Advertisement

ಗ್ರಾಮೀಣ ಬ್ಯಾಂಕ್‌ ಪರೀಕ್ಷೆ ಸಿದ್ಧತೆ ಹೇಗೆ?

03:48 AM Jun 27, 2021 | Team Udayavani |

ಬ್ಯಾಂಕ್‌ ಸಿಬಂದಿ ನೇಮಕಾತಿ ಸಂಸ್ಥೆ ದೇಶದ 43 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌(ಆರ್‌ಆರ್‌ಬಿ)ಗಳಲ್ಲಿ ಖಾಲಿ ಇರುವ ನಾನಾ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು 11,000 ಹುದ್ದೆಗಳಿಗೆ ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಗಳಲ್ಲಿ ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆ ನಡೆಸಲು ತೀರ್ಮಾನಿಸಿದೆ.

Advertisement

ಯಾವ ಹುದ್ದೆಗಳು?
ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಹಾಗೂ ಧಾರವಾಡದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌: 478 ಹುದ್ದೆ. ಆಫೀಸ್‌ ಅಸಿಸ್ಟೆಂಟ್‌ ಅಂದರೆ ಮಲ್ಟಿ ಪರ್ಪಸ್‌ಗೆ 261 ( ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ 160 ಹಾಗೂ ಧಾರವಾಡದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನಲ್ಲಿ 101) ಹುದ್ದೆಗಳಿದ್ದು ಆಫೀಸರ್‌ -ಸ್ಕೇಲ…-1 ಗೆ 217 ಹುದ್ದೆಗಳಿವೆ.

ಅರ್ಹತೆ ಏನು?
ಯಾವುದೇ ಪದವೀಧರರು ಅರ್ಜಿ ಸಲ್ಲಿಸ ಬಹುದು. ಜತೆಗೆ ಕಂಪ್ಯೂಟರ್‌ ಜ್ಞಾನ ಬೇಕು. ಸ್ಥಳೀಯ ಭಾಷೆಯಲ್ಲಿ ಬರೆಯಲು ಮತ್ತು ಓದಲು ತಿಳಿದಿರಬೇಕು. ಆಫೀಸ್‌ ಅಸಿಸ್ಟೆಂಟ್‌ ಹುದ್ದೆಗೆ 18ರಿಂದ 28 ವರ್ಷ ಮತ್ತು ಆಫೀಸರ್‌ ಹುದ್ದೆಗೆ 18ರಿಂದ 30 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ವಯೋಮಿತಿ ಸಡಿಲಿಕೆ
ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿಗೆ 3 ವರ್ಷ, ಅಂಗವಿಕಲರಿಗೆ 10 ವರ್ಷಗಳು.
ಅರ್ಜಿ ಶುಲ್ಕ: ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ -850, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ -175.

ಪರೀಕ್ಷಾ ವಿಧಾನವೇನು?
ಬ್ಯಾಂಕಿಂಗ್‌ ಪರೀಕ್ಷೆಗಳು IAS ಹಾಗೂ KAS ಮಾದರಿ ಯಲ್ಲಿ ಎರಡು ಹಂತಗಳಲ್ಲಿ ನಡೆಯಲಿವೆ. ಪೂರ್ವಭಾವಿ (prelims), ಮುಖ್ಯ ಪರೀಕ್ಷೆ (mains). ಐಬಿಪಿಎಸ್‌ನ ಹಾಗೂ ಆರ್‌ಆರ್‌ಬಿ ಗುಮಾಸ್ತ ಹು¨ªೆಗೆ ಸಂದರ್ಶನ ಇರುವುದಿಲ್ಲ. ಪೂರ್ವಭಾವಿ ಪರೀಕ್ಷೆ ಮೊದಲ ಹಂತದ ಅರ್ಹತಾ ಪರೀಕ್ಷೆಯಾಗಿದ್ದು, ಇದರಲ್ಲಿ ಅಭ್ಯರ್ಥಿ ಗಳನ್ನು 1:20ರಂತೆ ಮುಂದಿನ ಹಂತಕ್ಕೆ ಆಯ್ಕೆ ಮಾಡ ಲಾಗುತ್ತದೆ. ಪೂರ್ವಭಾವಿಯಲ್ಲಿ ಪಡೆದ ಅಂಕಗಳು ಅರ್ಹತಾ ಪಟ್ಟಿಗೆ ಮಾತ್ರ ಮೀಸಲಾಗಿದ್ದು ಅದರಲ್ಲಿ ಪಡೆದ ಅಂಕಗಳನ್ನು ಮುಂದೆ ಪರಿಗಣಿಸಲಾಗುವುದಿಲ್ಲ.

