Advertisement

ಕವಾಡಿಮಠದ ರುದ್ರೇಶ್ವರಸ್ವಾಮಿ ವಿಜೃಂಭಣೆಯ ಉತ್ಸವ

09:11 PM Apr 20, 2019 | Lakshmi GovindaRaju |

ನೆಲಮಂಗಲ: ಪಟ್ಟಣ ಮುಖ್ಯರಸ್ತೆಯಲ್ಲಿರುವ ಕವಾಡಿಮಠದ ವೀರಭದ್ರ ಸ್ವಾಮಿಯ ಬ್ರಹ್ಮರಥೋತ್ಸವ ದೇವಾಲಯ ನಿರ್ಮಾಣ ಪ್ರಗತಿಯಲ್ಲಿರುವುದರಿಂದಾಗಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಾಂಕೇತಿಕವಾಗಿ ವಿಜೃಂಭಣೆಯಿಂದ ನಡೆಯಿತು.

Advertisement

ರಥೋತ್ಸವದ ಅಂಗವಾಗಿ ಶ್ರೀವೀರಭದ್ರಸ್ವಾಮಿ ದೇವರಿಗೆ ಆರತಿ, ಅಗ್ನಿಕುಂಡಸೇವೆ ಮತ್ತಿತರ ಪೂಜೆ ಪುನಸ್ಕಾರಗಳನ್ನು ನೆರವೇರಿಸಲಾಯಿತು. ದೇವಾಲಯ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿರುವ ಕಾರಣಕ್ಕೆ ಈ ಬಾರಿ ರಥೋತ್ಸವವನ್ನು ವಿಜೃಂಭಣೆಯಿಂದ ಮಾಡದೇ ಕವಾಡಿಮಠದಿಂದ ಅಡೇಪೇಟೆಯಲ್ಲಿರುವ ರುದ್ರೇಶ್ವರ ಸ್ವಾಮಿ ದೇವಾಲಯದವರೆಗೂ ಉತ್ಸವಮೂರ್ತಿ ಮೆರವಣಿಗೆ ನಡೆಸಿದರು.

ಇದು ಒಂದೆಡೆಯಾದರೆ ಮತ್ತೂಂದೆಡೆ ಭಕ್ತರು ದವನ, ಬಾಳೆಹಣ್ಣು ರಥಕ್ಕೆ ಎಸೆದು ಹರಕೆ ತೀರಿಸಲಾಗದೆ, ಮುಂದೂಡುವಂತಾಯಿತು. ನಂಬಿದ ಭಕ್ತರು ಇಷ್ಟಾರ್ಥಗಳನ್ನು ಈಡೇರಿಸಿದ ರುದ್ರೇಶ್ವರಸ್ವಾಮಿ ದರ್ಶನ ಪಡೆದರು. ಇದೇ ವೇಳೆ ದೇವಸ್ಥಾನದ ಧರ್ಮದರ್ಶಿ ಗಂಗರಾಜು ಮಾತನಾಡಿ, ತಮ್ಮ ಪೂರ್ವಿಕರ ಕಾಲದಿಂದಲೂ ರಥೋತ್ಸವದ ನೇತೃತ್ವವಹಿಸಿಕೊಂಡು ಬರಲಾಗಿದೆ.

