Advertisement

ಮೂರ್ಖರು ಹರಿಬಿಟ್ಟ ವದಂತಿ

10:57 AM Jun 06, 2020 | mahesh |

ಹೊಸದಿಲ್ಲಿ: ಕೋವಿಡ್, ಅದರ ಲಸಿಕೆಯೊಂದಿಗೆ ತಮ್ಮನ್ನು ತಳುಕು ಹಾಕಿ ಇಂಟರ್‌ನೆಟ್‌ನಲ್ಲಿ ಹರಿಬಿಟ್ಟಿರುವ ಕೆಲವು ವಿಲಕ್ಷಣ ಮತ್ತು ಹಾಸ್ಯಭರಿತ ವದಂತಿಗಳು ನಿರಾಧಾರ. ಇವುಗಳು ಮೂರ್ಖರು ಹರಿಬಿಟ್ಟಿರುವ ವದಂತಿ ಎಂದು ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌ ಹೇಳಿದ್ದಾರೆ.

Advertisement

ಸುಳ್ಳು ಸುದ್ದಿಗಳ ಬಗ್ಗೆ ಅಪಹಾಸ್ಯ ಮಾಡಿರುವ ಗೇಟ್ಸ್‌, “ವದಂತಿಗಳು ಮೂರ್ಖತನದಿಂದ ಕೂಡಿದೆ’ ಎಂದಿದ್ದಾರೆ. “ಬಿಲ್‌ ಗೇಟ್ಸ್‌ ಕೊರೊನಾ ವೈರಸ್‌ ಹರಡುತ್ತಿದ್ದಾರೆ’, “ಲಸಿಕೆಯ ಮೂಲಕ ಗೇಟ್ಸ್‌ ಜನರ ದೇಹದೊಳಗೆ ಮೈಕ್ರೊ ಚಿಪ್‌ ಅಳವಡಿಸುತ್ತಿದ್ದಾರಂತೆ’ ಎಂಬ ವದಂತಿಗಳು ಅಂತರ್ಜಾ ಲವನ್ನು ಆವರಿಸಿಕೊಂಡಿವೆ. ಆದರೆ ಮೈಕ್ರೋಚಿಪ್‌ಗೆ ಸಂಬಂಧಿಸಿದ ವ್ಯವಹಾರದಲ್ಲಿ ತಾನೆಂದೂ ಭಾಗಿಯಾಗಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next