ಹೊಸದಿಲ್ಲಿ : ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಇತರ ಆರು ಮಂದಿ ರಾಷ್ಟ್ರೀಯ ಪದಾಧಿಕಾರಿಗಳು ಇಂದು ಟ್ವಿಟರ್ ಸಾಮಾಜಿಕ ಜಾಲ ತಾಣಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಟ್ವಿಟರ್ ಸೇರಿರುವ ಇತರ ಆರು ಆರ್‌ಎಸ್‌ಎಸ್ ನಾಯಕರೆಂದರೆ ಸುರೇಶ್ ಜೋಷಿ, ಕೃಷ್ಣ ಗೋಪಾಲ್, ವಿ ಭಗಯ್ಯ, ಅರುಣ್‌ಕುಮಾರ್ ಮತ್ತು ಅನಿರುದ್ಧ ದೇಶಪಾಂಡೆ.
ಹಾಗಿದ್ದರೂ ಟ್ವಿಟರ್‌ಸೇರಿರುವ ಆರ್‌ಎಸ್‌ಎಸ್‌ನ ಈ ಯಾವುದೇ ನಾಯಕರು ಈಗಿನ್ನೂ ಯಾವುದೇ ಟ್ವೀಟ್ ಮಾಡಲು ಆರಂಭಿಸಿಲ್ಲ.
ಈ ವರದಿಯನ್ನು ಬರೆಯಲಾದ ಹೊತ್ತಿಗೆ ಭಾಗವತ್ ಅವರು ಟ್ವಿಟರ್ ಸೇರಿದ ಬೆನ್ನಿಗೇ ನಾಲ್ಕು ಸಾವಿರ ಹಿಂಬಾಲಕರನ್ನು ಪಡೆದುಕೊಂಡಿದ್ದಾರೆ.
ಆರ್‌ಎಸ್‌ಎಸ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್ 13 ಲಕ್ಷ ಹಿಂಬಾಲಕರನ್ನು ಹೊಂದಿದೆ. ಆರ್‌ಎಸ್‌ಎಸ್ ತನ್ನ ಯೋಜನೆ, ಚಿಂತನೆ, ಮಾಹಿತಿ ಇತ್ಯಾದಿಗಳ ಪ್ರಸರಣಕ್ಕೆ ಟ್ವಿಟರ್ ವೇದಿಕೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದೆ.