Advertisement

ಇಂದಿನಿಂದ ಭಾರತಕ್ಕೆ ಬರುವವರಿಗೆ ಆರ್‌ಟಿಪಿಸಿಆರ್‌ ಪರೀಕ್ಷೆ ಕಡ್ಡಾಯ

10:14 PM Dec 31, 2022 | Team Udayavani |

ನವದೆಹಲಿ: ಜ.1ರಿಂದ ಚೀನಾ, ಸಿಂಗಾಪುರ, ಹಾಂಕಾಂಗ್‌, ಕೊರಿಯಾ, ಥಾಯ್ಲೆಂಡ್‌ ಮತ್ತು ಜಪಾನ್‌ನಿಂದ ಅಂತಾರಾಷ್ಟ್ರೀಯ ವಿಮಾನಗಳ ಮೂಲಕ ಭಾರತಕ್ಕೆ ಆಗಮಿಸುವ ಪ್ರಯಾಣಿಕರಿಗೆ ಆರ್‌ಟಿಪಿಸಿಆರ್‌ ಪರೀಕ್ಷೆಯ ವರದಿ ಕಡ್ಡಾಯವಾಗಿದೆ.

Advertisement

ಈ ದೇಶಗಳಿಂದ ಬರುವವರು ಪರೀಕ್ಷೆಯ ನೆಗೆಟಿವ್‌ ವರದಿಯ ಬಗ್ಗೆ ಏರ್‌ ಸುವಿಧಾ ಪೋರ್ಟಲ್‌ ಮೂಲಕ ಸ್ವಯಂ ಘೋಷಣೆಯ ಅರ್ಜಿಯನ್ನು ಸಲ್ಲಿಸಿದ ನಂತರವಷ್ಟೇ ಚೆಕ್‌ ಇನ್‌ ಸಮಯದಲ್ಲಿ ಬೋರ್ಡಿಂಗ್‌ ಪಾಸ್‌ ವಿತರಿಸುವಂತೆ ಎಲ್ಲಾ ಏರ್‌ಲೈನ್ಸ್‌ಗಳಿಗೆ ಸೂಚಿಸಲಾಗಿದೆ. ಪ್ರಯಾಣ ಆರಂಭಿಸುವ 72 ಗಂಟೆಗಳ ಒಳಗೆ ಮಾಡಿಸಿರುವ ಆರ್‌ಟಿಪಿಸಿಆರ್‌ ಪರೀಕ್ಷೆ ವರದಿ ಮಾತ್ರ ಮಾನ್ಯವಾಗಲಿದೆ.

ಭಾರತದಂತೆ ಯುಕೆ, ಫ್ರಾನ್ಸ್‌, ಸ್ಪೇನ್‌ ಸರ್ಕಾರಗಳು ಕೂಡ ಚೀನಾದಿಂದ ಆಗಮಿಸುವವರಿಗೆ ಆರ್‌ಟಿಪಿಸಿಆರ್‌ ಪರೀಕ್ಷೆಯ ವರದಿ ಕಡ್ಡಾಯ ಮಾಡಿವೆ. ಇನ್ನೊಂದೆಡೆ, ಕೊರೊನಾ ಪ್ರಕರಣಗಳ ಬಗ್ಗೆ ನೈಜ ವರದಿಯನ್ನು ಪ್ರತಿದಿನ ಬಿಡುಗಡೆ ಮಾಡುವಂತೆ ಚೀನಾಗೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲೂಎಚ್‌ಒ) ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next