Advertisement

ಜಮಾತ್‌ನಿಂದ ಕೋವಿಡ್ 19 ವೈರಸ್ ಹರಡುವಿಕೆ ಪ್ರಮಾಣ ದ್ವಿಗುಣ ಸಾಬೀತು: ವೈದ್ಯ

03:34 PM Apr 07, 2020 | Hari Prasad |

ದೇಶದಲ್ಲಿ ಕೋವಿಡ್ 19 ವೈರಸ್ ಹರಡುವಿಕೆಗೂ ದಿಲ್ಲಿಯಲ್ಲಿ ನಡೆದ ತಬ್ಲೀಘಿ -ಎ- ಜಮಾತ್‌ ಸಂಘಟನೆಗೂ ಏನು ಸಂಬಂಧವಿದೆ ಎಂಬುದನ್ನು ಅಂಕಿ-ಅಂಶಗಳೇ ಸಾಬೀತುಪಡಿಸಿವೆ ಎಂದು ಆರ್‌ಎಸ್‌ಎಸ್‌ ಮಹಾ ಕಾರ್ಯದರ್ಶಿ ಮನಮೋಹನ್‌ ವೈದ್ಯ ತಿಳಿಸಿದ್ದಾರೆ.

Advertisement

ಹೊಸದಿಲ್ಲಿಯಲ್ಲಿ ಮಾತನಾಡಿದ ಅವರು ‘ದೇಶದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಕೇವಲ 4.1 ದಿನಗಳಲ್ಲೇ ದುಪ್ಪಟ್ಟು ಆಗಿದೆ. ಜಮಾತ್‌ ಸಮಾವೇಶ ನಡೆಯದೇ ಇದ್ದಿದ್ದರೆ ಇವುಗಳ ಸಂಖ್ಯೆ ಹೆಚ್ಚಾಗಲು ಕನಿಷ್ಠ 7.4 ದಿನಗಳಾದರೂ ಕಾಯಬೇಕಿತ್ತು. ಆದರೆ ಸಮಾವೇಶದಿಂದಾಗಿ ಸೋಂಕು ಬೇಗನೇ ದುಪ್ಪಟ್ಟಾಗಿದೆ.

ಇದನ್ನು ಮುಸ್ಲಿಂ ಸಮುದಾಯದವರೇ ಒಪ್ಪಿದ್ದಾರೆ ಹಾಗೂ ತಬ್ಲೀಘಿ ಸಮಾವೇಶವನ್ನು ಟೀಕಿಸಿದ್ದಾರೆ ಎಂದರು. ನಮ್ಮ ಸಂಘಟನೆಯ (ಆರ್‌ಎಸ್‌ಎಸ್‌) ಆಡಳಿತ ಮಂಡಳಿಯ ಸಭೆಯಾದ ಪ್ರಾತಿನಿಧಿಕ್‌ ಸಭಾವನ್ನೇ ಮುನ್ನೆಚ್ಚರಿಕೆ ಕ್ರಮವಾಗಿ ರದ್ದುಗೊಳಿಸಿದೆವು. ಇದನ್ನು ತಬ್ಲಿಘಿ -ಎ-ಜಮಾತ್‌ ಕೂಡ ಮಾಡಬೇಕಿತ್ತು ಎಂದು ವೈದ್ಯ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next