Advertisement
ಜ. 15ರ ಅಪರಾಹ್ನ ಬದಿಯಡ್ಕ ಪೊಲೀಸರಿಗೆ ದೂರವಾಣಿ ಕರೆ ಮಾಡಿದ ಜೈಸನ್ ತನ್ನ ಮನೆಗೆ ನಕ್ಸಲರು ಬಂದಿದ್ದಾರೆ ಎಂದು ಮಾಹಿತಿ ನೀಡಿದ್ದರು. ಪೊಲೀಸರು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಸಂಜೆ ಮತ್ತೆ ಕರೆ ಮಾಡಿ ಇಬ್ಬರು ಬಂದೂಕುಧಾರಿ ಮಹಿಳೆಯರು ಮನೆಗೆ ಬಂದು ಅಕ್ಕಿ, ತರಕಾರಿ ಪಡೆದುಕೊಂಡು ಹೋಗಿದ್ದಾರೆ ಎಂದು ಹೇಳಿದ ಕಾರಣ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸ್ಥಳಕ್ಕೆ ತೆರಳಿ ಮಾಹಿತಿ ಕಲೆ ಹಾಕಿದರು. ಸ್ಥಳೀಯರೂ ಪೊಲೀಸರಿಗೆ ಕಾರ್ಯಾಚರಣೆ ನೆರವಾದರು. ಆದರೆ ನಕ್ಸಲರು ಬಂದಿರುವ ಯಾವುದೇ ಕುರುಹು ಪತ್ತೆಯಾಗಲಿಲ್ಲ. ಇದೇ ವೇಳೆ ಜೈಸನ್ ಅವರ ಪತ್ನಿ “ಅಂತಹ ಘಟನೆಯೇ ನಡೆದಿಲ್ಲ’ ಎಂದು ಪತಿಯ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ.
ನಕ್ಸಲರು ಬಂದಿದ್ದಾರೆ ಎನ್ನಲಾದ ಸ್ಥಳ ಅರಣ್ಯ ಪ್ರದೇಶವನ್ನು ಹೊಂದಿಲ್ಲ.ಸಾಕಷ್ಟು ಜನವಸತಿ ಪ್ರದೇಶವಾಗಿರು ವುದರಿಂದ ಪೊಲೀಸರು ಜೈಸನ್ ಹೇಳಿಕೆಯ ಮೇಲೆ ಸಂಶಯ ವ್ಯಕ್ತಪಡಿಸಿದ್ದಾರೆ. ಸುಳ್ಳು ಮಾಹಿತಿ ನೀಡಿ ಪೊಲೀಸರನ್ನು ದಾರಿ ತಪ್ಪಿಸಿದ್ದು ದೃಢವಾದರೆ ಆತನ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.