Advertisement

ಏಶ್ಯನ್‌ ಗೇಮ್ಸ್‌ ಹಾಕಿ: ರೂಪಿಂದರ್‌, ಆಕಾಶ್‌ದೀಪ್‌ ವಾಪಸ್‌

06:00 AM Jul 10, 2018 | |

ಹೊಸದಿಲ್ಲಿ: ಮುಂದಿನ ತಿಂಗಳು ನಡೆಯಲಿರುವ ಏಶ್ಯನ್‌ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತೀಯ ಪುರುಷರ ಹಾಕಿ ತಂಡವನ್ನು “ಹಾಕಿ ಇಂಡಿಯಾ’ ಸೋಮವಾರ ಪ್ರಕಟಿಸಿದೆ. ಇತ್ತೀಚೆಗೆ ನಡೆದ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಯಿಂದ ದೂರ ಉಳಿದಿದ್ದ ಹಿರಿಯ ಆಟಗಾರ ರೂಪಿಂದರ್‌ ಸಿಂಗ್‌ ಹಾಗೂ ಸ್ಟ್ರೈಕರ್‌ ಆಕಾಶ್‌ದೀಪ್‌ ಸಿಂಗ್‌ ತಂಡಕ್ಕೆ ಮರಳಿದ್ದಾರೆ.

Advertisement

ರಮಣದೀಪ್‌ ಹೊರಗೆ
ಏಶ್ಯನ್‌ ಗೇಮ್ಸ್‌ ತಂಡದಲ್ಲಿ ಜರ್ಮಾನ್‌ ಸಿಂಗ್‌ ಸ್ಥಾನಕ್ಕೆ ರೂಪಿಂದರ್‌ ಆಯ್ಕೆಯಾದರೆ, ಗಾಯಾಳು ರಮಣ ದೀಪ್‌ ಬದಲಿಗೆ ಆಕಾಶ್‌ದೀಪ್‌ಗೆ ಅವಕಾಶ ಕಲ್ಪಿಸಲಾಗಿದೆ. ರೂಪಿಂದರ್‌ ಸಿಂಗ್‌ ಪುನರಾಗಮನದಿಂದ ರಕ್ಷಣಾ ವಿಭಾಗಕ್ಕೆ ಮತ್ತಷ್ಟು ಶಕ್ತಿ ಬಂದಂ ತಾಗಿದೆ. ತಂಡದ ಸಾರಥ್ಯವನ್ನು ಗೋಲ್‌ಕೀಪರ್‌ ಪಿ.ಆರ್‌. ಶ್ರೀಜೇಶ್‌ ಅವರಿಗೇ ವಹಿಸಲಾಗಿದ್ದು, ಚಿಂಗ್ಲೆನ್ಸಾನ ಸಿಂಗ್‌ ಉಪನಾಯಕನಾಗಿ ಮುಂದು ವರಿದಿದ್ದಾರೆ.

18ನೇ ಏಶ್ಯನ್‌ ಗೇಮ್ಸ್‌ ಆಗಸ್ಟ್‌ 18ರಿಂದ ಸೆ. 2ರ ವರೆಗೆ ಇಂಡೋ ನೇಶ್ಯದ ರಾಜಧಾನಿ ಜಕಾರ್ತಾ ಹಾಗೂ ಪಾಲೆಂಬಂಗ್‌ ನಗರಗಳಲ್ಲಿ ನಡೆಯಲಿದೆ. 2014ರ ಏಶ್ಯನ್‌ ಗೇಮ್ಸ್‌ ಫೈನಲ್‌ನಲ್ಲಿ ಪಾಕಿಸ್ಥಾನವನ್ನು  ಮಣಿಸಿದ್ದ ಭಾರತ ಚಿನ್ನದ ಪದಕದೊಂದಿಗೆ ಸಂಭ್ರಮಿಸಿತ್ತು. ಜಕಾರ್ತಾದಲ್ಲೂ ಈ ಸಾಧನೆಯನ್ನು ಪುನರಾವರ್ತಿಸಿ 2020ರ ಟೋಕಿಯೊ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆಯುವುದು ಭಾರತದ ಗುರಿಯಾಗಿದೆ.

ಭಾರತ ತಂಡ
ಗೋಲ್‌ ಕೀಪರ್:
ಪಿ.ಆರ್‌. ಶ್ರೀಜೇಶ್‌ (ನಾಯಕ), ಕೃಷ್ಣನ್‌ ಬಿ. ಪಾಠಕ್‌.
ಡಿಫೆಂಡರ್: ಹರ್ಮನ್‌ಪ್ರೀತ್‌ ಸಿಂಗ್‌, ವರುಣ್‌ ಕುಮಾರ್‌, ಬೀರೇಂದ್ರ ಲಾಕ್ರಾ, ಸುರೇಂದರ್‌ ಕುಮಾರ್‌, ರೂಪಿಂದರ್‌ ಪಾಲ್‌ ಸಿಂಗ್‌, ಅಮಿತ್‌ ರೋಹಿದಾಸ್‌.
ಮಿಡ್‌ ಫೀಲ್ಡರ್: ಮನ್‌ಪ್ರೀತ್‌ ಸಿಂಗ್‌, ಚಿಂಗ್ಲೆನ್ಸಾನ ಸಿಂಗ್‌, ಸಿಮ್ರನ್‌ಜಿàತ್‌ ಸಿಂಗ್‌, ಸರ್ದಾರ್‌ ಸಿಂಗ್‌, ವಿವೇಕ್‌ ಸಾಗರ್‌ ಪ್ರಸಾದ್‌.
ಫಾರ್ವರ್ಡ್ಸ್‌: ಎಸ್‌.ವಿ. ಸುನೀಲ್‌, ಮನ್‌ದೀಪ್‌ ಸಿಂಗ್‌, ಆಕಾಶ್‌ದೀಪ್‌ ಸಿಂಗ್‌, ಲಲಿತ್‌ಉಪಾಧ್ಯಾಯ, ದಿಲ್‌ಪ್ರೀತ್‌ ಸಿಂಗ್‌.

Advertisement

Udayavani is now on Telegram. Click here to join our channel and stay updated with the latest news.

Next