ಕೇಂದ್ರದ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು ನಿರ್ವಹಣೆ ಇಲ್ಲದೆ ಸೊರಗಿದೆ.
Advertisement
1994 ಎ.15ರಂದು ಅಂದಿನ ಕುಂದಾಪುರದ ಮಾಜಿ ಶಾಸಕ ಕೆ. ಪ್ರತಾಪ್‌ಚಂದ್ರ ಅವರು ಉದ್ಘಾಟಿಸಿ ಗ್ರಾಮೀಣ ಭಾಗದ ಜನತೆಗೆ ನಿರಂತರ ಸಾಕ್ಷರತ ಶಿಕ್ಷಣ ನೀಡುವ ನಿಟ್ಟಿನಿಂದ ಆರಂಭವಾದ ಈ ಕಟ್ಟಡದ ಮೇಲ್ಛಾವಣಿ ಧರಾಶಾಯಿಯಾಗಿ ಸಂಪೂರ್ಣ ಶಿಥಿಲಗೊಂಡು ಗಿಡಗಂಟಿಗಳಿಂದ ಆವೃತ ವಾಗಿದೆ. ಪ್ರಸ್ತುತ ಇದು ಮಣಿಗೇರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿದ್ದು ಅನ್ಯ ಚಟುವಟಿಕೆಗಳ ಆಶ್ರಯ ತಾಣವಾಗಿದೆ.
Related Articles
ಹಿಂದೆ ಬಿದ್ಕಲ್‌ಕಟ್ಟೆ ಮಂಡಲ ಪಂಚಾಯತ್ ಇರುವ ಸಂದರ್ಭ ದಲ್ಲಿ ಮಾಜಿ ಅಧ್ಯಕ್ಷ ಎಂ. ಆನಂದ ಶೆಟ್ಟಿ ಅವರ ಅವಧಿಯಲ್ಲಿ ಸ್ಥಾಪಿತಗೊಂಡ ಈ ಕೇಂದ್ರದಲ್ಲಿ ಕಲಿಕೆ ಚಟುವಟಿಕೆಗೆ ಪೂರಕವಾಗಿ ಗೋಡೆಗೆ ಅಳವಡಿಸಿದ ಕರಿಹಲಗೆ (ಬ್ಲಾಕ್ ಬೋರ್ಡ್) ಹಾಗೂ ವಿವಿಧ ಇಲಾಖೆಯಿಂದ ನಡೆದಿರುವ ಕಾಮಗಾರಿಯ ವಿವರ ಒಳಗೊಂಡಿರುವ ಫಲಕಗಳ ಮೂಲ ಸ್ವರೂಪ ಮಾಯವಾಗಿದೆ.
Advertisement
ಅನುದಾನದ ಕೊರತೆ ಈ ಹಿಂದೆ ಈ ಶಿಕ್ಷಣ ಕೇಂದ್ರದಲ್ಲಿ ನಿರಂತರ ಕಲಿಕೆ ಚಟುವಟಿಕೆಗಳು ನಡೆಯುತ್ತಿದ್ದವು. ಆದರೆ ಬದಲಾದ ವ್ಯವಸ್ಥೆಯಲ್ಲಿ ಇದು ಕಡಿಮೆಯಾಗುತ್ತಾ ಬಂದಿದ್ದು, ಕಟ್ಟಡಗಳ ಮೇಲ್ಛಾವಣಿ ಶಿಥಿಲಗೊಂಡಿದೆ. ಇದರ ಬಗ್ಗೆ ಗ್ರಾ.ಪಂ.ನಲ್ಲಿ ಚರ್ಚಿಸಲಾಗಿದೆ. ಆದರೆ ಕಟ್ಟಡ ನಿರ್ವಹಣೆಗೆ ಬೇಕಾಗುವಷ್ಟು ಅನುದಾನದ ಕೊರತೆ ಇರುವುದರಿಂದ ಈ ಹಿಂದೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತರಲಾಗಿದೆ.
-ರೇಖಾ, ಪಿಡಿಒ,
ಹಾರ್ದಳ್ಳಿ ಮಂಡಳ್ಳಿ ಗ್ರಾ.ಪಂ.