Advertisement

Rudra Veena; ಜುಲೈ 26ರಂದು ತೆರೆಗೆ ಬರುತ್ತಿದೆ ‘ರುದ್ರ ವೀಣಾ’ ಚಿತ್ರ

07:17 PM Jul 25, 2024 | Team Udayavani |

ತೆಲುಗಿನ ರುದ್ರ ವೀಣಾ ಚಿತ್ರ ಜು.26ರಂದು ತೆರೆಕಾಣುತ್ತಿದೆ. ಲಕ್ಷ್ಮಣ್‌ ರಾವ್‌ ರಾಘುಳ ರವರು ನಿರ್ಮಾಣ ಮಾಡಿದ್ದು, ಮಧುಸೂದನ್‌ ರೆಡ್ಡಿ ನಿರ್ದೇಶನವಿದೆ. ಇದೊಂದು ಪಕ್ಕಾ ಮಾಸ್‌ ಸಿನಿಮಾವಾಗಿದ್ದು, ಲವ್‌, ಆ್ಯಕ್ಷನ್‌, ಸೆಂಟಿಮೆಂಟ್‌, ಐಟಂ ಸಾಂಗ್‌, ಕಾಮಿಡಿ.. ಹೀಗೆ ಎಲ್ಲಾ ಅಂಶಗಳು ಈ ಚಿತ್ರದಲ್ಲಿವೆ ಎನ್ನುವುದು ತಂಡದ ಮಾತು.

Advertisement

ಶ್ರೀರಾಮ್‌ ಈ ಚಿತ್ರದ ನಾಯಕ. ಎಲ್ಸಾ ನಾಯಕಿಯಾಗಿ ನಟಿಸಿದ್ದಾರೆ. ಲೇಡಿ ವಿಲನ್‌ ಪಾತ್ರದಲ್ಲಿ ಸೋನಿಯಾ ಅಭಿನಯಿಸುತ್ತಿದ್ದು, ರಘು ಕುಂಚ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರುದ್ರ ವೀಣಾ ಸಿನಿಮಾ ತೆಲುಗು ಸೇರಿದಂತೆ ನಾಲ್ಕು ಭಾಷೆಯಲ್ಲಿ ತೆರೆಕಾಣುತ್ತಿದ್ದು, ಸದ್ಯಕ್ಕೆ ತೆಲುಗು ಭಾಷೆಯಲ್ಲಿ ಕರ್ನಾಟಕದಲ್ಲಿ ಜುಲೈ 26ರಂದು ತೆರೆ ಕಾಣಲಿದ್ದು, ಎರಡು ವಾರಗಳ ನಂತರ ಉಳಿದ ಭಾಷೆಗಳಲ್ಲಿ ದೇಶದಾದ್ಯಂತ ತೆರೆ ಕಾಣಲಿದೆ. ಬಿ.ಜಿ ಚಂದನ್‌ ಕುಮಾರ್‌ ಅವರು ಕರ್ನಾಟಕದಾದ್ಯಂತ ವಿತರಣೆ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next