Advertisement

ನಿರ್ಲಕ್ಷ್ಯಕ್ಕೆ ಸಾಕ್ಷಿಯಾಯ್ತು ಅಂಬೇಡ್ಕರ್‌ ಭವನ!

05:16 PM Dec 03, 2020 | Suhan S |

ಕೂಡ್ಲಿಗಿ: ತಾಲೂಕಿನ ಹಾರಕಭಾವಿ ಗ್ರಾಮದಲ್ಲಿ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮಿನಿ ಡಾ| ಬಿ.ಆರ್‌. ಅಂಬೇಡ್ಕರ್‌ ಭವನ ಕಾಮಗಾರಿ 2005-06ನೇಸಾಲಿನಲ್ಲಿ ಮುಗಿಸಿದ್ದರೂ ಅದರ ನಿರ್ವಹಣೆ, ಸ್ವತ್ಛತೆ ಇಲ್ಲದಂತಾಗಿದೆ.

Advertisement

ಭವನದ ನೆಲ ಮತ್ತು ಮೊದಲ ಮಹಡಿ, ವೇದಿಕೆ ನಿರ್ಮಾಣವಾಗಿದೆ. ಯೋಜನೆಯಂತೆ ಶಾಸಕರಪ್ರದೇಶಾಭಿವೃದ್ಧಿ ಯೋಜನೆಯ ನಿಗಮದಿಂದ ಹಣಬಿಡುಗಡೆಯಾಗಿದ್ದು ಕಟ್ಟಡ ಕಾಮಗಾರಿಯನ್ನುಪೂರ್ಣಗೊಳಿಸಿದ್ದರೂ ಅದರ ಸರಿಯಾದ ನಿರ್ವಹಣೆ ಮಾತ್ರ ಶೂನ್ಯವಾಗಿದೆ ಎಂದು ಗ್ರಾಮಸ್ಥ ಗಂಗಾಧರಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂಬೇಡ್ಕರ್‌ ಭವನಕ್ಕೆ ಬೇಕಾದ ಇತರೆ ಮೂಲ ಸೌಕರ್ಯಗಳು ಆಗಿಲ್ಲ. ಭವನದ ಸುತ್ತ ಗ್ರಾವೆಲ್‌ ಹಾಕಿ ಸಮದಟ್ಟು ಮಾಡಬೇಕು. ಸುತ್ತುಗೋಡೆ ನಿರ್ಮಾಣವಾಗಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ರಕ್ಷಣೆ ಸಮಸ್ಯೆ: ಸಮಾಜ ಕಲ್ಯಾಣ ಇಲಾಖೆ ಪ್ರದೇಶಾಭಿವೃದ್ಧಿ ಅಡಿಯಲ್ಲಿ ಭವನ ನಿರ್ಮಾಣ ಮಾಡಿಕೈತೊಳೆದುಕೊಂಡಿದೆ. ಭವನಕ್ಕೆ ಸುತ್ತುಗೋಡೆ ಇಲ್ಲದಕಾರಣ ಭವನಕ್ಕೆ ರಕ್ಷಣೆ ಇಲ್ಲದಂತಾಗಿದೆ. ಭವನಕ್ಕೆಹಚ್ಚಿರುವ ಬಣ್ಣ ಮಾಸುತ್ತಿದೆ. ಬಲ್ಬ್ ಹಾಗೂ ಕಿಟಕಿಗೆಹಾನಿಯಾಗಿದೆ. ಮುಂಭಾಗದ ಸಜ್ಜ ಸೋಮಾರಿಗಳ ಅಡ್ಡವಾಗಿ ಪರಿಣಮಿಸಿದೆ. ಭವನದ ಸುತ್ತ ಬಿಡಾಡಿ ದನಗಳು, ಹಂದಿಗಳು ಹಾಗೂ ಬೀದಿನಾಯಿಗಳವಾಸಸ್ಥಾನವಾಗಿ ಮಾರ್ಪಟ್ಟಿದೆ. ಅಂಬೇಡ್ಕರ ಭವನಕ್ಕೆ ನೋಡಿಕೊಳ್ಳಲು ಕಾವಲುಗಾರರನ್ನು ನೇಮಕ ಮಾಡಿ ರಕ್ಷಿಸುವ ಕೆಲಸ ಮಾಡಬೇಕಿದೆ. ಇಲ್ಲವಾದರೆ ಮತ್ತೆಬಣ್ಣ ಹಚ್ಚುವ ಹಾಗೂ ದುರಸ್ತಿ ಮಾಡಬೇಕಾದಅನಿವಾರ್ಯತೆ ಸೃಷ್ಟಿಯಾಗಲಿದೆ ಎಂಬ ಆತಂಕ ಇಲ್ಲಿನ ನಿವಾಸಿಗಳದ್ದಾಗಿದೆ.

