Advertisement
ಜಿಲ್ಲಾ ಆಸ್ಪತ್ರೆಗೆ ಸೇರಿದ ಸುಮಾರು 12 ಕೋಟಿ ರೂ. ಆಸ್ಪತ್ರೆ ಬಳಕೆದಾರರ ನಿಧಿ ಈ ಮೊದಲು ಕೇಂದ್ರ ಸ್ವಾಮ್ಯದ ಕಾರ್ಪೋರೇಷನ್ ಬ್ಯಾಂಕ್‌ನಲ್ಲಿ ಠೇವಣಿ ಇಡಲಾಗಿತ್ತು. 2016 ರಲ್ಲಿ ಅದನ್ನು ಹೆಚ್ಚಿನ ಬಡ್ಡಿ ಆಸೆಗಾಗಿ ಖಾಸಗಿ ಬ್ಯಾಂಕ್ ಆಗಿರುವ ಎಚ್‌ಡಿಎಫ್ಸಿ ಬ್ಯಾಂಕ್‌ನಲ್ಲಿ ಠೇವಣಿ ಪೂರ್ಣವಾಗಿ ಆಮಿಷಕ್ಕೆ ಒಳಗಾಗಿ ವರ್ಗಾವಣೆ ಮಾಡಲಾಯಿತು ಎಂಬಮಾತುಗಳು ಆಸ್ಪತ್ರೆ ವಲಯದಲ್ಲಿ ಕೇಳಿಬಂದವು.
ನುಣುಚಿಕೊಂಡರು. ಹಿಂದಿದ್ದ ಬ್ಯಾಂಕ್‌ಗೆ ಹಣ ವರ್ಗಾವಣೆ: ಈ ಚರ್ಚೆ ಆರಂಭವಾದ ಕೆಲ ದಿನಗಳಲ್ಲೇ ಮತ್ತೆ 12 ಕೋಟಿ ರೂ. ಹಣವನ್ನು ಎಚ್‌ಡಿಎಫ್ಸಿ ಬ್ಯಾಂಕ್ ನಿಂದ ಡ್ರಾ ಮಾಡಿ ಆ ಹಣವನ್ನು ಆಸ್ಪತ್ರೆಯ ಆವರಣದಲ್ಲೇ ಇರುವ ಎಸ್‌ಬಿಐ ಬ್ಯಾಂಕ್ ಶಾಖೆಯಲ್ಲಿ ಇಡಲು ನಿರ್ಧರಿಸಿದರು. ಆದರೆ, ಅಲ್ಲಿ ಠೇವಣಿ ಹಣಕ್ಕೆ ಕಡಿಮೆ ಬಡ್ಡಿ ಎಂಬ ಕಾರಣಕ್ಕೆ ಮತ್ತೆ ಹಣವನ್ನು ಹಿಂದೆ ಇದ್ದ ಕಾರ್ಪೊರೇಷನ್ ಬ್ಯಾಂಕ್‌ಗೆ ವರ್ಗಾಯಿಸಿ ಠೇವಣಿ ಇಟ್ಟಿದ್ದಾರೆ. ಇದು ಕೂಡ ಪ್ರಧಾನ ಕಾರ್ಯದರ್ಶಿ ಮಂಜುಳಾ ಅವರ ಆದೇಶದ ಮೇರೆಗೆ ಎಂಬ ಅಂಶ ಬೆಳಕಿಗೆ ಬಂದಿದೆ.