Advertisement

Exam Pattern ಹೇಗಿದೆ?
ಆರ್‌ಆರ್‌ಬಿಯ ಪೂರ್ವಭಾವಿ ( Prelims)ಪರೀಕ್ಷೆಯು ರೀಸನಿಂಗ್‌ ಹಾಗೂ ನ್ಯೂಮರಿಕಲ್‌ ಎಬಿಲಿಟಿ 2 ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಪ್ರಶ್ನೆಗಳು ಕ್ರಮವಾಗಿ 40 ರಂತೆ ಒಟ್ಟು 80 ಪ್ರಶ್ನೆಗಳಿದ್ದು 80 ಅಂಕಗಳಿಗೆ ಸೀಮಿತವಾಗಿವೆ. ಒಟ್ಟು ಸಮಯ 45 ನಿಮಿಷ. ಐಬಿಪಿಎಸ್‌ ಸಂಸ್ಥೆ ಪ್ರತೀ ಪತ್ರಿಕೆಗೂ ನಿರ್ದಿಷ್ಟ ಸಮಯವನ್ನು ಕೆಲವೊಮ್ಮೆ ನಿಗದಿಪಡಿಸುತ್ತದೆ. Sectional cut&offs, Overall cut&offs,, ನಿಗದಿ ಪಡಿಸಲಾಗಿದ್ದು, ಪ್ರತೀ ತಪ್ಪು ಉತ್ತರಕ್ಕೆ ಆಯಾ ವಿಭಾಗಕ್ಕೆ ನಿಗದಿಪಡಿಸಿದ ಆಂಕಗಳಿಂದ 0.25 ಅಂಕಗಳ ಕಡಿತವಿದೆ (ಋಣಾತ್ಮಕ ಅಂಕ). ಮುಖ್ಯ ಪರೀಕ್ಷೆಯಲ್ಲಿ 200 ಪ್ರಶ್ನೆಗಳಿದ್ದು ಗರಿಷ್ಟ 200 ಅಂಕಗಳಿಗೆ ನಡೆ ಯಲಿದ್ದು ಪರೀûಾ ಅವಧಿ ಎರಡು ಗಂಟೆ. ಇದರಲ್ಲಿ 5 ವಿಭಾಗಗಳಿಗೆ ಪರೀಕ್ಷೆಯಲ್ಲಿ ನೀವು ಯಶಸ್ವಿಯಾಗ ಬೇಕಾದರೆ ಗೊತ್ತಿರುವ ಪ್ರಶ್ನೆಗಳನ್ನು ಮಾತ್ರ ಉತ್ತರಿಸಿ.

ಸ್ವಯಂ ವಿಶ್ಲೇಷಣೆ ಮಾಡಿಕೊಳ್ಳಿ
ಯಾವ ವಿಷಯ ನಿಮಗೆ ಸುಲಭ ಹಾಗೂ ಕಠಿನ ಎಂಬುದನ್ನು ನಿರ್ಧರಿಸಿ. ಸ್ವಯಂ ವಿಶ್ಲೇಷಣೆ ನಿಮ್ಮ ಪರೀಕ್ಷೆಯ ಸಿದ್ಧತೆಯಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಮೊದಲಿಗೆ Basic concepts, ಬೇರೆ ಬೇರೆ ವಿಷಯ ಸಂಬಂಧ ಸಂಗ್ರಹಿಸಿ ಹಾಗೂ ವಿವರವಾಗಿ ಅಭ್ಯಸಿಸಿ. ಮೂಲ ಪರಿಕಲ್ಪನೆ ಸರಿ ಅಥೆìçಸಿಕೊಳ್ಳದಿದ್ದಲ್ಲಿ ಪರೀಕ್ಷೆಯಲ್ಲಿ ಅದರ ಮೇಲೆ ಕೊಟ್ಟ ಪ್ರಶ್ನೆ ಗಳನ್ನು ಬಿಡಿಸಲು ಸಾಧ್ಯವಿಲ್ಲ ಎಂಬುದನ್ನು ಮರೆಯಬೇಡಿ.

