ಆರ್ ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ: ಗೋವಾದಲ್ಲಿ ಕುಗ್ಗಿದ ಪ್ರವಾಸಿಗರ ಸಂಖ್ಯೆ
ಪಣಜಿ: ಕೋವಿಡ್ ಭೀತಿಯ ಹಿನ್ನೆಲೆಯಲ್ಲಿ ಗೋವಾಕ್ಕೆ ಆಗಮಿಸುವ ದೇಶಿಯ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿರುವುದು ಕಂಡುಬರುತ್ತಿದೆ.
ನೆರೆಯ ರಾಜ್ಯಗಳಿಗೆ ತೆರಳಲು ಗಡಿಯಲ್ಲಿ ಆರ್ ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯಗೊಳಿಸಿರುವುದರಿಂದ ಗೋವಾಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗುವಂತಾಗಿದೆ.
ಕಳೆದ ಸುಮಾರು ಎರಡು ವರ್ಷಗಳಿಂದ ಕೋವಿಡ್ ಕಠಿಣ ನಿಯಮಾವಳಿಗಳ ಹಿನ್ನೆಲೆಯಲ್ಲಿ ಗೋವಾದ ಪ್ರವಾಸೋದ್ಯಮ ಸಂಪೂರ್ಣ ನೆಲ ಕಚ್ಚಿದೆ. ಆದರೆ ಕಳೆದ ಕೆಲ ತಿಂಗಳಿಂದ ಗೋವಾಕ್ಕೆ ದೇಶ-ವಿದೇಶಿಯ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಗೋವಾದ ಎಲ್ಲ ಪ್ರವಾಸಿ ತಾಣಗಳು ಭರ್ತಿಯಾಗಿದ್ದವು. ಆದರೆ ಇದೀಗ ಮತ್ತೆ ಗಡಿಯಲ್ಲಿ ಕೋವಿಡ್ ನಿಯಮಾವಳಿಗಳಿಂದಾಗಿ ಪ್ರವಾಸೋದ್ಯಮ ಅವಲಂಭಿತ ಎಲ್ಲ ಉದ್ಯೋಗಗಳ ಮೇಲೆ ಹೊಡೆತ ಬೀಳುವಂತಾಗಿದೆ.
ಯಾವುದೇ ರಾಜ್ಯಗಳಿಂದ ಗೋವಾಕ್ಕೆ ಬರಲು ಕೋವಿಡ್ ಎರಡೂ ಡೋಸ್ ಲಸಿಕೆ ಅಥವಾ ಕೋವಿಡ್ ತಪಾಸಣೆಯ ವರದಿ ಹೊಂದಿದ್ದರೆ ಸಾಕು. ಆದರೆ ಗೋವಾದಿಂದ ಕರ್ನಾಟಕ ಅಥವಾ ಮಹಾರಾಷ್ಟ್ರ ರಾಜ್ಯಗಳಿಗೆ ತೆರಳ ಬೇಕಾದರೆ ಎರಡೂ ಡೋಸ್ ಲಸಿಕೆ ಪೊಡೆದಿದ್ದರೂ ಕೂಡ ಆರ್ ಟಿಪಿಸಿಆರ್ ನೆಗೆಟಿವ್ ವರದಿ ಖಡ್ಡಾಯಗೊಳಿಸಿರುವುದು ಗೋವಾ ಪ್ರವಾಸೋದ್ಯಮದ ಮೇಲೆ ಮತ್ತೆ ಹೊಡೆತ ಬೀಳುವಂತಾಗಿದೆ.