Related Articles
Advertisement
ಬ್ಯಾಂಕ್ ಬದಲಾಯಿಸಲು ಕಾರಣವೇನು? ಜಿಲ್ಲಾ ಆಸ್ಪತ್ರೆಯ ಬಳಕೆದಾರರ ಹಣವನ್ನು ತಮ್ಮಿಷ್ಟಕ್ಕೆ ಬಂದ ಹಾಗೆ ಒಂದು ಬ್ಯಾಂಕ್‌ನಿಂದ, ಮತ್ತೂಂದು ಬ್ಯಾಂಕ್‌ಗೆ ಠೇವಣಿ ಇಡಲು ಸರ್ಕಾರ ಅಥವಾ ಇಲಾಖೆ ಹಿರಿಯ ಅಧಿಕಾರಿಗಳ ಪೂರ್ವಾನುಮತಿ ಪಡೆಯಲಾಗಿತ್ತೆ. ಇಂತಹ ನಿರ್ಧಾರ ಕೈಗೊಂಡ ನಂತರ ಈಗ ಪುನಃ ಬ್ಯಾಂಕ್ ಬದಲಾಯಿಸಿರುವುದಕ್ಕೆ ಕಾರಣವೇನು? ಇದು ಯಾವ ಅಧಿಕಾರಿಗಳಿಂದ ಆಗಿರುವ ತಪ್ಪು ನಿರ್ಧಾರ? ಈ ಬಗ್ಗೆ ಸಮಗ್ರ ತನಿಖೆ ಮಾಡುವ ಅಗತ್ಯ ಇದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ಸಾಕ್ಷಾಧಾರ ಲಭಿಸಿದರೆ ಕ್ರಮ: ಮಂಡ್ಯ ವೈದ್ಯಕೀಯ ಕಾಲೇಜಿನಲ್ಲಿ ನಡೆಯುವ ಪ್ರತಿಯೊಂದು ಅವಾಂತರ, ಗೊಂದಲಗಳು ನನ್ನ ಗಮನದಲ್ಲಿದೆ. ಆದರೆ, ಸೂಕ್ತ ಸಾಕ್ಷ್ಯಾಧಾರಗಳು ಲಭಿಸಿದಲ್ಲಿ ಕ್ರಮ ಜರುಗಿಸುವುದಾಗಿ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುಳಾ ಅವರು ಹೇಳುವ ಮಾತು.
ನಿವೃತ್ತ ನೌಕರರದ್ದೇ ದರ್ಬಾರ್: ಮಂಡ್ಯ ವೈದ್ಯಕೀಯ ಕಾಲೇಜಿನ ಬಹುತೇಕ ಆಡಳಿತ ಸೂತ್ರ ನಿವೃತ್ತ ನೌಕರರ ಕೈಲಿದೆ ಎನ್ನುವ ಮಾತುಗಳು ಕೇಳಿ ಬಂದಿದೆ. ರಾಜ್ಯ ಸರ್ಕಾರವೇ 2016 ಫೆ.29ಕ್ಕೆ ಸ್ಪಷ್ಟವಾಗಿ ಪತ್ರ ಬರೆದು ಯಾವುದೇ ಕಾರಣಕ್ಕೂ ನಿವೃತ್ತ ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳ ಸೇವೆಯನ್ನು ಮುಂದುವರೆಸಬೇಡಿ ಎಂದು ಹೇಳಿದ್ದರೂ ಕೂಡ ಕಾಲೇಜಿನ ಆಡಳಿತ ಮಾತ್ರ ಯಾವುದಕ್ಕೂ ಸೊಪ್ಪು ಹಾಕದೆ 6 ಮಂದಿ ಸಿಬ್ಬಂದಿಗೆ ಆಯಕಟ್ಟಿನ ಜಾಗ ನೀಡಿದೆ.
ಅಧೀಕ್ಷಕರಾಗಿ ಶಿವಣ್ಣಗೌಡ, ಎಂ.ಆರ್.ರಾಜು, ಗಣೇಶ್, ವೇಣುಗೋಪಾಲ್, ಪುಟ್ಟಸ್ವಾಮಿ, ಶೇಷಾದ್ರಿ ಅವರುಗಳು ವಿವಿಧ ಗುಮಾಸ್ತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಯಂ ನೌಕರರನ್ನು ಸಂಪೂರ್ಣವಾಗಿ ಕಡೆಗೆಣಿಸಿ ನಿವೃತ್ತರಿಗೆ ಮಣೆ ಹಾಕುವ ಅಗತ್ಯವೇನಿದೆ? ಎಂಬ ಪ್ರಶ್ನೆ ಅಲ್ಲದೇ ಕಳೆದ 4 ವರ್ಷಗಳು ಬಹುತೇಕ ನಿವೃತ್ತ ನೌಕರರ ದರ್ಬಾರಿಂದಲೇ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ ಎಂಬ ಮಾತುಗಳು ಆಸ್ಪತ್ರೆ ವಲಯದಲ್ಲಿ ಕೇಳಿಬಂದಿವೆ.