ಯಾವುದೇ ಕಾರಣಕ್ಕೂ ನೇರವಾಗಿ Mock Testಗೆ ಪ್ರಯತ್ನಿಸಬೇಡಿ. ಕಾರಣ ಅಂಕ ಗಳಿಸಲಾಗದಿದ್ದಲ್ಲಿ ನಿಮ್ಮ ಮನೋಸ್ಥೆçರ್ಯ ಕುಗ್ಗಿ ಹೋಗಬಹುದು. ಪ್ರತೀ ವಿಷಯಗಳಿಗೆ ಅಧ್ಯಾಯವಾರು ಪ್ರಶ್ನೆಗಳನ್ನು ಉತ್ತರಿಸಿದಾಗ ವಿಷಯದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ. ಕನಿಷ್ಠ ಪ್ರತೀ ವಿಷಯಗಳ ಶೇ 50 ರಷ್ಟಾದರೂ ಹಿಡಿತ ಸಾಧಿಸಿದ ಅನಂತರವೇ BPS Site/ಇತರ ಸೈಟ್‌ ನಲ್ಲಿರುವ ಅಣಕು ಪರೀಕ್ಷೆಗೆ ಪ್ರಯತ್ನಿಸಿ. ಪರೀಕ್ಷೆ ಮುಗಿಯುವವರೆಗೆ ದಿನದ ಕನಿಷ್ಠ 4 ರಿಂದ 6 ಗಂಟೆಗಳಷ್ಟಾದರೂ ಮೀಸಲಿಡಿ.ಅದು ಪ್ರಿಲಿಮ್ಸ… ಹಾಗೂ ಮುಖ್ಯ ಪರೀಕ್ಷೆಗಳಿಗೆ.

ಲಕ್ಷಾಂತರ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗು ವುದರಿಂದ ಮೊದಲ ದಿನದ ಮೊದಲ ತಂಡದ ಪರೀಕ್ಷೆಯ ಕುರಿತು ಅಂತರ್ಜಾಲದಲ್ಲಿ Education websiteಗಳು ಪ್ರಕಟಿಸುವ ವಿಶ್ಲೇಷಣೆಗಳು ನಿಮಗೆ ದಿಕ್ಸೂಚಿಯಾಗಬಲ್ಲದು. ಮುಖ್ಯವಾಗಿ ಪ್ರಶ್ನೆ ಪತ್ರಿಕೆ ಸ್ವರೂಪ ಕೇಳಿರುವ ವಿಷಯ ಹಾಗೂ ಪ್ರಶ್ನೆಗಳನ್ನು ಬಿಡಿಸುವ ಸಾಮರ್ಥ್ಯ ಮಧ್ಯಮ, ಕಠಿನ ಅಥವಾ ಸುಲಭ ಎಂಬುದು ತಿಳಿಯುತ್ತದೆ. ಅರ್ಹತಾ ಪರೀಕ್ಷೆಯಲ್ಲಿ 60-70 ರಷ್ಟಾದರೂ ಅಂಕ ಗಳಿಸಲು ಪ್ರಯತ್ನಿಸಿ, ಹಾಗೂ ಮುಖ್ಯ ಪರೀಕ್ಷೆಯಲ್ಲಿ ಹಿಂದಿನ ವರ್ಷದ Cut&off, ಅಂಕಗಳು ಸಾಮಾನ್ಯ ವರ್ಗದ್ದು 95 ರಿಂದ 113, ಅಂಕಗಳಾಗಿದ್ದು, ಒಬಿಸಿ/ಎಸ್ಸಿ/ಎಸ್ಟಿ ವರ್ಗದವರಿಗೆ 79 ರಿಂದ 102 ಅಂಕಗಳಾಗಿವೆ. ಈ ಸಲ ಕುಳಿತುಕೊಳ್ಳುವ ಒಟ್ಟು ಅಭ್ಯರ್ಥಿಗಳ ಮೇಲೆ ಅಂಕಗಳು ನಿರ್ಧಾರವಾಗುವುದರಿಂದ ಇದು ಬದಲಾಗುವ ಎಲ್ಲ ಸಾಧ್ಯತೆಗಳಿವೆ ಹಾಗೂ ಇದು ಕೇವಲ ದಿಕ್ಸೂಚಿ ಅಷ್ಟೆ.

ಪರೀಕ್ಷೆ ಎಲ್ಲಿ?
ರಾಜ್ಯದ 12 ಜಿಲ್ಲಾ ಕೇಂದ್ರಗಳಲ್ಲಿ ಪೂರ್ವಭಾವಿ ಪರೀಕ್ಷೆ 9 ಜಿಲ್ಲಾ ಕೇಂದ್ರಗಳಲ್ಲಿ ಆನ್‌ಲೈನ್‌ನಲ್ಲಿ ಮುಖ್ಯ ಪರೀಕ್ಷೆ.

ಅರ್ಜಿ ಸಲ್ಲಿಸಲು ಕೊನೆಯ ದಿನ : 28-06-2021

ಅಧಿಸೂಚನೆಯ ಲಿಂಕ್‌: https://www.ibps.in/wp-content/uploads/Advt-_CRP-RRB-X_final_2206.pdf

ಹೆಚ್ಚಿನ ಮಾಹಿತಿಗೆ ವೆಬ್: https://www.ibps.in/

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next