Advertisement

ಸಪ್ತಸಾಗರ ದಾಟಲು ಬಂದ ನಾಯಕಿ: ರಕ್ಷಿತ್‌ ಶೆಟ್ಟಿಗೆ ರುಕ್ಮಿಣಿ ಜೋಡಿ

09:16 AM Feb 03, 2021 | Team Udayavani |

ರಕ್ಷಿತ್‌ ಶೆಟ್ಟಿ ಈಗಾಗಲೇ “777 ಚಾರ್ಲಿ’ ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ. ಈಗ ಮತ್ತೂಂದು ಹೊಸ ಸಿನಿಮಾಕ್ಕೆ ಅಣಿಯಾಗುತ್ತಿದ್ದಾರೆ. ಅದು “ಸಪ್ತಸಾಗರದಾಚೆ ಎಲ್ಲೋ’. ಹೌದು, ಹೀಗೊಂದು ವಿಭಿನ್ನ ಶೀರ್ಷಿಕೆಯ ಸಿನಿಮಾವನ್ನು ರಕ್ಷಿತ್‌ ಒಪ್ಪಿಕೊಂಡಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗ ಆ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿದೆ.

Advertisement

ರುಕ್ಮಿಣಿ “ಸಪ್ತಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ಯಾವ ರುಕ್ಮಿಣಿ ಎಂದು ನೀವು ಕೇಳಬಹುದು. ಈ ಹಿಂದೆ ಶ್ರೀನಿ ನಿರ್ದೇಶನದ “ಬೀರ್‌ಬಲ್‌’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ರುಕ್ಮಿಣಿ ಈಗ ರಕ್ಷಿತ್‌ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ.

ಈ ಚಿತ್ರವನ್ನು ಪುಷ್ಕರ್‌ ನಿರ್ಮಿಸುತ್ತಿದ್ದು, ಹೇಮಂತ್‌ ರಾವ್‌ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಈ ಮೂವರ ಕಾಂಬಿನೇಶನ್‌ನಲ್ಲಿ “ಗೋಧಿ ಬಣ್ಣ ಸಾಧಾರಣ ಮೈ ಕಟ್ಟು’ ಚಿತ್ರ ಬಂದಿದೆ

ಇದನ್ನೂ ಓದಿ:ಇನ್ಸ್‌ಪೆಕ್ಟರ್‌ ವಿಕ್ರಂ: ಪ್ರಜ್ವಲಿಸುತ್ತಿದೆ ಪವರ್‌ಪ್ಯಾಕ್‌ ಟ್ರೇಲರ್‌

ಈಗ ಮತ್ತೆ ಜೊತೆಯಾಗಿ “ಸಪ್ತ ಸಾಗರ…. ‘ದಾಟುತ್ತಿದ್ದಾರೆ. ಈ ತಿಂಗಳಾಂತ್ಯದಿಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಬಿಡುಗಡೆಯಾದ ಚಿತ್ರದ ಟೈಟಲ್‌ ಪೋಸ್ಟರ್‌ ಗಮನ ಸೆಳೆಯುತ್ತಿದೆ.

Advertisement

ಸದ್ಯ ಪುಷ್ಕರ್‌ ಬ್ಯಾನರ್‌ನಲ್ಲಿ ಸತತವಾಗಿ ಸಿನಿಮಾಗಳು ಚಿತ್ರೀಕರಣದಲ್ಲಿವೆ. ಈ ವರ್ಷ ಪುಷ್ಕರ್‌ ನಿರ್ಮಾಣದದಲ್ಲಿ ಆರು ಚಿತ್ರಗಳು ತೆರೆಗೆ ಬರಲಿವೆ. “ಅವತಾರ್‌ ಪುರುಷ’, “ಅವತಾರ್‌ ಪುರುಷ-2′, “ಟೆನ್‌’, “777 ಚಾರ್ಲಿ’, “ಸಪ್ತಸಾಗರದಾಚೆ ಎಲ್ಲೋ’ ಹಾಗೂ ಅವರ ನಿರ್ಮಾಣದ ಮಲಯಾಳಂ ಚಿತ್ರ ತೆರೆಗೆ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next