Advertisement
ತಾಲೂಕಿನ ಉಪ್ಪಾರಹಳ್ಳಿಯಲ್ಲಿ ಬೆಳೆಗಾರರ ತೋಟಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ, ತಾಲೂಕಾದ್ಯಂತ ಅಂದಾಜು 4 ಸಾವಿರ ಎಕರೆ ಪ್ರದೇಶದಲ್ಲಿ ಗುಲಾಬಿ ಬೆಳೆಯಲಾಗುತ್ತದೆ. ಲಾಕ್‌ಡೌನ್ ಘೋಷಣೆ ನಂತರ ವಿವಾಹದಂತಹ ಶುಭ ಸಮಾರಂಭಗಳ ರದ್ದು, ಹಬ್ಬಗಳ ಸರಳ ಆಚರಣೆ, ದೇವಾಲಯಗಳಲ್ಲಿ ಪೂಜೆ ಇಲ್ಲದಿರುವುದು. ಹೊರರಾಜ್ಯಗಳಿಗೆ ಕಳುಹಿಸಲು ವಾಹನಗಳ ಸಂಚಾರ ನಿಷೇಧಿಸಿರುವ ಕಾರಣ ಹೂವಿಗೆ ಬೇಡಿಕೆ ಕುಸಿದಿದ್ದು, ಬೆಳೆಗಾರರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರೈತರು ಕಂಗಾಲಾಗದೆಆತ್ಮವಿಶ್ವಾಸ ಹೊಂದಲು ಹಾಗೂ ಸಮಸ್ಯೆಗಳ ಬಗ್ಗೆ ಸಮರ್ಪಕವಾದ ಮಾಹಿತಿ ಪಡೆಯುವ ಸಲುವಾಗಿ ತೋಟಗಳಿಗೆ ಭೇಟಿ ನೀಡಲಾಗುತ್ತಿದೆ. ಅಧಿಕಾರಿಗಳು ರೈತರು ಬೆಳೆಗಳು ಹಾಳಾಗದಂತೆ ರಕ್ಷಣೆ, ಪೋಷಣೆಗೆ ಬಗ್ಗೆ ಸೂಕ್ತ ಮಾಹಿತಿ ನೀಡಿ ಸರಕಾರದ ಯೋಜನೆ ಗಳನ್ವಯ ಸವಲತ್ತು ಪಡೆಯಬೇಕು. ತರಕಾರಿ, ಹಣ್ಣು, ಹೂ ಬೆಳೆಗಾರರಿಗೆ ಉಂಟಾಗಿರುವ ಸಮಸ್ಯೆ ಬಗ್ಗೆ ತೋಟಗಾರಿಕೆ ಸಚಿವರ ಗಮನಕ್ಕೆ ತಂದು ಪರಿಹರಿಸಲು ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದು ಬಚ್ಚೇಗೌಡರು ಭರವಸೆ ನೀಡಿದರು.