Advertisement
ಇದನ್ನೂ ಓದಿ:ಫೆಬ್ರವರಿ ಮೊದಲ ವಾರದಲ್ಲಿ ಸೋಂಕು ಹೆಚ್ಚಾಗುತ್ತದೆ, ಆದರೆ ಲಾಕ್ ಡೌನ್ ಮಾಡಲ್ಲ: ಸಚಿವ ಸುಧಾಕರ್
Related Articles
Advertisement
ಆದರೆ, ತನ್ನ ಕಕ್ಷೆಯಲ್ಲೇ ಸುತ್ತುತ್ತಿರುತ್ತಾನೆ. ಹಾಗೆ ಸೂರ್ಯನು ಸದಾ ಪ್ರಖರವಾಗಿ ಪ್ರಕಾಶಿಸುತ್ತಾನೆ. ತನ್ನ ನಿತ್ಯದ ಕಾರ್ಯವನ್ನು ಎಂದೂ ನಿಲ್ಲಿಸುವುದಿಲ್ಲ. ಅದೇ ರೀತಿಯಾಗಿ ಸಂಘದ ಸ್ವಯಂ ಸೇವಕರು ತಮ್ಮ ಸಾಧನೆಯನ್ನು ನಿಯಮಿತವಾಗಿ ಮಾಡುತ್ತಲೇ ಇರಬೇಕು. ಹಿಂದೂ ಧರ್ಮ ಸದಾ ಪ್ರಕಾಶಿಸುವಂತೆ ಇರಬೇಕು. ಯಾವುದೇ ಕಾರ್ಯವನ್ನು ಆರಂಭಿಸಿದರೂ ಅದನ್ನು ಪೂರ್ಣಗೊಳಿಸುವವರೆಗೂ ನಿಲ್ಲಿಸಬಾರದು ಎಂದರು.
ಈ ಹಿಂದೆ ಸಂಘದ ಕುರಿತು ಉತ್ಪ್ರೇಕ್ಷೆ ಮಾತುಗಳು ಮತ್ತು ಅಪಪ್ರಚಾರ ಕೇಳಿ ಬರುತ್ತಿತ್ತು. ಆದರೆ, ತನ್ನ ಗುರಿಯತ್ತ ಸಂಘ ಸಾಗುತ್ತಲೇ ಇದೆ. ಹಿಂದೂ ಧರ್ಮ, ಸಂಸ್ಕೃತಿ ರಕ್ಷಣೆಗೆ ಯೋಗ್ಯರಾಗಿ ಸ್ವಯಂ ಸೇವಕರು ತಮ್ಮ ಕರ್ತವ್ಯದಲ್ಲಿ ತೊಡಗಿದ್ದಾರೆ. ಅದರಲ್ಲೂ, 2018ರಿಂದ ಈಚೆಗೆ ಸಂಘಕ್ಕೆಸೇರುವವರ ಸಂಖ್ಯೆ ಅಧಿಕವಾಗಿದೆ ಎಂದರು. ನಿರ್ದಿಷ್ಟ ಸಮಯ ಕೊಡಿ: ಯುವಕರು ತಮಗೆ ಎಷ್ಟು ಸಾಧ್ಯವೋ, ಎಲ್ಲಿಯವರೆಗೆ ಸಾಧ್ಯವೋ ಅಷ್ಟು ವಿದ್ಯಾಭ್ಯಾಸ ಮಾಡಿ. ನಂತರ ದಿನದ 24 ಗಂಟೆಯಲ್ಲಿ ಕನಿಷ್ಟ ಎಂಟು ಗಂಟೆಗಳನ್ನು ದೇಶ ಸೇವೆಗೆ ಸಮಯ ಮೀಸಲಿಡಬೇಕು. ಯುವಕರು ಶಾಖೆಯನ್ನು ಸೇರಿ ಕೆಲಸ ಮಾಡಬೇಕು. ಪ್ರತಿಯೊಬ್ಬರು ಸ್ವಯಂ ಕಾರ್ಯಶೀಲರಾಗಬೇಕು ಎಂದರು.ಆರ್‌ಎಸ್‌ಎಸ್‌ನ ಉತ್ತರ ಪ್ರಾಂತ ಪ್ರಮುಖ ಪಿ.ಖಗೇಶನ್, ಅರವಿಂದರಾವ್ ದೇಶಪಾಂಡೆ ಇದ್ದರು. ಮುಖ್ಯ ಕಾರ್ಯಕ್ರಮ ನಡೆದ ಖಮಿತಕರ್ ಕಲ್ಯಾಣ ಮಂಟಪ ಸೇರಿದಂತೆ 11 ಕಡೆಗಳಲ್ಲಿ ಸ್ವಯಂ ಸೇವಕರು ಆನ್‌ಲೈನ್ ಮೂಲಕ ಮೋಹನ ಭಾಗವತ್ ಅವರ ಮಾತುಗಳನ್ನು ಆಲಿಸಿದರು.