ಭದ್ರತಾ ಸಿಬ್ಬಂದಿಯಿಂದಲೂ ವಸೂಲಿ: ವೈದ್ಯಕೀಯ ಕಾಲೇಜಿನ ಭದ್ರತಾ ಸಿಬ್ಬಂದಿ ನೇಮಕ ಹಾಗೂ ಅವರನ್ನು ನಡೆಸಿಕೊಳ್ಳುವ ರೀತಿ ನೋಡಿದರೆ ಅದೊಂದು ಯಾವ ಮಾμಯಾಕ್ಕೂ ಕಡಮೆ ಇಲ್ಲ. ಔಟ್ ಸೋರ್ಸ್‌ನಲ್ಲಿ ನೇಮಕಾತಿ ಮಾಡಲು ಗುತ್ತಿಗೆ ನೀಡಿದ ಕಾಲೇಜು ನಿರ್ದೇಶಕರು ಹಾಗೂ ಆಡಳಿತ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತ್ತಿದ್ದಾರೆ. ಮೈಸೂರಿನ ಕ್ರಾಂತಿ ಎಜೆನ್ಸಿ ಎಂಬುವವರಿಗೆ ಗುತ್ತಿಗೆ ನೀಡಲಾಗಿದೆ.
ಸುಮಾರು 80 ಮಂದಿ ಭದ್ರತಾ ಸಿಬ್ಬಂದಿ ಬೇಕು. ಆದರೆ, ನೇಮಕ ಮಾಡುವುದು ಕೇವಲ 40 ಮಂದಿ ಮಾತ್ರ. ಕಾಲೇಜಿಗೆ ಲೆಕ್ಕ ಮತ್ತು ಹಾಜರಾತಿ ಕೊಟ್ಟು 80 ಮಂದಿಯ ಸಂಬಳ,ಸಾರಿಗೆ,ಪಿಎಫ್ ಎಲ್ಲವನ್ನೂ ಪಡೆದುಕೊಳ್ಳುತ್ತಿದ್ದಾರೆ ಎಂದು ಹೆಸರೇಳಲಿಚ್ಚಿಸದ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
ಇಲ್ಲದೇ ಪ್ರತಿಯೊಬ್ಬ ಸಿಬ್ಬಂದಿ ಕೇವಲ 9 ರಿಂದ 10 ಸಾವಿರ ರೂ. ಸಂಬಳ ಕೊಡುತ್ತಾರೆ. ನೇಮಕಾತಿ ಸಂದರ್ಭದಲ್ಲಿ ಪ್ರತಿಯೊಬ್ಬರು 20 ಸಾವಿರ ರೂ. ಗಳನ್ನು ಏಜೆಂಟ್ ಒಬ್ಬರಿಗೆ ಲಂಚ ಕೊಟ್ಟರೆ ಮಾತ್ರ ಕೆಲಸ ಇಲ್ಲದೇ ಹೋದರೆ ಕೆಲಸವನ್ನೇ ಕೊಡುವುದಿಲ್ಲ ಎನ್ನುತ್ತಾರೆ ಸಿಬ್ಬಂದಿಗಳಲ್ಲಿ ಕೆಲವರು. ಪ್ರತಿ ಮೂರು ಅಥವಾ ನಾಲ್ಕು ತಿಂಗಳಿವೊಮ್ಮೆ ನೌಕರರನ್ನು ಉದ್ದೇಶ ಪೂರಕವಾಗಿ ಕೆಲಸದಿಂದ ತೆಗೆದು ಹಾಕುತ್ತಾರೆ. ಹೊಸ ನೌಕರ ಬಂದರೆ ಮತ್ತೆ 20 ಸಾವಿರ ರೂ. ಲಂಚ ಕೊಡಬೇಕು ಎನ್ನುವುದು ಕೆಲಸದಿಂದ ತೆಗೆದುಹಾಕಿರುವ ಸೆಕ್ಯೂರಿಟಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.