Advertisement
ಕುದೂರು: ಪಕ್ಕದ ಬೆಂಗಳೂರು ನಗರಕ್ಕೆ ಸಮೀತವಾಗಿದ್ದ ಗಾಂಜಾ ಮಾರಾಟ ಜಾಲಾ ಇದೀಗ ಮಾಗಡಿ ತಾಲೂಕಿಗೂ ವ್ಯಾಪ್ತಿಸಿದೆ. ಜಾಲವೊಂದು ಕುದೂರು ಸುತ್ತಮುತ್ತ ಪ್ರದೇಶದಲ್ಲಿ ಗಾಂಜಾ, ಅಫೀಮು ಯುವಜನರ ಕೈಗೆ ತಲುಪಿಸುವ ಕೆಲಸ ಮಾಡುತ್ತಿದೆ ಎಂಬ ಸುದ್ದಿ ಸಾರ್ವಜನಿಕ ವಲಯದಲ್ಲಿ ಹರಿ ದಾಡುತ್ತಿದೆ.
Related Articles
Advertisement
ಮಕ್ಕಳ ಮೇಲೆ ನಿಗಾ ಇರಲಿ: ಗಾಂಜಾ ನಶೆಗೆ ಯುವ ಸಮುದಾಯ ಆಕರ್ಷಿತರಾಗುತ್ತಿರುವು ದಕ್ಕೆ ಪಾಲಕರು, ಮಕ್ಕಳ ಮೇಲೆ ಹೆಚ್ಚಿನ ನಿಗಾ ಇರಿಸದಿರುವುದು ಪ್ರಮುಖ ಕಾರಣ ಎನ್ನುವ ಮಾತುಗಳು ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಪಾಲಕರು ಮಕ್ಕಳಚಲನವಲನ, ಯಾರೊಂದಿ ಗೆ ಸ್ನೇಹ ಬೆಳೆಸಿದ್ದಾರೆ ಎನ್ನುವ ಬಗ್ಗೆ ತಿಳಿದುಕೊಂಡಿರಬೇಕು. ಇಲ್ಲವಾದರೆ ಮಕ್ಕಳು ಕುಟುಂಬ ಕ್ಕೆ ಮಾತ್ರವಲ್ಲದೆ, ಸಮಾಜಕ್ಕೂ ಹೊರೆಯಾಗುವುದು ನಿಶ್ಚಿತ.
ಗ್ರಾಮೀಣ ಭಾಗಕ್ಕೂ ಹಬ್ಬಿದೆ ವ್ಯಸನ: ನಗರ ಪ್ರದೇಶಕ್ಕೆ ಸೀಮಿತ ಆಗಿದ್ದ ಗಾಂಜಾ ಸೇವನೆ ಇದೀಗ ಗ್ರಾಮೀಣ ಭಾಗಕ್ಕೂ ವ್ಯಾಪಿಸುತ್ತಿದೆ.ವಸತಿರಹಿತ ಪ್ರದೇಶ, ಶಾಲಾ ಮೈದಾನಗಳುವ್ಯಸನಿಗಳು ಮತ್ತು ಪೂರೈಕೆದಾರರ ನೆಚ್ಚಿನ ತಾಣಗಳಾಗಿವೆ.
ಗ್ರಾಮೀಣ ಪ್ರದೇಶಕ್ಕೆ ಗಾಂಜಾ ಮಾರಾಟ ಮಾಡುವವರ ಬಗ್ಗೆಇಲಾಖೆಗೆ ಮಾಹಿತಿ ಇದೆ. ಸಿಬ್ಬಂದಿಈಗಾಗಲೇ ಕಾರ್ಯಪ್ರವೃತ್ತರಾಗಿ ದ್ದಾರೆ. ಕೆಲವರನ್ನು ಬಂಧಿಸಿದ್ದಾರೆ. ಸದ್ಯದಲ್ಲಿಯೇ ಉಳಿದವರನ್ನು ವಶಕ್ಕೆಪಡೆಯಲಾಗುವುದು. ● ಎಸ್.ಗಿರೀಶ್, ಎಸ್ಪಿ.
ಗ್ರಾಮೀಣ ಪ್ರದೇಶಗಳಿಗೆ ಗಾಂಜಾ ಸರಬರಾಜು ಮಾಡುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು. ವ್ಯಸನಿಗಳನ್ನು ಹಿಡಿದು ವಿಚಾರಿಸಿ ಗಾಂಜಾ ಸಿಗುವ ಮೂಲ ಪತ್ತೆ ಹಚ್ಚಬೇಕು. – ಯತಿರಾಜು, ತಾಪಂ ಮಾಜಿ ಅಧ್ಯಕ್ಷ.