುತ್ ಯೋಜನೆಯನ್ನು ಜಾರಿಗೊಳಿಸಲುತಾಲೂಕಿನ ಕೋಟೆಹಾಳ್ ಹಾಗೂಭರಮಸಾಗರದಲ್ಲಿ ಎರಡು ವಿದ್ಯುತ್‌ಸ್ಥಾವರಗಳನ್ನು ಸ್ಥಾಪಿಸುವ ಮೂಲಕತಾಲೂಕಿನಲ್ಲಿರುವ ಎಲ್ಲಾ ಚಿಕ್ಕ ಕೇಂದ್ರಗಳಿಗೆವಿದ್ಯುತ್ ಪೂರೈಕೆಗೆ ಒತ್ತು ನೀಡಲಾಗಿದೆ.
ಇದರಿಂದ ಮುಂದಿನ ಮುವತ್ತು ವರ್ಷಗಳರೈತರಿಗೆ ವಿದ್ಯುತ್ ಸಮಸ್ಯೆ ಇರುವುದಿಲ್ಲಎಂದರು.ತಾಲೂಕಿನ ಎಲ್ಲಾ ಗ್ರಾಮಗಳಿಗೂ24 ಗಂಟೆ ಕುಡಿಯುವ ನೀರಿನ ಸೌಲಭ್ಯಕಲ್ಪಿಸಿಕೊಡಲು 350 ಕೋಟಿ ರೂ. ಬಿಡುಗಡೆಮಾಡಿಸಲಾಗಿದೆ. ಮಾರಿಕಣಿವೆಯಿಂದತಾಲೂಕಿನ ಎಲ್ಲಾ ಗ್ರಾಮಗಳಿಗೂ ಶಾಶ್ವತಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವಮೂಲಕ ಕುಡಿಯುವ ನೀರಿನ ಸಮಸ್ಯೆಗಳಿಗೆಶಾಶ್ವತವಾಗಿ ಮುಕ್ತಿ ನೀಡಲಾಗುತ್ತದೆಎಂದು ತಿಳಿಸಿದರು. ಜಿಪಂ ಸದಸ್ಯ ಎಂ.ಬಿ.ತಿಪ್ಪೇಸ್ವಾಮಿ, ಪಟ್ಟಣ ಪಂಚಾಯಿತಿಉಪಾಧ್ಯಕ್ಷ ಕೆ.ಸಿ. ರಮೇಶ್, ಸದಸ್ಯ ಪಿ.ಎಚ್.ಮುರುಗೇಶ್, ಗುತ್ತಿಗೆದಾರ ಪ್ರವೀಣ್‌ಕುಮಾರ್, ರಾಜಶೇಖರ್ ಸೇರಿದಂತೆ ಗ್ರಾಮಪಂಚಾಯಿತಿ ಸದಸ್ಯರು ಹಾಗೂ ಗ್ರಾಮದಮುಖಂಡರು ಉಪಸ್ಥಿತರಿದ್ದರು.