ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ (Actor Yash) ಅವರಿಗಿಂದು ಬರ್ತ್ ಡೇ ಸಂಭ್ರಮ. ಅಭಿಮಾನಿಗಳು ‘ರಾಕಿಭಾಯ್’ ಗೆ ಜೈ ಎಂದು ಹೇಳಿತ್ತಲೇ ಹುಟ್ಟುಹಬ್ಬಕ್ಕೆ ವಿಶ್ ಮಾಡುತ್ತಿದ್ದಾರೆ. ಇತ್ತ ಚಿತ್ರರಂಗದಲ್ಲೂ ಯಶ್ ಅವರಿಗೆ ಕಲಾವಿದರು, ನಿರ್ದೇಶಕರು ಸೇರಿದಂತೆ ಚಿತ್ರರಂಗದ ಗಣ್ಯರು ಹುಟ್ಟುಹಬ್ಬದ ಶುಭಾಶಯವನ್ನು ಕೋರುತ್ತಿದ್ದಾರೆ.
ಅಭಿಮಾನಿಗಳ ಈ ಬಾರಿ ಯಶ್ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದರೂ, ಅಭಿಮಾನಿಗಳಿಗೋಸ್ಕರ ತಮ್ಮ ಬಹು ನಿರೀಕ್ಷಿತ ಚಿತ್ರದಿಂದ ಗಿಫ್ಟ್ ನೀಡಿದ್ದಾರೆ.
‘ಕೆಜಿಎಫ್’ ಬಳಿಕ ಪ್ಯಾನ್ ಇಂಡಿಯಾದಲ್ಲಿ ದೊಡ್ಡ ಸ್ಟಾರ್ ಆಗಿ ಗುರುತಿಸಿಕೊಂಡಿರುವ ಯಶ್ ಗೀತು ಮೋಹನ್ ದಾಸ್ (Geetu Mohandas) ಅವರ ‘ಟಾಕ್ಸಿಕ್’ ಸಿನಿಮಾದಲ್ಲಿ ಕಾಣಿಸಿಕೊಳ್ಳಿರುವುದು ಗೊತ್ತೇ ಇದೆ.
ಅನೌನ್ಸ್ ಆದ ದಿನದಿಂದ ‘ಟಾಕ್ಸಿಕ್’ (Toxic Movie) ದೊಡ್ಡದಾಗಿಯೇ ಹೈಪ್ ಕ್ರಿಯೇಟ್ ಮಾಡಿದೆ. ಮುಂಬಯಿ ಸುತ್ತಮುತ್ತಲಿನ ಪ್ರದೇಶದಲ್ಲಿ ಶೂಟಿಂಗ್ ಮುಗಿಸಿರುವ ‘ಟಾಕ್ಸಿಕ್’ ನಿಂದ ಈಗ ಬಿಗ್ ಅಪ್ಡೇಟ್ ಹೊರಬಿದ್ದಿದೆ.
ಯಶ್ ಬರ್ತ್ ಡೇ ದಿನವೇ ‘ಟಾಕ್ಸಿಕ್’ ಚಿತ್ರತಂಡ ಫ್ಯಾನ್ಸ್ ಗಳಿಗೆ ಸಖತ್ ಗಿಫ್ಟ್ ನೀಡಿದೆ. ಟಾಕ್ಸಿಕ್ ಕಡೆಯಿಂದ ಬಂದಿರುವ ಉಡುಗೊರೆ ನೋಡಿ ಫ್ಯಾನ್ಸ್ಗಳು ಥ್ರಿಲ್ ಆಗಿದ್ದಾರೆ.
ಈ ಹಿಂದಿನ ಪೋಸ್ಟರ್ ನಲ್ಲಿ ಕಾರೊಂದರ ಮುಂದೆ ಯಶ್ ಸಿಗರೇಟ್ ಎಳೆಯುತ್ತ, ತಲೆಗೊಂದು ಟೋಪಿ ಹಾಕಿಕೊಂಡು ರೆಟ್ರೋ ಲುಕ್ನಲ್ಲಿ ಕಾಣಿಸಿಕೊಂಡಿದ್ದರು.
