Advertisement

ಶಾಶ್ವತ ಕುಡಿಯುವ ನೀರು ಮುಖ್ಯ ಗುರಿ: ಖಾದರ್ 

12:41 PM Nov 03, 2018 | Team Udayavani |

ಮಂಜನಾಡಿ: ಶಾಶ್ವತ ಕುಡಿಯುವ ನೀರಿನ ಯೋಜನೆ ತನ್ನ ಕ್ಷೇತ್ರಕ್ಕೆ ಒದಗಿಸುವುದು ಬಹುಮುಖ್ಯ ಗುರಿಯಾಗಿದೆ. ಈ ನಿಟ್ಟಿನಲ್ಲಿ 170 ಕೋಟಿ ರೂ. ಅನುದಾನವನ್ನು ಬಿಡುಗಡೆಗೊಳಿಸುವ ಎಲ್ಲ ಪ್ರಕ್ರಿಯೆಗಳು ನಡೆದಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಅಭಿಪ್ರಾಯಪಟ್ಟರು. ಅವರು ಮಂಜನಾಡಿ ಗ್ರಾಮ ಪಂಚಾಯತ್‌ನ ದಿ| ಯು.ಟಿ. ಫರೀದ್‌ ಸಭಾಂಗಣದಲ್ಲಿ ಗ್ರಾಮಸ್ಥರಿಗೆ ಹಕ್ಕು ಪತ್ರ ವಿತರಿಸಿ ಮಾತನಾಡಿದರು.

Advertisement

ಮಂಜನಾಡಿ ಗ್ರಾಮದ 800 ಮನೆಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಒಂದು ಮನೆಯಲ್ಲಿ ನಾಲ್ವರಂತೆ 2,400 ಮಂದಿಗೆ ಸ್ವಾಭಿಮಾನದ ಬದುಕು ನೀಡುವ ಕೆಲಸ ಸರಕಾರದಿಂದ ಆಗಿದೆ. ಕುಮಾರಸ್ವಾಮಿ ಸರಕಾರವೂ ಹಿಂದಿನ ಸರಕಾರದ ಕಾರ್ಯಕ್ರಮಗಳನ್ನು ಮುಂದುವರಿಸುತ್ತಾ ಬರುತ್ತಿದೆ. ಸರಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯುವಂತಹ ಕೆಲಸ ಜನರಿಂದ ಆಗಬೇಕಿದೆ. ನೇತ್ರಾವತಿಯಲ್ಲಿ ನೀರಿನ ಕೊರತೆಯಾದರೂ, ಅಣೆಕಟ್ಟು ನಿರ್ಮಾಣದ ಮೂಲಕ ಅದು ಬಗೆ ಹರಿಯಲಿದೆ. ಈ ಮೂಲಕ 30 ವರ್ಷಕ್ಕೆ ಕುಡಿಯುವ ನೀರಿಗಾಗಿ ಯಾವುದೇ ರೀತಿಯ ತೊಂದರೆಯಾಗದು ಎಂದರು.

ಸಚಿವರ ಕೊಡುಗೆ ಅಪಾರ
ತಾ.ಪಂ. ಅಧ್ಯಕ್ಷ ಮಹಮ್ಮದ್‌ ಮೋನು ಮಲಾರ್‌ ಮಾತನಾಡಿ, ಎರಡು ಹೈಸ್ಕೂಲ್‌ ಇರುವ ಏಕೈಕ ಗ್ರಾಮ ಮಂಜನಾಡಿಯಾಗಿದೆ. ಅಭಿವೃದ್ಧಿಯಲ್ಲಿ ಈ  ಪಂಚಾಯತ್‌ ಮುಂಚೂಣಿಯಲ್ಲಿದ್ದು, ಇದಕ್ಕೆ ಸಚಿವರ ಕೊಡುಗೆ ಅಪಾರ ಎಂದರು.

ಸುಸಜ್ಜಿತ ಸಭಾಂಗಣ
ಮಂಜನಾಡಿ ಗ್ರಾ.ಪಂ. ಅಧ್ಯಕ್ಷ ಮಹಮ್ಮದ್‌ ಅಸೈ ಅಧ್ಯಕ್ಷತೆ ವಹಿಸಿ, ಒಂದೂವರೆ ಕೋಟಿ ರೂ.ಅನುದಾನ ಒದಗಿಸುವ ಮೂಲಕ ಸುಸಜ್ಜಿತ ಸಭಾಂಗಣ ನಿರ್ಮಾಣ ಸಾಧ್ಯವಾಗಿದೆ. ಇನ್ನೂ ಹಲವರಿಗೆ ಹಕ್ಕುಪತ್ರ ನೀಡಲು ಬಾಕಿಯಿದ್ದು, ಸಚಿವರು ಹೆಚ್ಚಿನ ಮುತುವರ್ಜಿವಹಿಸಿ ಅದನ್ನು ಈಡೇರಿಸಬೇಕು ಎಂದರು.

ತಾಲೂಕು ಪಂಚಾಯತ್‌ ಅಧ್ಯಕ್ಷ ಮಹಮ್ಮದ್‌ ಮೋನು, ಜಿ.ಪಂ. ಮಾಜಿ ಸದಸ್ಯ ಎನ್‌.ಎಸ್‌.ಕರೀಂ, ತಾ.ಪಂ. ಸದಸ್ಯೆ ಸುರೇಖಾ ಚಂದ್ರಹಾಸ್‌, ಉಪಾಧ್ಯಕ್ಷೆ ಮರಿಯಮ್ಮ, ತಾಲೂಕು ಪಂಚಾಯತ್‌ ಮಾಜಿ ಸದಸ್ಯ ನಕ್ಕರೆ ಬಾವು, ತಾ.ಪಂ. ಸದಸ್ಯ ಜಬ್ಟಾರ್‌ ಬೋಳಿಯಾರ್‌, ಕಿನ್ಯಾ ಗ್ರಾ.ಪಂ. ಅಧ್ಯಕ್ಷ ಸಿರಾಜ್‌ ಕಿನ್ಯಾ, ಪಂ. ಸದಸ್ಯರಾದ ಅಬ್ಟಾಸ್‌ ಬಾವು, ಅಶ್ರಫ್‌ ಕೆ.ಪಿ., ಇಲ್ಯಾಸ್‌, ಗೀತಾ ನಾಯಕ್‌, ಪ್ರೇಮಾ, ನಳಿನಾಕ್ಷಿ, ಮಾಲತಿ, ಇಸ್ಮಾಯಿಲ್‌ ಬಾವು, ಅಬ್ದುಲ್‌ ಖಾದರ್‌ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ಇಸ್ಮಾಯಿಲ್‌ ದೊಡ್ಡಮನೆ ಸ್ವಾಗತಿಸಿದರು. ಪಿಡಿಒ ಮಂಜಪ್ಪ ಎಚ್‌. ವಂದಿಸಿದರು.

Advertisement

ಸಮ್ಮಾನ 
ಈ ಸಂದರ್ಭದಲ್ಲಿ ಸಚಿವ ಯು.ಟಿ ಖಾದರ್‌, ಮಂಜನಾಡಿ ಗ್ರಾ.ಪಂ.ಅಧ್ಯಕ್ಷ ಮೊಹಮ್ಮದ್‌ ಅಸೈ ಮತ್ತು ಮಾಜಿ. ಜಿ.ಪಂ. ಸದಸ್ಯ ಎನ್‌.ಎಸ್‌. ಕರೀಂ ಅವರನ್ನು ಸಮ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next