ತಾಲೂಕಿನ ಭಕ್ತರ ಸಹಕಾರದಿಂದಾಗಿ ದೇವರ ಕಾರ್ಯಗಳು ಯಶಸ್ವಿಯಾಗಿ ನಡೆಸಲಾಗುತ್ತಿದೆ. ಪಟ್ಟಣದಲ್ಲಿ ಜಾತ್ರೆ ಇತ್ಯಾದಿ ಕಾರ್ಯಗಳನ್ನು ಮಾಡುವುದರಿಂದ ಯುವಕರಲ್ಲಿ ಹೊಂದಾಣಿಕೆ ಮತ್ತು ಸೇವಾಮನೋಭಾವ ಬೆಳೆದು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ನಿರ್ಮಾಣ ಮಾಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಹಳೆಯ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುತ್ತಿರುವುದರಿಂದಾಗಿ ರಥೋತ್ಸವವನ್ನು ಸಾಂಕೇತಿಕವಾಗಿ ದೇವರ ಉತ್ಸವದೊಂದಿಗೆ ಮಾಡಲಾಗಿದೆ. ನೂತನ ದೇವಸ್ಥಾನದ ನಿರ್ಮಾಣದಬಳಿಕ ಬ್ರಹ್ಮರಥೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲಾಗುತ್ತದೆ ಎಂದು ತಿಳಿಸಿದರು.

Advertisement

ಬೆಳಗ್ಗೆಯಿಂದಲೂ ವೀರಭದ್ರಸ್ವಾವಿಗೆ ಅಭಿಷೇಕ, ಹೋಮ ಹವನವಗಳನ್ನು ಇತ್ಯಾದಿ ವಿಶೇಷ ಪೂಜೆಗಳನ್ನು ನೆರವೇರಿಸಿದ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವೀರಭದ್ರಸ್ವಾಮಿಯ ಉತ್ಸವ ಮೂರ್ತಿಯ ಮೆರವಣಿಗೆ ನಡೆಸಲಾಯಿತು.

ಅರವಟಿಗೆ: ದೇವಾಲಯದ ಸುತ್ತಮುತ್ತಲಿನಲ್ಲಿ ಶ್ರೀರುದ್ರೇಶ್ವರಯುವಕ ಸಮಿತಿಯಿಂದ ಅರವಟಿಗೆಗಳನ್ನು ಆಯೋಜಿಸಿ ಉತ್ಸವಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಪಾನಕ, ಮಜ್ಜಿಗೆ ಮತ್ತು ಕೋಸಂಬರಿ ಹಂಚುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡುಬಂತು. ವೀರಭದ್ರ ಸ್ವಾಮಿಯ ಉತ್ಸವ ಮೂರ್ತಿಯನ್ನು ವಿವಿಧ ಬಗೆಯ ಹೂಗಳಿಂದ ಸಿಂಗರಿಸಿದ್ದು, ಭಕ್ತರ ಸಂತಸಕ್ಕೆ ಕಾರಣವಾಗಿತು.

ರಥೋತ್ಸವದಲ್ಲಿ ವೀರಶೈವ ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಎನ್‌.ಬಿ.ದಯಾಶಂಕರ್‌, ಎನ್‌.ಆರ್‌ಜಗದೀಶ್‌, ಹಿರಿಯ ನ್ಯಾಯವಾಧಿ ಎನ್‌.ಎಸ್‌.ರಾಜು, ತಾಲೂಕು ವೀರಶೈವ ಮಹಾಸಭಾ ಕಾರ್ಯದರ್ಶಿ ಎನ್‌.ರಾಜಶೇಖರ್‌, ಶ್ರೀರುದ್ರೇಶ್ವರಯುವಕ ಸಮಿತಿಯ ರೇಣುಕಾಪ್ರಸಾದ್‌. ಎನ್‌.ಯು.ದೀಪಕ್‌, ಎನ್‌.ಜಿ.ಲೋಹಿತ್‌, ಪ್ರಸನ್ನಕುಮಾರ್‌, ಎನ್‌.ಜಿ.ಪ್ರಶಾಂತ್‌, ಎನ್‌.ಜೆ.ದೀಪಕ್‌, ಪುನೀತ್‌ರಾಜ್‌ ಸೇರಿದಂತೆ ಸಾವಿರಾರು ಭಕ್ತರು ಆಗಮಿಸಿ ಸ್ವಾಮಿ ದರ್ಶನ ಪಡೆದು ಪುನೀತರಾದರು.

Advertisement

Udayavani is now on Telegram. Click here to join our channel and stay updated with the latest news.

Next