Advertisement

TollGate ಕ್ಯೂ 3ನಿಮಿಷಕ್ಕಿಂತ ಜಾಸ್ತಿಯಾದರೆ Toll ಪಾವತಿಸಬೇಕಾಗಿಲ್ಲ!

06:57 PM Jul 18, 2017 | Team Udayavani |

ಈಗ ಎಲ್ಲೆಡೆ ಟೋಲ್‌ ಗೇಟ್‌ಗಳದ್ದೇ ಸುದ್ದಿ. ಅದರಲ್ಲೂ ನೀವು ಲಾಂಗ್‌ ಜರ್ನಿ ಮಾಡುತ್ತಿದ್ದಲ್ಲಿ ಟೋಲ್‌ ಪಾವತಿಸಿ ಸುಸ್ತಾಗಿರುತ್ತೀರಿ. ಟೋಲ್‌ಗಳಲ್ಲಿ ವಾಹನ ಸವಾರರ ಹಣ ಜಾರುವುದು ಮಾತ್ರವಲ್ಲದೇ ಕೆಲವೊಂದು ಸಂದರ್ಭಗಳಲ್ಲಿ ನಿಮ್ಮ ಅಮೂಲ್ಯ ಸಮಯವೂ ಟೋಲ್‌ ಗೇಟ್‌ ಕಾಯುವಿಕೆಯಲ್ಲಿ ವ್ಯರ್ಥವಾಗುತ್ತಿರುತ್ತದೆ. ಹಾಗೆಂದು ನೀವು ಟೋಲ್‌ ತಪ್ಪಿಸಿ ಪ್ರಯಾಣಿಸುವಂತಿಲ್ಲ ಎಂಬುದು ಅಷ್ಟೇ ಸತ್ಯ.

Advertisement

ಆದರೆ ಇಲ್ಲೊಂದು ಸುದ್ದಿ ವಾಹನ ಸವಾರರಿಗೆ ಸ್ವಲ್ಪ ನಿರಾಳತೆಯನ್ನು ತರುವಂತಿದೆ. ಅದೇನೆಂದರೆ, ಒಂದು ವೇಳೆ ಯಾವುದೇ ಒಂದು ಟೋಲ್‌ ಗೇಟ್‌ನಲ್ಲಿ ನೀವು ಶುಲ್ಕ(Toll) ಪಾವತಿಸಲು 3 ನಿಮಿಷಕ್ಕಿಂತ ಹೆಚ್ಚಿನ ಸಮಯವನ್ನು ವ್ಯಯಿಸಿದಿರಿ ಎಂದಾದರೆ ಆ ಟೋಲ್‌ ಗೇಟ್‌ನಲ್ಲಿ ನೀವು ಶುಲ್ಕ ಪಾವತಿಸಬೇಕಾಗಿಲ್ಲ! ಹೌದು, ಇದು ಸತ್ಯ, ಹರಿ ಓಂ ಜಿಂದಾಲ್‌ ಎಂಬ ವಕೀಲರೊಬ್ಬರು ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಅರ್ಜಿ ಸಲ್ಲಿಸಿ ಈ ಮಾಹಿತಿಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಪಡೆದುಕೊಂಡಿದ್ದಾರೆ.

ಅಂದರೆ ಇದರ ಅರ್ಥ, ಯಾವುದೇ ಟೋಲ್‌ ಗೇಟ್‌ಗಳಲ್ಲಿ ಶುಲ್ಕ ಪಾವತಿಸಲು ಯಾವುದೇ ಮಾದರಿಯ ವಾಹನಗಳ ಕಾಯುವಿಕೆಯ ಸಮಯ 3 ನಿಮಿಷಕ್ಕಿಂತ ಹೆಚ್ಚಾಗಿದ್ದಲ್ಲಿ ಅಂತಹ ವಾಹನಗಳು ಸದ್ರಿ ಟೋಲ್‌ ಗೇಟ್‌ನಲ್ಲಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಹರಿಓಂ ಅವರು ಕಳೆದ ವರ್ಷ ಜುಲೈನಲ್ಲಿ ಈ ಕುರಿತಾಗಿ ಹೆದ್ದಾರಿ ಪ್ರಾಧಿಕಾರಕ್ಕೆ RTI ಅಡಿಯಲ್ಲಿ ಅರ್ಜಿಯೊಂದನ್ನು ಸಲ್ಲಿಸಿದ್ದರು ಮತ್ತು ಅವರ ಈ ಪ್ರಶ್ನೆಗಳಿಗೆ ಪ್ರಾಧಿಕಾರವು ಆಗಸ್ಟ್‌ 29ರಂದು ಲಿಖೀತ ರೂಪದಲ್ಲಿ ಪ್ರತಿಕ್ರಿಯೆಯನ್ನು ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next