Advertisement

ಕುಕ್ಕೆ ದೇಗುಲದ ಆದಾಯ 98.92 ಕೋ. ರೂ.

10:26 AM May 23, 2020 | mahesh |

ಸುಬ್ರಹ್ಮಣ್ಯ: ಲಾಕ್‌ಡೌನ್‌ನಿಂದ ದೇವಸ್ಥಾನಗಳ ಆದಾಯಕ್ಕೆ ಹೊಡೆತ ಬಿದ್ದಿದ್ದರೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ 2019-20ರ ಪ್ರಸಕ್ತ ಸಾಲಿನಲ್ಲಿ 98.92 ಕೋಟಿ ರೂ. ಆದಾಯ ಗಳಿಸಿದೆ.

Advertisement

ಹೆಚ್ಚು ಆದಾಯ ಹೊಂದಿದ ರಾಜ್ಯದ ನಂಬರ್‌ ವನ್‌ ದೇಗುಲ ಈಗಲೂ ಕುಕ್ಕೆ ದೇಗುಲಕ್ಕೆ ಇದೆ. ದೇವಸ್ಥಾನದ ಸ್ಥಳೀಯ ಮೂಲಗಳು ನೀಡಿರುವ ಆದಾಯದ ಪ್ರಕಾರ ಈ ಬಾರಿ ದೇವಸ್ಥಾನದ ಆದಾಯ 98,92,24,193.34 ಲಕ್ಷ ಮೀರಿದೆ. 2019ರ ಎಪ್ರಿಲ್‌ನಿಂದ 2020 ಮಾರ್ಚ್‌ 31ರ ತನಕದ ಆರ್ಥಿಕ ವರ್ಷದಲ್ಲಿ ದೇವಸ್ಥಾನಕ್ಕೆ ಇಷ್ಟು ಆದಾಯ ಬಂದಿದೆ. ಮುಖ್ಯ ಆದಾಯ ಮೂಲ ಹರಕೆ ಸೇವೆ, ಕಾಣಿಕೆ ಡಬ್ಬಿ, ಬಡ್ಡಿ, ಛತ್ರಗಳ ಬಾಡಿಗೆ, ಕಟ್ಟಡಗಳ ಬಾಡಿಗೆ ಮತ್ತು ಕೃಷಿ.

ಹಿಂದಿನ ವರ್ಷ ಮುಜರಾಯಿ ಇಲಾಖೆ ಬಿಡುಗಡೆ ಮಾಡಿದ ಅಧಿಕ ಆದಾಯದ ರಾಜ್ಯದ ಟಾಪ್‌ 10 ದೇವಸ್ಥಾನಗಳಲ್ಲಿ ಕುಕ್ಕೆ ದೇಗುಲದ ಆದಾಯ 100 ಕೋ.ರೂ. ಎಂದು ಘೋಷಿಸಲಾಗಿತ್ತು. ಎರಡನೇ ಸ್ಥಾನದಲ್ಲಿ 90-92 ಕೋ.ರೂ. ಆದಾಯ ಪಡೆದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವಿತ್ತು. ಅನಂತರದ ಸ್ಥಾನಗಳಲ್ಲಿ ಕ್ರಮವಾಗಿ ಕಟೀಲು ದುರ್ಗಾಪರಮೇಶ್ವರೀ, ಮೈಸೂರು ಚಾಮುಂಡೇಶ್ವರೀ, ನಂಜನಗೂಡು ಶ್ರೀ ಕಂಠೇಶ್ವರ, ಬೆಳಗಾವಿಯ ಸವದತ್ತಿ ಯಲ್ಲಮ್ಮ ದೇವಸ್ಥಾನ, ಮಂದಾರ್ತಿ ದೇವಸ್ಥಾನ ಕೊಪ್ಪಳದ ಗುಳ್ಳಮ್ಮನ ದೇವಸ್ಥಾನ, ಬೆಂಗಳೂರಿನ ಬನಶಂಕರಿ ದೇವಸ್ಥಾನಗಳು ಸ್ಥಾನ ಪಡೆದಿದ್ದವು. ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಹತ್ತನೇ ಸ್ಥಾನ ಪಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next