Advertisement
ಈ ತಂಬ್ ರೂಲ್ ನ ಪ್ರಕಾರ, ಆದಾಯದ ಬಡ್ಡಿದರವನ್ನು 72 ರಿಂದ ಭಾಗಿಸುವುದರ ಮೂಲಕ ನಿಮ್ಮ ಹೂಡಿಕೆಗಳನ್ನು ದುಪ್ಪಟ್ಟುಗೊಳಿಸಲು ಎಷ್ಟು ಸಮಯ ಬೇಕಾಗುತ್ತದೆ ಎಂದು ತಿಳಿಯಲು ಸಾಧ್ಯ.
Related Articles
Advertisement
ಒಂದು ನಿರ್ದಿಷ್ಟ ಸಮಯದಲ್ಲಿ ನಿಮ್ಮ ಹಣವನ್ನು ದುಪ್ಪಟ್ಟು ಮಾಡಿಕೊಳ್ಳಲು ಎಷ್ಟು ಬಡ್ಡಿದರ ಬೇಕು ಎಂದು ತಿಳಿಯಲು ನೀವು ಈ ರೂಲ್ ನ್ನು ಸ್ವಲ್ಪ ಬದಲಾಯಿಸಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ, ನಿಮ್ಮ ಹಣವನ್ನು ನೀವು ಐದು ವರ್ಷಗಳಲ್ಲಿ ದುಪ್ಪಟ್ಟುಗೊಳಿಸಲು ಎಷ್ಟು ಬಡ್ಡಿದರದಲ್ಲಿ ನಾವು ಹಣ ಠೇವಣಿ ಮಾಡಬೇಕಾಗುತ್ತದೆ ಎಂದು ತಿಳಿದುಕೊಳ್ಳಲು, 72 ಅನ್ನು 5 ರಿಂದ ಭಾಗಿಸಿ, ಅದು ಶೇಕಡಾ. 14.4 ಆಗುತ್ತದೆ. ಆದ್ದರಿಂದ, ಐದು ವರ್ಷಗಳಲ್ಲಿ ನಿಮ್ಮ ಹಣವನ್ನು ದುಪ್ಪಟ್ಟುಗೊಳಿಸಲು ನಿಮಗೆ ಶೇಕಡಾ 14.4 ಬಡ್ಡಿದರ ಬೇಕಾಗುತ್ತದೆ.
ಓದಿ : ‘ಯುವರತ್ನ’ ಬುಕಿಂಗ್ ಜೋರು: ಏ.1 ಚಿತ್ರ ರಿಲೀಸ್
ತಂಬ್ ರೂಲ್, ವರ್ಷಗಳಲ್ಲಿ ನಿಮ್ಮ ಹೂಡಿಕೆ ಹೇಗೆ ಕಂಪೌಂಡ್ ಮಾಡುತ್ತದೆ ಎಂಬುದನ್ನು ತಿಳಿಸುತ್ತದೆ. ಶೇಕಡಾ 5 ಬಡ್ಡಿದರದ.. ಫಿಕ್ಸಡ್ ಡೆಪೋಸಿಟ್ ರಿಟರರ್ನ್ ನಲ್ಲಿ, ನಿಮ್ಮ 1 ಲಕ್ಷ ಹೂಡಿಕೆ ಸುಮಾರು 29 ವರ್ಷಗಳಲ್ಲಿ 3 ಲಕ್ಷ ಮತ್ತು ಸುಮಾರು 43 ವರ್ಷಗಳಲ್ಲಿ 6 ಲಕ್ಷ ಆಗುತ್ತದೆ. ಕಂಪೌಂಡಿಂಗ್ ಕ್ಯಾಲ್ಕುಲೇಶನ್ ನನ್ನು ಸರಳೀಕರಿಸಲು ಈ ರೂಲ್ ನಿಮಗೆ ಸಹಾಯ ಮಾಡುತ್ತದೆ.
ಓದಿ : ಮಂಗಳೂರು ವಿಮಾನ ನಿಲ್ದಾಣ: ವಿಶೇಷ ವಿನ್ಯಾಸದ ಪಾದರಕ್ಷೆಯಲ್ಲಿ ಚಿನ್ನ ಕಳ್ಳಸಾಗಾಟ ಪತ್ತೆ