Advertisement

ರುಕ್ಮಿಣಿ ವಸಂತ್‌ ಕಣ್ಣಲ್ಲಿ ಸಪ್ತ ಕನಸು

08:51 AM Mar 21, 2021 | Team Udayavani |

ರಕ್ಷಿತ್‌ ಶೆಟ್ಟಿ ನಟನೆಯ “ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ನಡೆದಿದೆ. ಈ ಚಿತ್ರದಲ್ಲಿ ರುಕ್ಮಿಣಿ ವಸಂತ್‌ ನಾಯಕಿ. ಈ ಹಿಂದೆ ಬೀರ್‌ಬಲ್‌ ಸಿನಿಮಾದಲ್ಲಿ ನಟಿಸಿರುವ ರುಕ್ಮಿಣಿ ಈಗ ಸಪ್ತ ಸಾಗರ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. “ಸಪ್ತಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ನಟಿಸುತ್ತಿರೋದು ರುಕ್ಮಿಣಿ ಅವರಿಗೆ ಖುಷಿಕೊಟ್ಟಿದೆಯಂತೆ.

Advertisement

“ಲಾಕ್‌ಡೌನ್‌ ಸಮಯ ನನಗೆ ತುಂಬ ಕಷ್ಟಕರವಾಗಿತ್ತು. ಕೈಯಲ್ಲಿ ಒಂದಷ್ಟು ಪ್ರಾಜೆಕ್ಟ್ ಗಳಿದ್ದರೂ, ಆ ಸಿನಿಮಾಗಳು ಮುಂದುವರೆಯುವ ಯಾವ ಲಕ್ಷಣವೂ ಕಾಣುತ್ತಿರಲಿಲ್ಲ. ಈ ಸಂದರ್ಭದಲ್ಲಿ ನಾನು ನೇರವಾಗಿ ನಿರ್ದೇಶಕ ಹೇಮಂತ್‌ ಅವರಿಗೆ ನನ್ನ ಬಯೋಡೇಟಾ ಹಾಗೂ ಅವರ ಸಿನಿಮಾದಲ್ಲಿ ಕೆಲಸ ಮಾಡುವ ಆಸಕ್ತಿಯನ್ನು ತೋಡಿಕೊಂಡೆ. ಹೀಗಿರುವಾಗ ಒಂದು ದಿನ ನನಗೆ ಕರೆ ಮಾಡಿ ಆಡಿಷನ್‌ಗೆ ಬರಲು ಹೇಳಿದರು’ ಎನ್ನುತ್ತಾ ತಾವು ಈ ಸಿನಿಮಾಕ್ಕೆ ಆಯ್ಕೆಯಾದ ಬಗ್ಗೆ ಹೇಳುತ್ತಾರೆ.

ಇದನ್ನೂ ಓದಿ:ಅದ್ಧೂರಿಯಾಗಿ ಸೆಟ್ಟೇರಿದ ಸತ್ಯಪ್ರಕಾಶ್ ರ ‘ಮ್ಯಾನ್‌ ಆಫ್ ದಿ ಮ್ಯಾಚ್’

ಇನ್ನು, ಈ ಚಿತ್ರದಲ್ಲಿ ರುಕ್ಮಿಣಿ ಅವರು ಪ್ರಿಯಾ ಎಂಬ ಪಾತ್ರ ಮಾಡುತ್ತಿದ್ದಾರೆ. ಗಾಯನದ ಬಗ್ಗೆ ಆಸಕ್ತಿ ಇರುವ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರಂತೆ. ತನ್ನ ಇತರೆ ಜವಾಬ್ದಾರಿಗಳನ್ನು ಅರಿತು ಅದರ ಮೇಲೆ ನಿರ್ಧಾರ ತೆಗೆದುಕೊಳ್ಳುವ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರಂತೆ.

Advertisement

Udayavani is now on Telegram. Click here to join our channel and stay updated with the latest news.

Next