Advertisement

ನಿಯಮ ಉಲ್ಲಂಘನೆ: 1.24 ಲಕ್ಷ ಪ್ರಕರಣ

07:28 AM Jun 21, 2020 | Lakshmi GovindaRaj |

ಬೆಂಗಳೂರು: ಕೋವಿಡ್‌ 19 ವೈರಸ್‌ ಸೋಂಕು ಹರಡದಂತೆ ತಡೆಯಲು ಕಳೆದ ಮಾ.23ರಿಂದ ಲಾಕ್‌ಡೌನ್‌ ಜಾರಿ ನಂತರ ಇತ್ತೀಚಿನವರಿಗೆ ರಾಜ್ಯಾದ್ಯಂತ 1.24 ಲಕ್ಷ ನಿಯಮ ಉಲ್ಲಂಘನೆ ಪ್ರಕರಣ ದಾಖ ಲಾಗಿದೆ ಎಂದು ರಾಜ್ಯ ಸರ್ಕಾರ  ಹೈಕೋರ್ಟ್‌ಗೆ ತಿಳಿಸಿದೆ. ಅಲ್ಲದೆ, 4,947 ಎಫ್‌ಐಆರ್‌ ದಾಖಲಿಸಲಾಗಿದೆ. 10,843 ವ್ಯಕ್ತಿಗಳನ್ನು ಬಂಧಿಸಲಾಗಿದ್ದು, 1,05,158 ವಾಹನ ಜಪ್ತಿ ಮಾಡಲಾಗಿದೆ.

Advertisement

ಒಟ್ಟಾರೆ 3,73,59,700 ಕೋಟಿ ರೂ. ದಂಡ ಸಂಗ್ರಹ ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ.  ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿ ಕೋರಿ ಬೆಂಗಳೂರಿನ ಲೆಟ್ಜ್ ಕಿಟ್‌ ಫೌಂಡೇಷನ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕಾ  ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಸರ್ಕಾರ ಈ ವಿವರ ಸಲ್ಲಿಸಿದೆ. ಇತ್ತೀಚೆಗೆ ನಟ ಚಿರಂಜೀವಿ ಸರ್ಜಾ ನಿಧನರಾದ ವೇಳೆ ಜೂ.7ರಂದು ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದ ಬಗ್ಗೆ ಹಲವು ದೂರು ಬಂದಿವೆ. ಹೀಗಾಗಿ 59 ಮಂದಿ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ಈ ಮಧ್ಯೆ, ಕೇಂದ್ರ ಸರ್ಕಾರದ ಪರ ವಾದ ಮಂಡಿಸಿರುವ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಂ.ಬಿ. ನರಗುಂದ್‌,  ಪೂಜಾಸ್ಥಳಗಳು, ರೆಸ್ಟೋರೆಂಟ್‌, ಹೊಟೇಲ್‌ ಮತ್ತು ಮಾಲ್‌ಗ‌ಳಿಗೆ ಸಂಬಂಧಿಸಿದಂತೆ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಾನೂನು ರೀತಿಯಲ್ಲಿ ಜಾರಿಗೊಳಿಸಬಹುದಾಗಿದೆ. ವಿಪತ್ತು ನಿರ್ವ ಹಣಾ ಕಾಯ್ದೆಯಲ್ಲಿ ಅಂತಹ  ಯಾವುದಾದರೂ ಉಲ್ಲಂಘನೆಗಳು ಕಂಡುಬಂದರೆ ದೂರುಗಳನ್ನು ದಾಖಲಿಸಬಹುದು, ಅದಕ್ಕೆ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next