ಹಳೆಯ ಕಾರಿನಿಂದ ಇಳಿದು, ಸಿಗರೇಟ್ ಎಳೆಯುತ್ತಾ ಪಾರ್ಟಿ ಕ್ಲಬ್ ವೊಂದಕ್ಕೆ ನಡೆದುಕೊಂಡು ಹೋಗುವ ಲುಕ್ ತೋರಿಸಲಾಗಿದೆ. ಒಂದು ದೊಡ್ಡ ಗ್ಯಾಂಗ್ ಸ್ಟರ್ ಸ್ಟೈಲಿಸ್ಟ್ ಆಗಿ, ಡಾನ್ ನಂತೆ ನಡೆದುಕೊಂಡು ಹೋಗುವುದನ್ನು ತೋರಿಸಲಾಗಿದೆ. ಯಶ್ ಇದುವರೆಗೆ ಕಾಣಿಸಿಕೊಳ್ಳದಿರುವ ಬೋಲ್ಡ್ & ಹ್ಯಾಂಡ್ಸಮ್ ಲುಕ್ನಲ್ಲಿ ಮತ್ತೇರಿಸುವ ಹಾಗೆ ಕಾಣಿಸಿಕೊಂಡಿದ್ದಾರೆ. ಯಶ್ ಅವರ ಕ್ಯಾರೆಕ್ಟರ್ನಲ್ಲಿ ರಿಚ್ & ಬೋಲ್ಡ್ ನೆಸ್ ಎದ್ದು ಕಾಣಿಸುತ್ತದೆ.
ಮೊದಲೇ ಹೇಳಿದಂತೆ ಇದೊಂದು ಹೈ ಆಕ್ಟೇನ್ ಮಾಸ್ ಕಂಟೆಂಟ್ ವುಳ್ಳ ಸಿನಿಮಾವಾಗಿದ್ದು, ಗೋವಾದಲ್ಲಿನ ಡ್ರಗ್ ಕಾರ್ಟೆಲ್ ಸುತ್ತ ʼಟಾಕ್ಸಿಕ್ʼ ಕಥೆ ಸುತ್ತುತ್ತದೆ ಎನ್ನಲಾಗುತ್ತಿದೆ. ಅದರಂತೆ ಯಶ್ ಬರ್ತ್ ಡೇ ಟೀಸರ್ನಲ್ಲೂ ಗಾಂಜಾ, ಗನ್ & ಗರ್ಲ್ಸ್ ಪ್ರಧಾನವಾಗಿ ಕಾಣಿಸುತ್ತಾರೆ.
ಯಶ್ ಲುಕ್ ಬೋಲ್ಡ್ ಆಗಿದ್ದು, ಇದರ ಜತೆ ಬರ್ತ್ ಡೇ ಪೀಕ್ ಟೀಸರ್ ಗೆ ಜೆರೆಮಿ ಸ್ಟಾಕ್ ಕೊಟ್ಟಿರುವ ಬಿಜಿಎಂ ಎಲ್ಲರ ಗಮನ ಸೆಳೆಯುತ್ತದೆ. ಟೀಸರ್ ಫ್ಯಾನ್ಸ್ ಗಳಿಗೆ ಸಖತ್ ಕಿಕ್ ನೀಡುತ್ತಿದೆ.
ಬಾಲಿವುಡ್ನ ಕಿಯಾರಾ ಅಡ್ವಾಣಿ, ಬಹುಭಾಷಾ ನಟಿ ನಯನತಾರಾ , ಅಕ್ಷಯ್ ಓಬೆರಾಯ್, ಹುಮಾ ಖುರೇಷಿ ಸೇರಿದಂತೆ ಹಾಲಿವುಡ್ನ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಮಾನ್ ಸ್ಟರ್ ಮೈಂಡ್ ಕ್ರಿಯೇಷನ್ಸ್ ಚಿತ್ರಕ್ಕೆ ಬಂಡವಾಳ ಹಾಕಿದೆ.