ಕಟ್ಟಡ ಪಾಳು: ಈ ಗ್ರಾಮದಲ್ಲಿ 2005-06ನೇ ಸಾಲಿನಲ್ಲಿ ಶಾಸಕರ ಪ್ರಾದೇಶಾಭಿವೃದ್ಧಿ ಯೋಜನೆಯಲ್ಲಿ ಡಾ| ಬಿ.ಆರ್‌. ಅಂಬೇಡ್ಕರ್‌ ಸಮುದಾಯ ಭವನ ನಿರ್ಮಾಣವಾಗಿತ್ತು.ಇತ್ತೀಚೆಗೆ ಇದು ನಿರ್ವಹಣೆ ಇಲ್ಲದೆ ಹಾಳಾಗಿದೆ, ಭವನದ ಸುತ್ತ ಗಿಡಗಂಟಿಗಳು ಬೆಳೆದುನಿಂತಿವೆ. ಅಂಬೇಡ್ಕರ್‌ ಭವನದ ಆವರಣದಲ್ಲಿ ಬೆಳೆದಿರುವ ಗಿಡ ಗಂಟಿಗಳನ್ನು ತೆಗೆಸಿ ಸಮದಟ್ಟು ಮಾಡಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕಿದೆ. ಗ್ರಾಮಪಂಚಾಯಿತಿ ಪಿಡಿಓ, ಅಧಿಕಾರಿಗಳು, ಜನಪ್ರತಿನಿಧಿಗಳು ಕಟ್ಟಡರಕ್ಷಣೆಗೆ ಮುಂದಾಗಬೇಕು ಎಂಬುದು ಅಂಬೇಡ್ಕರ್‌ ಅಭಿಮಾನಿಗಳ ಆಗ್ರಹ.

ಮೇಲ್ನೋಟಕ್ಕೆ ಭವನ ಪೂರ್ಣಗೊಂಡಂತಿದೆ. ಬಾಗಿಲು ಸೇರಿದಂತೆ ಇತರೆ ಕೆಲಸಗಳು ಕಳಪೆಯಾಗಿದೆ. ಸುತ್ತುಗೋಡೆ ಇಲ್ಲದೆ ಇರುವುದು ಸಮಸ್ಯೆಯಾಗಿದೆ. ಆದಷ್ಟು ಬೇಗ ಸುತ್ತುಗೋಡೆ ನಿರ್ಮಾಣ ಮಾಡಬೇಕು. ಇತರೆ ಮೂಲ ಸೌಕರ್ಯಗಳುಆಗಬೇಕಿದೆ. ಸುತ್ತುಗೋಡೆನಿರ್ಮಾಣವಾಗುವ ತನಕ ಕಾವಲುಗಾರರನ್ನು ನೇಮಿಸಿ. ಮುನಿಯಪ್ಪ, ಹಾರಕಬಾವಿ ಗ್ರಾಮಸ್ಥ

Advertisement

ಅಂಬೇಡ್ಕರ್‌ ಭವನದ ಕಾಮಗಾರಿ ಪೂರ್ಣಗೊಂಡನಂತರ ಹಾರಕಬಾವಿ ಪಂಚಾಯಿತಿ ಪಿಡಿಓ ಸಂಪೂರ್ಣ ಜವಾಬ್ದಾರರಾಗಿರುತ್ತಾರೆ.ಕಮಿಟಿ ರಚನೆ ಮಾಡಿದಾಗ ಗ್ರಾಮ ಪಂಚಾಯಿತಿ ಅಧಿಕಾರಿಯೇ ಅಧ್ಯಕ್ಷರಾಗಿದ್ದು ಅದರ ಹೊಣೆ ಹೊತ್ತಿರುತ್ತಾರೆ. -ಜಗದೀಶ ದಿಬ್ಬಡ್ಡೂರ್‌, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ, ಕೂಡ್ಲಿಗಿ

ನಾನು ಎರಡು ಬಾರಿ ಸ್ವಚ್ಛತೆ ಮಾಡಿಸಿದ್ದೇನೆ. ಇದು ಸಾರ್ವಜನಿಕರ ಆಸ್ತಿ ಪ್ರತಿಯೊಬ್ಬರೂ ಬಳಕೆ ಮಾಡಿಕೊಳ್ಳಬೇಕಾಗಿದೆ. ಅದರ ನಿರ್ವಹಣೆಗೆ ಸಂಬಂಧಿಸಿದಂತೆ ಸುಣ್ಣ ಬಣ್ಣ ಮಾಡಿಸಿದ್ದೇನೆ. ಇತ್ತೀಚೆಗೆ 15 ಮತ್ತು 16ನೇ ಹಣಕಾಸಿನ ಕ್ರಿಯಾಯೋಜನೆ ಕಳುಹಿಸಿಕೊಡಲಾಗಿದೆ. ನಂತರ ಸುಣ್ಣಬಣ್ಣ ಮತ್ತು ಸ್ವಚ್ಛತೆ ಕೈಗೆತ್ತಿಕೊಳ್ಳುತ್ತೇನೆ. ಬೋರಯ್ಯ, ಹಾರಕಭಾವಿ ಪಿಡಿಒ

 

ಕೆ.ನಾಗರಾಜ್‌

Advertisement

Udayavani is now on Telegram. Click here to join our channel and stay updated with the latest news.

Next